ಜಗತ್ ಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆಯನ್ನು ಈ ವರ್ಷವೂ ಕರೊನಾ ಕಾರಣದಿಂದ ಕೇವಲ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲವಾದರೂ, ಧಾರ್ವಿುಕ ಆಚರಣೆಗೆ ಚ್ಯುತಿ ಬರದಂತೆ ಕೆಲವೇ ಜನರ ಸಮ್ಮುಖದಲ್ಲಿ ಇಂದು (ಸೋಮವಾರ) ರಥೋತ್ಸವ ನಡೆಯಲಿದ್ದು, ಜು.20ರಂದು ಸಂಪನ್ನಗೊಳ್ಳಲಿದೆ. ಪ್ರತಿ ವರ್ಷ ಹೊಸ ರಥಗಳ ನಿರ್ವಣ, 12 ವರ್ಷಕ್ಕೊಮ್ಮೆ ಹೊಸ ಮೂರ್ತಿಗಳ ನಿರ್ವಣ, ಅದಕ್ಕಾಗಿ ಮರ-ಕಟ್ಟಿಗೆಗಳ ಹುಡುಕಾಟ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಕ್ಷೇತ್ರ ಭಕ್ತರ ಪಾಲಿಗೆ ಸದಾ ಪೂಜನೀಯ. ಪುರಿಯಲ್ಲಿ ಮಾತ್ರವಲ್ಲದೆ ಒಡಿಶಾದ ಸಣ್ಣ ಸಣ್ಣ ಗ್ರಾಮಗಳಲ್ಲೂ ಜಗನ್ನಾಥನ ದೇವಸ್ಥಾನಗಳಿದ್ದು, ಅಲ್ಲೂ ರಥೋತ್ಸವ ನಡೆಸಲಾಗುತ್ತದೆ.
ವರ್ಷದ ಎಲ್ಲ ದಿನಗಳಲ್ಲಿ ಭಕ್ತರು ಜಗನ್ನಾಥನನ್ನು ಕಾಣಲು ಮಂದಿರಕ್ಕೆ ಬಂದರೆ ರಥೋತ್ಸವದ ಸಂದರ್ಭದಲ್ಲಿ ಆ ಕಾನ್ಹಾ ತನ್ನ ಭಕ್ತರೆಡೆಗೆ ಬರುತ್ತಾನೆ. ‘ಸಬ್ ಮನಿಸಾ ಮೋರ ಪರಜಾ’ (ಎಲ್ಲ ಮನುಷ್ಯರು ನನ್ನ ಪ್ರಜೆಗಳು) ಎಂದು ಹೇಳಿ ಅವರ ಹೃದಯಸಿಂಹಾಸನದಲ್ಲಿ ವಿರಾಜಮಾನನಾಗುತ್ತಾನೆ. ಶಾಸ್ತ್ರಗಳು ಕೂಡ ಇಲ್ಲಿನ ರಥಯಾತ್ರೆಯ ವರ್ಣನೆಯನ್ನು ಮಾಡಿದ್ದು, ಮಹತ್ವವನ್ನೂ ವಿವರಿಸಿವೆ. ರಥಯಾತ್ರೆಯಲ್ಲಿ ಯಾರು ಜಗನ್ನಾಥನ ನಾಮಸ್ಮರಣೆ ಮಾಡುತ್ತ ಗುಂಡಿಚಾ ನಗರದವರೆಗೆ ಸಾಗುತ್ತಾರೋ ಅವರು ಮೋಕ್ಷ ಪಡೆಯುತ್ತಾರೆ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಗುಂಡಿಚಾ ಮಂಟಪದಲ್ಲಿ ವಿರಾಜಮಾನರಾಗುವ ಜಗನ್ನಾಥ, ಬಲಭದ್ರ, ಸುಭದ್ರಾ ಮೂರ್ತಿಗಳ ದರ್ಶನ ಮಾತ್ರದಿಂದಲೂ ಮೋಕ್ಷ ಪ್ರಾಪ್ತವಾಗುತ್ತದೆ ಎನ್ನಲಾಗಿದೆ. ಪಾಂಡವರು ತಮ್ಮ ಅಜ್ಞಾತವಾಸದ ವೇಳೆ ಜಗನ್ನಾಥನನ್ನು ಪೂಜಿಸಲು ಪುರಿಗೆ ಬಂದಿದ್ದರು ಎಂಬ ಉಲ್ಲೇಖವೂ ಇದೆ. ಇದೇ ನೆನಪಿಗಾಗಿ ಕ್ಷೇತ್ರದಲ್ಲಿ ಪಾಂಡವರ ಮಂದಿರ ನಿರ್ವಿುಸಲಾಗಿದೆ. ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯಾದಿಂದ ಆಷಾಢ ಶುಕ್ಲ ದಶಮಿಯವರೆಗೆ ರಥೋತ್ಸವ ನಡೆಯುತ್ತದೆ. ಮುಂದೆ ಬಲಭದ್ರ (ತಲಧ್ವಜ ರಥ) ಹಿಂದೆ ಜಗನ್ನಾಥ (ನಂದಿಘೊಷ ರಥ)ನ ರಕ್ಷಣೆಯಲ್ಲಿ ಮಧ್ಯದಲ್ಲಿ ಸುಭದ್ರಾ (ದರ್ಪದಲನ ರಥ) ರಥಯಾತ್ರೆ ಸಾಗುತ್ತದೆ. ರಥಯಾತ್ರೆಯ ಮರುದಿನ ಜಗನ್ನಾಥ ಗುಂಡಿಚಾ ಮಂದಿರ ತಲುಪುತ್ತಾನೆ. ಮುಂದಿನ 9 ದಿನಗಳ ಕಾಲ ಈ ಮಂದಿರದಲ್ಲಿ ನಡೆಯುವ ಜಗನ್ನಾಥ ದರ್ಶನವನ್ನು ‘ಆಡಪ್ ದರ್ಶನ್’ ಎನ್ನುತ್ತಾರೆ.
ನಾಲ್ಕು ಧಾಮಗಳಲ್ಲಿ ಒಂದು:ಪುರಿ ವೈಷ್ಣವರ ನಾಲ್ಕು ಧಾಮಗಳಲ್ಲಿ ಒಂದು. ಜಗನ್ನಾಥನು ಬದ್ರಿನಾಥದಲ್ಲಿ ಸ್ನಾನ ಮಾಡಿ, ದ್ವಾರಕಾದಲ್ಲಿ ವಸ್ತ್ರ ಹಾಕಿಕೊಳ್ಳುತ್ತಾನೆ. ಪುರಿಯಲ್ಲಿ ಆಹಾರ ಸೇವಿಸಿ ರಾಮೇಶ್ವರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಹೀಗೆ ಈ ನಾಲ್ಕುಧಾಮಗಳ ಪೈಕಿ ಪುರಿಯಲ್ಲಿ ಸಾಕ್ಷಾತ್ ಭಗವಂತ ಆಹಾರ ಸ್ವೀಕರಿಸುವುದರಿಂದ ಈ ಕ್ಷೇತ್ರಕ್ಕೆ ಭಾರಿ ಮಹತ್ವ ಬಂದಿದ್ದು, ಪ್ರಸಾದಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ. ಇಂದಿಗೂ ಪುರಿಯ ಪ್ರಸಾದಗೃಹದಲ್ಲಿ ದಿನನಿತ್ಯ ಸಾವಿರಾರು ಜನರು ಭೋಜನ ಸ್ವೀಕರಿಸುತ್ತಾರೆ. ಪುರಿಯನ್ನು ಪುರುಷೋತ್ತಮ ಕ್ಷೇತ್ರ, ನೀಲಗಿರಿ, ನೀಲಾಂಚಲ, ಉತ್ಕಲದೇಶವೆಂದು ಕರೆಯಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
