ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭ ದಲ್ಲಿ ಭಾರತ-ಪಾಕ್ ನಡುವಿನ 1971ರ ಬಾಂಗ್ಲಾ ವಿಮೋಚನಾ ಯುದ್ಧದ 50ನೇ ವರ್ಷಾಚರಣೆಯೂ ನಡೆಯುತ್ತಿದೆ. ಈ ಯುದ್ಧ ದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಮಹತ್ವದ ಪಾತ್ರ ನಿರ್ವಹಿಸಿತ್ತು. ಇಂದು 89ನೇ ವಾಯುಪಡೆ ದಿನಾಚರಣೆ. ಹೀಗಾಗಿ ಈ ಸಲದ ದಿನಾಚರಣೆ ‘ಸ್ವರ್ಣಿಮ್ ವಿಜಯ ವರ್ಷ’ ಎಂದು ವಾಯುಪಡೆ ಘೋಷಿಸಿದೆ.
ಉತ್ತರಪ್ರದೇಶದ ಗಾಜಿಯಾಬಾದ್​ನ ಹಿಂಡನ್ ವಾಯುನೆಲೆ ಇಂದು ‘ಸ್ವರ್ಣಿಮ್ ವಿಜಯ ವರ್ಷ’ ಆಚರಿಸಲು ಸಜ್ಜಾಗಿದೆ. ಭಾರತೀಯ ವಾಯುಪಡೆ ಬುಧವಾರವೇ ಈ ವಾಯುನೆಲೆಯಲ್ಲಿ 89ನೇ ವಾಯುಪಡೆ ದಿನ ಆಚರಿಸುವುದಕ್ಕೆ ಪೂರ್ವಭಾವಿಯಾಗಿ ಪೂರ್ಣಪ್ರಮಾಣದ ಕವಾಯತು ನಡೆಸಿತ್ತು. ಸಿಂಗಲ್ ಸೀಟ್ ಇಂಟರ್​ಸೆಪ್ಟರ್ ಮತ್ತು ಏರ್ ಡಿಫೆನ್ಸ್/ಗ್ರೌಂಡ್ ಅಟ್ಯಾಕ್ ಜಿನ್ಯಾಟ್ ಏರ್​ಕ್ರಾಫ್ಟ್ ಸೇರಿ ಅತ್ಯಾಧುನಿಕ ಯುದ್ಧೋಪಕರಣಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ವಾಯುಪಡೆ ದಿನಾಚರಣೆ ನಿಮಿತ್ತ ಹಿಂಡನ್ ವಾಯುನೆಲೆಯಲ್ಲಿ ಬೆಳಗ್ಗೆ 8ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಎಎನ್ 32 ವಿಮಾನದಿಂದ ಆಕಾಶ ಗಂಗಾ ತಂಡದ ಸ್ಕೈ ಡೈವರ್​ಗಳು ಧ್ವಜದೊಂದಿಗೆ ಕೆಳಕ್ಕೆ ಜಿಗಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಸಮರ ವಿಮಾನಗಳ ಕಸರತ್ತು ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 10.52ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಮರ ವಿಮಾನಗಳ ವೈಮಾನಿಕ ಪ್ರದರ್ಶನ:ಹೊಸ ರಫೇಲ್ ಜೆಟ್​ಗಳು, ಸುಖೋಯಿ-30 ಎಂಕೆಐ, ಲೈಟ್ ಕಾಂಬಾಟ್ ಏರ್​ಕ್ರಾಫ್ಟ್ ತೇಜಸ್, ಮಿರಾಜ್-2000, ಮಿಗ್-29, ಜಾಗ್ವಾರ್ ಮತ್ತು ಇತರೆ ಸಮರ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಫ್ಲೈಪಾಸ್ಟ್ ಪ್ರದರ್ಶನದಲ್ಲಿ ಹೆಲಿಕಾಪ್ಟರ್ ಪಡೆ ಮಿಲ್7-ವಿ5 ಕಾಪ್ಟರ್​ಗಳು, ಧ್ರುವ, ಚಿನೂಕ್, ಎಂಐ-35, ಅಪಾಚೆ ಕಾಪ್ಟರ್​ಗಳು, ಸಿ-17 ಗ್ಲೋಬ್​ವಾಸ್ಟರ್ಸ್, ಡೋರ್​ನಿಯರ್, ಡಕೋಟಾ ಏರ್​ಕ್ರಾಫ್ಟ್​ಗಳು ಪ್ರದರ್ಶನ ನೀಡಲಿವೆ. ಸೂರ್ಯಕಿರಣ ಏರೋಬೇಟಿಕ್ ತಂಡ, ಸಾರಂಗ್ ಏರೋಬೇಟಿಕ್ ತಂಡಗಳಿಂದ ಫ್ಲೈಯಿಂಗ್ ಡಿಸ್​ಪ್ಲೇ ಕೂಡ ಆಯೋಜಿತವಾಗಿವೆ.
ಹಿಂಡನ್ ವಾಯುನೆಲೆ ಯಾಕೆ?:ಭಾರತೀಯ ವಾಯುಪಡೆ ಈ ವರ್ಷದ ವಾಯು ಪಡೆ ದಿನ ಆಚರಿಸುವುದಕ್ಕೆ ಹಿಂಡನ್ ವಾಯುನೆಲೆ ಆಯ್ಕೆ ಮಾಡಲು ಕಾರಣವಿದೆ. 1971ರ ಯುದ್ಧದಲ್ಲಿ ಈ ವಾಯುನೆಲೆ ಪ್ರಮುಖ ಪಾತ್ರವಹಿಸಿತ್ತು. ಅದನ್ನು ಸ್ಮರಿಸಿಕೊಳ್ಳುವ ಸಲುವಾಗಿ ಈ ಸಲ ಇಲ್ಲೇ ಸ್ವರ್ಣಿಮ ವಿಜಯ ವರ್ಷ ಆಚರಿಸಲಾಗುತ್ತಿದೆ.
ಪ್ರದರ್ಶನದ ಕೇಂದ್ರ ಬಿಂದು ‘Gnat’:ಹಿಂಡನ್ ವಾಯುನೆಲೆಯಲ್ಲಿ ಯುದ್ಧೋಪಕರಣ ಪ್ರದರ್ಶನದ ಕೇಂದ್ರ ಬಿಂದು ’Gnat’ ವಿಮಾನ. ಇದು 1971ರ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಈ ವಿಮಾನ ಹಾರಾಟ ನಡೆಸಲ್ಲ. ಈ ಪ್ರದರ್ಶನದ ಮೂಲಕ ಹುತಾತ್ಮ ಯೋಧರು ಮತ್ತು ಸಮರವೀರರನ್ನು ಗೌರವಿಸಲಾಗುತ್ತದೆ ಎಂದು ವಾಯುಪಡೆ ತಿಳಿಸಿದೆ. ಈ ವಿಮಾನಕ್ಕೆ ಎಚ್​ಎಎಲ್ ಅಜಿತ ಎಂದು ಹೆಸರು. ಅಜಿತ ಎಂದರೆ ಸಂಸ್ಕೃತದಲ್ಲಿ ಅಗೋಚರ ಅಥವಾ ಗೆಲ್ಲಲಾಗದ್ದು ಎಂಬ ಅರ್ಥವಿದೆ. ಈ ವಿಮಾನವು ಪಾಕಿಸ್ಥಾನ ಸೇನೆ ಬಳಸುತ್ತಿದ್ದ ಸಾಬರ್ ಜೆಟ್ (ಸಾಬರ್ ಸ್ಲೇಯರ್)ಗಳ ವಿರುದ್ಧ ಮೇಲುಗೈ ಸಾಧಿಸಿತ್ತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 4 =
Remember me
