ಮುಂಬೈ:ಕರೊನಾ ವೈರಸ್​ ಜಗತ್ತಿಗೆ ಹರಡಿದ್ದು ಚೀನಾದಿಂದಲೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವುಹಾನ್​ನ ವೈರಾಲಜಿ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಅಮೆರಿಕ ನಿರಂತರವಾಗಿ ವಾದಿಸುತ್ತಲೇ ಬಂದಿದೆ. ಇದರಿಂದ ಉಂಟಾದ ನಷ್ಟವನ್ನು ಭರಿಸಬೇಕೆಂದು ಟ್ರಂಪ್​ ಆಗ್ರಹಿಸುತ್ತಲೇ ಇದ್ದಾರೆ.
ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ನೀಡಿರುವ ಹೇಳಿಕೆ ಕೂಡ ಈ ವಾದಕ್ಕೆ ಬೆಂಬಲ ನೀಡುವಂತಿದೆ. ಕೋವಿಡ್​-19ಗೆ ಕಾರಣವಾದ ಕರೊನಾ ‘ಕೃತಕ ವೈರಸ್​, ಸ್ವಾಭಾವಿಕವಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ;ಇದೇನು ವಿಚಿತ್ರ…! ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲವಂತೆ..!
ಕರೊನಾ ವೈರಸ್​ ನೈಸರ್ಗಿಕವಲ್ಲ, ಅದನ್ನು ಪ್ರಯೋಗಾಲಯವೊಂದರಲ್ಲಿ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಬದುಕಲು ನಾವು ಕಲಿಯಬೇಕಾಗಿದೆ. ಅಂಥ ಜೀವನ ವಿಧಾನವನ್ನು ರೂಪಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಏಕೆಂದರೆ, ಇದನ್ನು ಕೃತಕವಾಗಿ ರೂಪಿಸಲಾಗಿದೆ. ಜಗತ್ತಿನ ಹಲವು ದೇಶಗಳು ಈ ವೈರಸ್​ ನಿರ್ಮೂಲನೆಗೆ ಲಸಿಕೆ ಸಂಶೋಧಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಗಡ್ಕರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಮೂಲಕ ಭಾರತ ಇದೇ ಮೊದಲ ಬಾರಿಗೆ ಮಾರಣಾಂತಿಕ ವೈರಸ್​ನ ಮೂಲದ ಬಗ್ಗೆ ಪ್ರತಿಕ್ರಿಯಿಸಿದಂತಾಗಿದೆ. ಅದರಲ್ಲೂ ಕೇಂದ್ರ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿರುವುದು ಗಮನಾರ್ಹವಾಗಿದೆ. ಏಕೆಂದರೆ, ಪ್ರಮುಖ ದೇಶಗಳು ಕರೊನಾ ವೈರಸ್​ ವುಹಾನ್​ ಪ್ರಯೋಗಾಲಯದಿಂದಲೇ ಜನ್ಮ ತಾಳಿದೆ ಎಂದು ಆರೋಪಿಸಿವೆ.
ಇದನ್ನೂ ಓದಿ;ಜುಲೈ 30, 31 ರಂದು ಸಿಇಟಿ, ಸೆಪ್ಟೆಂಬರ್​ 1ರಂದು ಕಾಲೇಜು ಆರಂಭ
ಇಡೀ ಜಗತ್ತಿನಂತೆ ಭಾರತವೂ ಕೂಡ ಈ ವೈರಸ್​ ನಿಗ್ರಹಿಸಲು ಸಜ್ಜಾಗಿದೆ. ಈ ಕಾಯಿಲೆಗೆ ಆದಷ್ಟು ಬೇಗ ಲಸಿಕೆ ಕಂಡು ಹಿಡಿಯಲಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
