| ಪ್ರಕಾಶ್​ ಶೇಷರಾಘವಾಚಾರ್ಮೋದಿ ಸರ್ಕಾರದ ಸಾಧನೆಯ ಪಟ್ಟಿಯಲ್ಲಿ ವಾರಾಣಸಿಯ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯು ಅತ್ಯದ್ಭುತ ಮೈಲಿಗಲ್ಲಾಗಿದೆ. ಮೋದಿಯವರು ಇಂತಹ ಪವಿತ್ರ ಕ್ಷೇತ್ರವನ್ನು 2014 ರಲ್ಲಿ ಲೋಕಸಭೆಗೆ ಸ್ಪರ್ಧಿಸಲು ಆಯ್ಕೆ ಮಾಡಿಕೊಂಡರು. ಚುನಾವಣೆ ಗೆದ್ದ ತರುವಾಯ ವಾರಾಣಸಿಯ ನಕ್ಷೆಯೇ ಬದಲಾಗುತ್ತಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ಕಾಶಿ ವಿಶ್ವನಾಥನ ಸನ್ನಿಧಿಯು ಹೊಸ ರೂಪ ಪಡೆದು ಅದರ ಪಾವಿತ್ರ್ಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಹಿಂದೂಗಳ ಪರಮ ಪವಿತ್ರ ಕ್ಷೇತ್ರ 2014ರ ಮುನ್ನ ಹೇಗಿತ್ತು ಎಂಬುದು ಅಂದು ಕಂಡವರು ಇಂದಿನ ಕಾಶಿಯನ್ನು ನೋಡಿದರೆ ದಂಗಾಗದೆ ಇರುವುದಿಲ್ಲ. ಸಣ್ಣ ಕಿರಿದಾದ ಗಲೀಜಾದ ಹಾಗೂ ದುರ್ನಾತದಿಂದ ಕೂಡಿದ ರಸ್ತೆ, ಕಂಡ ಕಂಡ ಕಡೆಯಲ್ಲಾ ಪಾನ್ ಗುಟ್ಖಾ ಅಗಿದು ಉಗಿದಿರುವ ಚಿತ್ತಾರ ಸಾಮಾನ್ಯ ದೃಶ್ಯ. ಸಣ್ಣ ಸಣ್ಣ ಅಂಗಡಿಗಳ ಸಾಲು, ಅದರ ನಡುವೆಯೇ ಮನೆಗಳು. ವಿಶ್ವನಾಥನ ಮಂದಿರದ ಪರಿಸರವೂ ಅತ್ಯಂತ ಕಿರಿದಾಗಿತ್ತು. ದೇವಸ್ಥಾನಕ್ಕೆ ಸರಿಯಾದ ಪ್ರಾಕಾರವು ಇರಲಿಲ್ಲ. ಮಂದಿರದ ಮಂದಿರದ ಆವರಣದಲ್ಲಿ ಶುಭ್ರತೆಯ ಬಗ್ಗೆ ಯಾರಿಗೂ ಕಾಳಜಿಯೇ ಇರಲಿಲ್ಲ. ಗಂಗಾತಟದಿಂದ ಮಂದಿರಕ್ಕೆ ನೇರವಾದ ದಾರಿಯೂ ಇರಲಿಲ್ಲ.
ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಯೋಜನೆ ರೂಪಿಸುವ ಮೂಲಕ ಮೋದಿಯವರು. ಭಗವಂತನಿಗೂ ಮತ್ತು ಭಕ್ತರಿಬ್ಬರಿಗೂ ಪರಸ್ಪರ ಮುಖಾಮುಖಿಯು ಸ್ವಚ್ಛ, ಶುಭ್ರ ಹಾಗೂ ಭಕ್ತಿಪೂರ್ವಕ ವಾತಾವರಣದಲ್ಲಿ ನಡೆಯುವಂತಹ ಅದ್ಭುತ ಪರಿಸರವನ್ನು ನಿರ್ವಣಕ್ಕೆ ಕಾರಣವಾಗಿದ್ದಾರೆ. ಅಂದಾಜು ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 300 ಅಂಗಡಿಗಳು ಮತ್ತು 1400 ಮನೆಗಳು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಈ ಪ್ರಕ್ರಿಯೆಯು ಯಾವುದೇ ತಕರಾರಿಗೆ ಆಸ್ಪದವಿಲ್ಲದೆ ಮತ್ತು ನ್ಯಾಯಾಲಯದ ಮೆಟ್ಟಿಲೇರದಂತೆ ಭೂಸ್ವಾಧೀನ ಮಾಡಬೇಕಿತ್ತು. ಯಾರೊಬ್ಬರು ನ್ಯಾಯಲಯದ ಮೆಟ್ಟಿಲು ಹತ್ತಿದ್ದರೂ ಯೋಜನೆಯು ಮೂರು ವರ್ಷದಲ್ಲಿ ಮುಗಿಯುವ ಸಾಧ್ಯತೆ ಕನಸಿನ ಮಾತಾಗುತ್ತಿತ್ತು. ಉತ್ತರ ಪ್ರದೇಶದ ಅಧಿಕಾರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸುವುದರಲ್ಲಿ ಯಶಸ್ವಿಯಾಗಿ ಖ್ಯಾತ ಆರ್ಕಿಟೆಕ್ಟ್ ಬಿಮಲ್ ಪಟೇಲ್ ಅವರು ವಿನ್ಯಾಸ ಮಾಡಿದ್ದ ಕಾರಿಡಾರ್ ಯೋಜನೆಯು 2019ರಲ್ಲಿ ನಿರ್ವಣದ ಶುಭಾರಂಭವಾಯಿತು. ಮೋದಿಯವರು 2021 ಡಿಸೆಂಬರ್​ನಲ್ಲಿ ಚಿರಸ್ಮರಣೀಯ ಕಾರ್ಯಕ್ರಮದಲ್ಲಿ ಕಾಶೀ ವಿಶ್ವನಾಥ ಧಾಮ ಕಾರಿಡಾರ್ ಲೋಕಾರ್ಪಣೆ ಮಾಡಿದರು.
ಒಟ್ಟು 900 ಕೋಟಿ ರೂ. ವೆಚ್ಚದ 5ಲಕ್ಷ ಚದರಡಿಯ ವಿಸ್ತಾರದಲ್ಲಿ ಕಾರಿಡಾರ್ ನಿರ್ವಣವಾಗಿದೆ. ಮಂದಿರದ ಕಾರಿಡಾರ್ ನೇರವಾಗಿ ಗಂಗಾನದಿಗೆ ಹೊಂದಿಕೊಂಡಂತೆ ವಿನ್ಯಾಸ ರೂಪಿಸಿರುವುದರಿಂದ ಭಕ್ತಾದಿಗಳು ಗಂಗಾ ಸ್ನಾನ ಮಾಡಿ ನೇರವಾಗಿ ಮಂದಿರದ ಆವರಣಕ್ಕೆ ಪ್ರವೇಶಿಸಬಹುದಾಗಿದೆ. ಇದೀಗ ಕಾರಿಡಾರ್​ನೊಳಗೆ ಯಾತ್ರಿಗಳು ಉಳಿದುಕೊಳ್ಳಲು ಹೋಟೆಲ್ ತೆರೆಯಲಾಗಿದೆ. ಕನ್ನಡಿಗರು ತೆರೆದಿರುವ ಉಡುಪಿ ಉಪಹಾರ ಭವನ, ಲಾಕರ್ ರೂಮ್ ಬ್ಯಾಂಕ್, ಎಟಿಎಮ್ ಮುಂತಾದ ಅನೇಕ ಸೌಲಭ್ಯಗಳು ಕಾರಿಡಾರಿನೊಳಗೆ ದೊರೆಯುತ್ತದೆ. ನಿಜವಾದ ಅರ್ಥದಲ್ಲಿ ಇಂದು ಭವ್ಯ ಕಾಶಿಯು ದಿವ್ಯ ಕಾಶಿಯಾಗಿದೆ. ಅನನ್ಯ ಭಾವದಿಂದ ಪರಶಿವನ ದರ್ಶನ ಪಡೆಯಲು ಭಕ್ತಿ ಪೂರಕ ವಾತಾವರಣ ನಿರ್ವಣವಾಗಿದೆ. ಕಾಶಿಯ ಕಾರಿಡಾರ್ ಯೋಜನೆಯು ಹಿಂದೂ ಸಾಂಸ್ಕೃತಿಕ ಪುನರುತ್ಥಾನಕ್ಕೆ ಭದ್ರವಾದ ಬುನಾದಿಯನ್ನು ಹಾಕಿರುವ ಶ್ರೇಯಸ್ಸು ಮೋದಿಯವರಿಗೆ ಸಲ್ಲುತ್ತದೆ.
12 ಜ್ಯೊತಿರ್ಲಿಂಗ ಕ್ಷೇಗಳಲ್ಲಿ ಒಂದಾದ ಉಜ್ಜಯಿ ನಿಯ ಮಹಾಕಾಳೇಶ್ವರ ದೇವಾಲಯವನ್ನು ಕಾಶಿ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಪಡಿ ಸಲಾಗಿದ್ದು್ದ, ಪ್ರಧಾನಿ ಮೋದಿ ಅವರು 2022ರ ಅ.11ರಂದು ಮಹಾಕಾಲ ಲೋಕ ಕಾರಿಡಾರನ್ನು ಉದ್ಘಾಟಿಸಿದರು. 2017ರಲ್ಲಿ ಆರಂಭಗೊಂಡ ಈ ಯೋಜನೆಯ ಮೊದಲ ಹಂತಕ್ಕೆ 856 ಕೋಟಿ ರೂ. ವ್ಯಯಿಸಲಾಗಿದೆ. ದೇವಾಲಯದ ಪ್ರಾಚೀನತೆ ಮತ್ತು ವಾಸ್ತು ವೈಭವ ಬಿಂಬಿಸುವಂತೆ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ಹೆಸರಿಸಲಾಗಿರುವ ಗಿಡಗಳನ್ನು ಕಾರಿಡಾರ್​ನಲ್ಲಿ ನೆಡಲಾಗುತ್ತಿದೆ. ರುದ್ರಾಕ್ಷ, ಬಕುಳ, ಕದಮ್ ಬಿಲ್ವಪತ್ರೆ, ಶತಪರ್ಣಿ ಸೇರಿದಂತೆ ಶಿವನಿಗೆ ಪ್ರಿಯವಾದ 40ರಿಂದ 45 ಸಸ್ಯಪ್ರಭೇಧಗಳನ್ನು ಈ ಕಾರಿಡಾರ್​ನಲ್ಲಿ ನೆಡಲಾಗಿದೆ. ಅಂದಾಜು 900 ಮೀ. ಉದ್ದದ ಕಾರಿಡಾರ್​ನಲ್ಲಿ ನಿರ್ಮಾಣ ಮಾಡಲಾಗಿರುವ ಗೋಡೆಗಳ ಮೇಲೆ ಶಿವಪುರಾಣದ ಕಥೆಗಳನ್ನು ಬಿಂಬಿಸುವ ಚಿತ್ರಗಳನ್ನು ಕೆತ್ತಲಾಗಿದೆ. ಕಾರಿಡಾರ್​ನಲ್ಲಿ ಬೃಹತ್ ಶಿವನ ಮಂಟಪ, ತ್ರಿವೇಣಿ ಮಂಟಪ ನಿರ್ಮಾಣ ಮಾಡಲಾಗಿದೆ. ಸರೋವರದ ಮುಂಭಾಗದಲ್ಲಿ ಶಿವನ ವಿವಿಧ ರೂಪಗಳು ಮತ್ತು ಇತರ ದೇವತೆಗಳ 190 ಶಿಲ್ಪಗಳನ್ನು ನಿರ್ವಿುಸಲಾಗಿದೆ.
ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
