ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅವರ ಪತ್ನಿ ಮೆಲನಿಯಾ ಟ್ರಂಪ್ ಇಬ್ಬರೂ ಕರೊನಾ ಸೋಂಕಿತರಾಗಿರುವುದು ಗೊತ್ತಿರುವಂಥದ್ದೇ. ಇದೀಗ ಅವರಿಬ್ಬರಿಗೂ ಬೇಗ ಗುಣವಾಗಿ ಮರಳಿ ಎಂದು ಮರಳಿನಿಂದಲೇ ಕಲಾವಿದರೊಬ್ಬರು ಹಾರೈಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಮರಳು ಚಿತ್ರ ಕಲಾವಿದ (ಸ್ಯಾಂಡ್​ ಆರ್ಟ್​) ಸುದರ್ಶನ್​ ಪಟ್ನಾಯಕ್​ ಮರಳಿನಲ್ಲಿ ಡೊನಾಲ್ಡ್​ ದಂಪತಿಯ ಕಲಾಕೃತಿ ರಚಿಸಿ, ಅದರ ಮೇಲೆ ‘ಗೆಟ್​ ವೆಲ್​ ಸೂನ್’​ ಎಂಬುದಾಗಿ ಹಾರೈಸಿದ್ದಾರೆ. ಒಡಿಶಾದ ಪುರಿ ಕಡಲತೀರದಲ್ಲಿ ಅವರು ರಚಿಸಿರುವ ಈ ಕಲಾಕೃತಿ ಹಲವರ ಗಮನ ಸೆಳೆದಿದೆ.
ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟ ಹಿನ್ನೆಲೆಯಲ್ಲಿ ಡೊನಾಲ್ಡ್​ ಅವರು ವಾಷಿಂಗ್ಟನ್​ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದರ್ಶನ್ ಪಟ್ನಾಯಕ್​ ಹೀಗೆ ಆಗಾಗ ಮರಳು ಕಲೆ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
Wishing President@POTUS@realDonaldTrumpand First Lady@FLOTUS@MELANIATRUMPa speedy recovery and good health. My SandArt with message “Get well soon “ at Puri beach in india.pic.twitter.com/gE4u0s2xni
— Sudarsan Pattnaik (@sudarsansand)October 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
