ನವದೆಹಲಿ:ಜನವರಿ 22 ರಂದು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆನಡೆಯುತ್ತಿದೆ. ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ಅಣ್ಯಾತಿಗಣ್ಯರಿಗೆ ಅಹ್ವಾನವನ್ನು ನೀಡಲಾಗಿದೆ.ಶ್ರೀರಾಮನ ಪ್ರತಿಮೆ ಲೋಕಾರ್ಪಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಗತ್ತಿನಾದ್ಯಂತ ರಾಮಭಕ್ತರು ತಮ್ಮ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ಈ ಅನುಕ್ರಮದಲ್ಲಿ ನೇಪಾಳದಲ್ಲಿ ರಾಮಭಕ್ತರು ಬಿಡಿಸಿದ ಚಿತ್ರ ಇದೀಗ ವಿಶ್ವದ ಗಮನ ಸೆಳೆಯುತ್ತಿದೆ.
ನೇಪಾಳದ ಜನಕ್‌ಪುರದಲ್ಲಿ, ಕೇವಲ ಧಾನ್ಯಗಳಿಂದ ನಿರ್ಮಿಸಲಾದ ಬೃಹತ್ ಭಾವಚಿತ್ರವು ವಿಶ್ವದಾಖಲೆ ಮಾಡಲು ಸಿದ್ಧವಾಗಿದೆ. 11 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ರಾಮ ಮತ್ತು ಸೀತೆಯ ಭಾವಚಿತ್ರವನ್ನು ರಚಿಸಲಾಗಿದೆ. ತ್ರೇತಾಯುಗದ ವಿವಾಹ ಸಮಾರಂಭದ ನೆನಪಿಗಾಗಿ ಈ ಮಹಾಯಜ್ಞದಲ್ಲಿ ಒಟ್ಟು 10 ಕಲಾವಿದರು ಭಾಗವಹಿಸಿದ್ದರು. ನೇಪಾಳದ ಇಬ್ಬರು ಕಲಾವಿದರು ಮತ್ತು ಭಾರತದ ಎಂಟು ಕಲಾವಿದರು ರಂಗಭೂಮಿ ಮೈದಾನದಲ್ಲಿ ಸೀತಾರಾಮ್ ಅವರ ಭಾವಚಿತ್ರವನ್ನು ರಚಿಸಿದರು.
120 ಅಡಿ ಎತ್ತರದ ರಾಮ-ಸೀತೆಯ ಭಾವಚಿತ್ರ ವಿಶೇಷತೆ:120 ಅಡಿ ಉದ್ದ ಮತ್ತು 91.5 ಅಡಿ ಅಗಲದ ಈ ಬೃಹತ್ ಚಿತ್ರವನ್ನು ರಚಿಸಲು 11 ವಿಧದ 101 ಕ್ವಿಂಟಾಲ್ ಧಾನ್ಯಗಳನ್ನು ಬಳಸಲಾಗಿದೆ. ಚಿತ್ರಕಲೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸಲಾಗಿಲ್ಲ.
Not only Bharat, even#Nepalis excited about Rammandir!
Artists in Nepal's Janakpur have made a 10800 sq ft portrait of Bhagwan Ram & Sita Ji with 101 Quintal Grain of 11 types.
सच है! भगवान राम सबके हैं।
This's why I said Ayodhya will become No.1 Power Centre of Global…pic.twitter.com/iYO0GGAurd
— BhikuMhatre (@MumbaichaDon)December 20, 2023

ಈ ಅದ್ಭುತ ಕಲಾಕೃತಿಯನ್ನು ನೋಡಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ನೇಪಾಳದಲ್ಲಿ ಮಾರ್ಗ ಶುಕ್ಲ ಪಂಚಮಿಯನ್ನು ಜನಕಪುರ ಧಾಮ್‌ನಲ್ಲಿರುವ ಜಾನಕಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಅಲ್ಲಿ ಸೀತಾರಾಮರ ವಿವಾಹ ಸಮಾರಂಭವನ್ನು ಏಳು ದಿನಗಳವರೆಗೆ ಆಚರಿಸಲಾಗುತ್ತದೆ. ನೇಪಾಳ ಮತ್ತು ಭಾರತದಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ವರ್ಷ, ಡಿಸೆಂಬರ್ 17 ರಿಂದ, ದೇವಾಲಯದಲ್ಲಿ ದೊಡ್ಡ ಪ್ರಮಾಣದ ವಿವಾಹ ಸಮಾರಂಭವನ್ನು ನಡೆಸಲಾಗುತ್ತಿದೆ.
ಭಾರತದ ಗಡಿ ರಕ್ಷಕರಾಗಿ ಜೇನುಹುಳಗಳು; ಭಾರತ, ಬಾಂಗ್ಲಾದೇಶದ ಬೇಲಿಯಲ್ಲಿ ಬಿಎಸ್ಎಫ್ ಜತೆ ಕಾವಲು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
