ಅಸ್ಸಾಂ:ನಿನ್ನೆ (ಅ.21) ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದ ಹೆಲಿಕಾಫ್ಟರ್​ನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಇಂದು ಕೊನೆಗೊಂಡಿದೆ.
ಭಾರತೀಯ ವಾಯುಸೇನೆ ಮತ್ತು ಸೇನಾಪಡೆ, ಕೊನೆಯ ಐದನೇ ಮೃತದೇಹ ಪತ್ತೆ ಮಾಡಿ ರಕ್ಷಣಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ತೇಝ್​ಪುರದಲ್ಲಿ ಹೇಳಿದರು.
ವರದಿಗಳ ಪ್ರಕಾರ ಸೇನಾಪಡೆಯ ಮೂರು ತುಕಡಿಗಳು ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಇವರನ್ನು ಎರಡು ಹೆಲಿಕಾಪ್ಟರ್​ಗಳು ಹುಡುಕುತ್ತಿದ್ದವು. ಐದು ಜನರನ್ನು ಹೊತ್ತಿದ್ದ ಸೇನಾಪಡೆಯ ಎಎಲ್​ಎಚ್​ ಹೆಲಿಕಾಪ್ಟರ್ ಶುಕ್ರವಾರ ಬೆಳಗ್ಗೆ 10.43ರ ವೇಳೆಗೆ ಅಸ್ಸಾಂನ ಸಿಂಗ್ಗೀಂಗ್ ಹಳ್ಳಿಯ ಬಳಿ ಪತನವಾಗಿತ್ತು.
‘ಪತನವಾದ ಸ್ಥಳದಲ್ಲಿ 4 ಜನರ ಮೃತದೇಹ ಪತ್ತೆಯಾಗಿದ್ದು ಓರ್ವ ನಾಪತ್ತೆ ಆಗಿದ್ದಾರೆ’ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಹಿಂದೆ ಹೇಳಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
