ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ಏರುತ್ತಿರುವ ತಾಪಮಾನದ ನಡುವೆ ದೆಹಲಿ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೆಚ್ಚಾಗುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವಂತೆ ಬಿಜೆಪಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ ಮನವಿ ಮಾಡಿದ್ದಾರೆ. ನೀರಿನ ಬೇಡಿಕೆಯನ್ನು ಪೂರೈಸಲು ಉತ್ತರಪ್ರದೇಶ ಮತ್ತು ಹರಿಯಾಣ ಸರ್ಕಾರಗಳನ್ನು ಒತ್ತಾಯಿಸುವಂತೆ ಕೇಳಿದ್ದಾರೆ.
ಬಿಜೆಪಿ ನಾಯಕರು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನೀರಿನ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು. ಇಂತಹ ಸುಡುವ ಬಿಸಿಲಿನಲ್ಲಿ ನೀರಿನ ಬೇಡಿಕೆಯು ಸಾಕಷ್ಟು ಹೆಚ್ಚಾಗಿದೆ. ಅಲ್ಲದೇ ದೆಹಲಿಗೆ ನೆರೆ ರಾಜ್ಯಗಳಿಂದ ಬರುತ್ತಿದ್ದ ನೀರನ್ನೂ ಕಡಿಮೆ ಮಾಡಲಾಗಿದೆ. ಅಂದರೆ ಬೇಡಿಕೆ ಬಹಳಷ್ಟು ಹೆಚ್ಚಾಗಿದ್ದು ಪೂರೈಕೆ ಕಡಿಮೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಪರಿಹರಿಸಬೇಕಾಗಿದೆ ಎಂದು ಅರವಿಂದ್​ ಕೇಜ್ರಿವಾಲ್​​ ಎಕ್ಸ್​​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.
ಇದನ್ನು ಓದಿ :https://www.vijayavani.net/samajwasdi-party-leader-azam-khan-gets-10-years-in-jail-in-dungurpur-case
ಬಿಜೆಪಿಯ ಸ್ನೇಹಿತರು ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ನಾನು ನೋಡುತ್ತೇನೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಸಮಯದಲ್ಲಿ ರಾಜಕೀಯ ಮಾಡುವ ಬದಲು ಎಲ್ಲರೂ ಒಗ್ಗೂಡಿ ದೆಹಲಿಯ ಜನರಿಗೆ ಪರಿಹಾರ ನೀಡೋಣ ಎಂದು ವಿನಂತಿಸುತ್ತೇನೆ. ಬಿಜೆಪಿಯು ಹರಿಯಾಣ ಮತ್ತು ಉತ್ತರಪ್ರದೇಶ ಸರ್ಕಾರಗಳೊಂದಿಗೆ ಮಾತನಾಡಿ ಒಂದು ತಿಂಗಳ ಕಾಲ ದೆಹಲಿಗೆ ಸ್ವಲ್ಪ ನೀರು ಬಿಡಿಸಿದರೆ, ದೆಹಲಿಯ ಜನರು ಬಿಜೆಪಿಯ ಈ ಕ್ರಮವನ್ನು ತುಂಬಾ ಮೆಚ್ಚುತ್ತಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜನರಿಗೆ ಪರಿಹಾರ ಸಿಗಬಹುದು ಎಂದು ಹೇಳಿದ್ದಾರೆ.
ಅಲ್ಲದೆ ದೆಹಲಿ ನಿವಾಸಿಗಳು, ಬಿಸಿಲಿನ ತಾಪದಲ್ಲಿ ಟ್ಯಾಂಕರ್‌ಗಳು ಬರುತ್ತಿವೆ ಆದರೆ ಕಾಲೋನಿಗಳಲ್ಲಿನ ಹೆಚ್ಚಿನ ಜನಸಂಖ್ಯೆಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಒಂದು ಬಕೆಟ್ ನೀರನ್ನು ಪಡೆಯುವ ನಿರೀಕ್ಷೆಯಲ್ಲಿ ಜನರು ಉದ್ದನೆಯ ಸರತಿಯಲ್ಲಿ ಕಾಯುತ್ತಿದ್ದಾರೆ. ನೀರಿನ ಕೊರತೆ ಕುರಿತು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಗಮನಹರಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
35 ಲಕ್ಷ ಮೌಲ್ಯದ ಚಿನ್ನ ಕಳ್ಳಸಾಗಣೆ: ಶಶಿ ತರೂರ್ ಆಪ್ತ ಸಹಾಯಕ ವಿಮಾನ ನಿಲ್ದಾಣದಲ್ಲಿ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
