ನವದೆಹಲಿ:ಪ್ರಸ್ತುತ ತಿಹಾರ್​ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​, ಸ್ವೀಟ್ಸ್​, ಮಾವಿನಹಣ್ಣು ತಿನ್ನುವ ಮೂಲಕ ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ದೆಹಲಿ ಕೋರ್ಟ್​ಗೆ ದೂರು ಸಲ್ಲಿಸಿತ್ತು. ಇದರ ಬೆನ್ನಲ್ಲೇ ತನಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಜೈಲಿನ ಅಧಿಕಾರಿಗಳಿಗೆ ಸಿಎಂ ಪತ್ರ ಬರೆದಿರುವುದಾಗಿ ತಿಳಿಸಿದ್ದರು. ಸದ್ಯ ಇಡಿ ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಆರೋಗ್ಯ ಸಂಪೂರ್ಣ ಸುಧಾರಣೆ ಕಂಡಿದೆ ಎಂದು ಏಮ್ಸ್​ ಮೆಡಿಕಲ್ ಬೋರ್ಡ್​ ತಿಳಿಸಿದೆ.
ಇದನ್ನೂ ಓದಿ:ಭೂ ಹಗರಣ ಪ್ರಕರಣ: ಹೇಮಂತ್ ಸೊರೆನ್ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್!​
ತಿಹಾರ್​ ಜೈಲಿಗೆ ಬಂದಾಗಿನಿಂದಲೂ ದೆಹಲಿ ಸಿಎಂ ಆರೋಗ್ಯದ ಬಗ್ಗೆ ಅನೇಕರಿಗೆ ಗೊಂದಲ ಮೂಡಿತ್ತು. ಕೇಜ್ರಿವಾಲ್ ಆರೋಗ್ಯ ನಿಜಕ್ಕೂ ಸರಿಯಿಲ್ಲವೇ? ಅಥವಾ ಇಡಿ ಹೇಳಿದಂತೆ ಆರೋಗ್ಯ ವಿಚಾರವನ್ನು ಮುಂದಿಟ್ಟು ಪ್ರಕರಣದಲ್ಲಿ ಜಾಮೀನು ಪಡೆಯುವ ಸಲುವಾಗಿ ನೀಡುತ್ತಿರುವ ಕಾರಣವೇ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ, ಈ ಕುರಿತಂತೆ ಇದೀಗ ಏಮ್ಸ್​ ಮೆಡಿಕಲ್ ಬೋರ್ಡ್​ ಹೊಸ ಮಾಹಿತಿ ಹಂಚಿಕೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.
ದೆಹಲಿ ಕೋರ್ಟ್​ ನೀಡಿದ ನಿರ್ದೇಶನದಂತೆ ಅರವಿಂದ್ ಕೇಜ್ರಿವಾಲ್ ಆರೋಗ್ಯ ಪರಿಶೀಲಿಸಿದ ಮೆಡಿಕಲ್ ಬೋರ್ಡ್​ನ ಐವರು ಸದಸ್ಯರು, ಕೇಜ್ರಿವಾಲ್​ರ ಆರೋಗ್ಯ ಸಂಪೂರ್ಣವಾಗಿ ಸುಧಾರಣೆ ಕಂಡಿದೆ. ಕೊಡಲಾದ ಎರಡು ಯೂನಿಟ್​ನ ಇನ್ಸುಲಿನ್ ಡೋಸ್​​ಗಳನ್ನು ತಪ್ಪದೇ ಮುಂದುವರಿಸುವುದು ಒಳಿತು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).
ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಯುವತಿಯರಿಗೆ ಅಸಭ್ಯ ಮೆಸೇಜ್​ ಕಳಿಸುತ್ತಿದ್ದ ಮೊಬೈಲ್ ಅಂಗಡಿಯ ಯುವಕನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
