ನವದೆಹಲಿ:ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಸಿಎಂ ಅರವಿಂದ್​ ಕೇಜ್ರಿವಾಲ್​ ಸೋಮವಾರ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್​ ಶೋ ಕಾರಣದಿಂದಾಗಿ ಮಂಗಳವಾರಕ್ಕೆ ಮುಂದೂಡಲಾಗಿದೆ.
ಕೇಜ್ರಿವಾಲ್​ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೃಹತ್​ ರೋಡ್​ ಶೋ ಆಯೋಜಿಸಲಾಗಿತ್ತು. 3 ಗಂಟೆಯ ಒಳಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್​ ಶೋ ಕಾರಣದಿಂದಾಗಿ ನಿಗದಿತ ಸಮಯದಲ್ಲಿ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣ ನಾಳೆಗೆ ಮುಂದೂಡಲಾಗಿದೆ. ಅದಲ್ಲದೆ ನಾಮಪತ್ರ ಸಲ್ಲಿಕೆಗೆ ನಾಳೆಯೇ ಕೊನೆಯ ದಿನವಾಗಿದೆ. ​
ಈ ಬಗ್ಗೆ ಮಾತನಾಡಿರುವ ಕೇಜ್ರಿವಾಲ್​, ನಾನು ನಾಮಪತ್ರ ಸಲ್ಲಿಸಬೇಕೆಂದು ಹೇಳಿದೆ. ಆದರೆ, ನಾನು ಹೇಗೆ ಅವರನ್ನು(ರೋಡ್​ ಶೋಗೆ ಬಂದಿದ್ದ ಜನರು) ಬಿಟ್ಟು ಹೋಗಲಿ? ಹೀಗಾಗಿ ನಾಳೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೃಹತ್​ ರೋಡ್​ ಶೋ ವಾಲ್ಮೀಕಿ ಮಂದಿರದಿಂದ ಆರಂಭವಾಗಿ ಕೇಜ್ರವಾಲ್​ ಅವರ ವಿಧಾನಸಭಾ ಕ್ಷೇತ್ರ ನವದೆಹಲಿಯ ಚುನಾವಣಾ ಕಚೇರಿಗೆ ಹೋಗಬೇಕಾಗಿತ್ತು. ಆದರೆ, ತುಂಬಾ ಜನ ಇದ್ದುದರಿಂದ ನಿಗದಿತ ಸಮಯಕ್ಕೆ ಸ್ಥಳ ತಲುಪಲು ಸಾಧ್ಯವಾಗಲಿಲ್ಲ.
ತೆರೆದ ವಾಹನದಲ್ಲಿ ಆಮ್​ ಆದ್ಮಿ ಪಕ್ಷದ ಸಂಕೇತವನ್ನು ಹಿಡಿದು ಕೇಜ್ರಿವಾಲ್​ ನಾಮಪತ್ರ ಸಲ್ಲಿಸಲು ಹೊರಟಿದ್ದರು. ಅವರ ಸುತ್ತ ಸಾವಿರಾರು ಮಂದಿ ಪಕ್ಷದ ಪರ ಹಾಗೂ ಕೇಜ್ರಿವಾಲ್ ಪರ ಜಯಘೋಷ ಮೊಳಗಿಸಿದರು.
ಅಂದಹಾಗೆ ದೆಹಲಿ ಚುನಾವಣೆ ಫೆ.8ಕ್ಕೆ ನಡೆಯಲಿದ್ದು, ಫೆ.11ಕ್ಕೆ ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
