ಪಂಜಾಬ್​:ರಾಜಕಾರಣವೆಂದರೆ ಭರಪೂರ ಭರವಸೆ, ಯಾವ ಪಕ್ಷವಾದರೂ ಅಷ್ಟೇ.. ಕಾಲಕ್ಕೆ ತಕ್ಕಂತೆ ಹೊಸ ಹೊಸ ಭರವಸೆಗಳನ್ನು ಕೊಡುತ್ತಲೇ ಇರುತ್ತದೆ. ಅದರಲ್ಲಿ ಈಡೇರುವುದು ಎಷ್ಟು ಎಂಬುದನ್ನು ಕಾಲವೇ ತಿಳಿಸುತ್ತಿರುತ್ತದೆ. ಆದರೂ ಭರವಸೆ ನೀಡುವುದು ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಕೂಡ ಭರಪೂರ ಭರವಸೆ ನೀಡಿದ್ದಾರೆ.
ಸಂದರ್ಭಕ್ಕೆ ಅನುಗುಣವಾಗಿ ಭರವಸೆ ನೀಡಿರುವ ಅವರು ಆ ಮೂಲಕ ಒಂದು ಸಮುದಾಯದ, ಪ್ರದೇಶದ ಜನರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಹೌದು.. ಅಷ್ಟಕ್ಕೂ ಅರವಿಂದ ಕೇಜ್ರಿವಾಲ್ ಹೀಗೆ ಭರವಸೆಗಳನ್ನು ನೀಡಿರುವುದು ದೆಹಲಿಯಲ್ಲ, ಪಂಜಾಬ್​ನಲ್ಲಿ. ನಾವು ಇಲ್ಲಿ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂಬುದನ್ನು ಹೇಳಿರುವ ಅವರು ಅದಕ್ಕಾಗಿ ತಮ್ಮನ್ನು ಗೆಲ್ಲಿಸುವಂತೆ ಕೋರಿಕೊಂಡಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಪಂಜಾಬ್​ನಲ್ಲಿ ಇತ್ತೀಚೆಗೆ ಸಿಖ್ಖರ ಪವಿತ್ರ ಕೇತ್ರ ಗೋಲ್ಡನ್​ ಟೆಂಪಲ್​ನಲ್ಲಿ ನಡೆದ ಧಾರ್ಮಿಕ ಅಪಚಾರ ಯತ್ನ, ಆ ಬಳಿಕ ನಡೆದ ಹಲ್ಲೆ-ಕೊಲೆಯಂಥ ಘಟನೆಗಳ ಹಿನ್ನೆಲೆಯಲ್ಲಿ ಅವರು ಈ ಭರವಸೆ ನೀಡಿದ್ದಾರೆ. ಪಂಜಾಬ್​ನ ಗುರ್​ದಾಸ್​ಪುರದಲ್ಲಿ ಮಾತನಾಡಿದ ಕೇಜ್ರಿವಾಲ್​, ನಾವು ಇಲ್ಲಿ ಅಧಿಕಾರಕ್ಕೆ ಬಂದರೆ ಯಾವುದೇ ಧರ್ಮಕ್ಕೂ ಅಪಚಾರವಾಗದಂತೆ ನೋಡಿಕೊಳ್ಳುತ್ತೇವೆ ಮಾತ್ರವಲ್ಲ, ಅಂಥ ಕೃತ್ಯಗಳಲ್ಲಿ ಭಾಗಿಯಾದವರನ್ನು ಶಿಕ್ಷಿಸುತ್ತೇವೆ. ಅಷ್ಟೇ ಅಲ್ಲ, ಎಲ್ಲ ಬಾಂಬ್​ ಬ್ಲಾಸ್ಟ್​ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ, ಅವುಗಳ ಹಿಂದಿನ ಮಾಸ್ಟರ್​​ಮೈಂಡ್​ಗಳನ್ನು ಜೈಲಿಗೆ ತಳ್ಳಲಾಗುವುದು ಎಂದು ಹೇಳಿದ್ದಾರೆ.
ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

ಈ ವಾಂತಿಗೇ ಒಂದೂವರೆ ಕೋಟಿ ರೂಪಾಯಿ ಬೆಲೆ!; ಇದನ್ನು ಮಾರುತ್ತಿದ್ದ ಆರು ಜನರ ಬಂಧನ

3 ಪಟ್ಟು ಹಣದ ಆಮಿಷವೊಡ್ಡಿ 6 ಲಕ್ಷ ರೂ. ವಂಚನೆ: ಚಿತ್ರದುರ್ಗ ನಗರಸಭೆ ಸದಸ್ಯ, ಬೆಂಗಳೂರಿನ ವಿದ್ಯಾರ್ಥಿ ಸೇರಿ 9 ಜನರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
