ನವದೆಹಲಿ:ದೆಹಲಿಯ ಮತದಾನೋತ್ತರ ಸಮೀಕ್ಷೆಗಳು ಆಮ್​ ಆದ್ಮಿ ಪಕ್ಷ ಆರಾಮವಾಗಿ ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಇದರ ಬೆನ್ನಲ್ಲೇ ಸಿಎಂ ಅರವಿಂದ್​ ಕೇಜ್ರಿವಾಲ್​ ಪಕ್ಷದ ಹಿರಿಯ ನಾಯಕರಿಗೆ ಹಾಗೂ ಚುಣಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​ಗೆ ಕರೆ ನೀಡಿ ಮತಯಂತ್ರ(ಇವಿಎಂ) ಭದ್ರತೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ದೆಹಲಿಯ 70 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದ್ದು, ಫೆ. 11ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮತದಾನದ ಬೆನ್ನಲ್ಲೇ ಎಕ್ಸಿಟ್​ ಪೋಲ್​ನಲ್ಲಿ ಆಪ್​ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಭವಿಷ್ಯ ನುಡಿದಿವೆ.
ಹೀಗಾಗಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ಸಂಜಯ್​ ಸಿಂಗ್​, ರಾಘವ ಚಡ್ಡಾ ಮತ್ತು ಗೋಪಾಲ್​ ರೈ ಸೇರಿದಂತೆ ಅನೇಕ ಆಪ್​ ನಾಯಕರ ಉಪಸ್ಥಿತಿಯಲ್ಲಿ ಅರವಿಂದ್​ ಕೇಜ್ರಿವಾಲ್​ ಸಭೆ ನಡೆಸಿದ್ದಾರೆ. ಇದೇ ವೇಳೆ ಪಕ್ಷದ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಕೂಡ ಉಪಸ್ಥಿತರಿದ್ದರು.
ಅನೇಕ ಎಕ್ಸಿಟ್​ ಪೋಲ್​ಗಳು ಒಟ್ಟು 70 ಸ್ಥಾನಗಳಲ್ಲಿ ಆಪ್​ಗೆ 56, ಬಿಜೆಪಿ 14 ಮತ್ತು ಕಾಂಗ್ರೆಸ್​ಗೆ 1 ಸ್ಥಾನ ಎಂದು ಹೇಳಿವೆ. ಬಹುಮತ ಸಾಬೀತಿಗೆ 36 ಸ್ಥಾನ ಬೇಕಾಗಿರುವುದರಿಂದ ಸಮೀಕ್ಷೆ ಪ್ರಕಾರ ಆಪ್​ ಜಯಭೇರಿ ಬಾರಿಸಲಿದೆ. ಆದರೆ, ಎಕ್ಸಿಟ್​ ಫೋಲ್​​ ತಳ್ಳಿ ಹಾಕಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ ಪಕ್ಷ ಬಹುಮತ ಸಾಧಿಸಲಿದೆ ಎಂದಿದ್ದಾರೆ.
ಎಲ್ಲ ಎಕ್ಸಿಟ್​ ಪೋಲ್​ ವಿಫಲವಾಗಲಿದೆ. ಈ ಟ್ವೀಟ್​ ಅನ್ನು ಸೇವ್​ ಮಾಡಿಕೊಳ್ಳಿ. ಬಿಜೆಪಿ 48 ಸ್ಥಾನಗಳೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ. ಇವಿಎಂ ಮೇಲೆ ದೂಷಿಸಲು ಮುಂದಾಗಬೇಡಿ ಎಂದು ಟ್ವೀಟ್​ ಮಾಡಿದ್ದಾರೆ.
ಅಲ್ಲದೆ, ಎಕ್ಸಿಟ್​ ಪೋಲ್​ ಬೆನ್ನಲ್ಲೇ ಗೃಹ ಸಚಿವ ಅಮಿತ್​ ಷಾ ಕೂಡ ಸಭೆ ಕರೆದು ಚರ್ಚಿಸಿದ್ದಾರೆ. ಹೀಗಾಗಿ ಆಪ್​ ಇವಿಎಂ ಮೇಲೆ ಈಗಿನಿಂದಲೇ ಹದ್ದಿನ ಕಣ್ಣಿಡಲು ತಯಾರಿ ನಡೆಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
