ನವದೆಹಲಿ:ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜೈಲು ಸೇರಿರುವ ತಮ್ಮ ಸಹೋದ್ಯೋಗಿ ಮನೀಶ್​ ಸಿಸೋಡಿಯಾರನ್ನು ನೆನೆದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭಾವುಕರಾಗಿದ್ಧಾರೆ.
ದೆಹಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲೆ ಒಂದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುವ ವೇಳೆ ಕೇಜ್ರಿವಾಲ್​ ಭಾವುಕರಾಗಿದ್ಧಾರೆ. ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮನೀಶ್​ ಸಿಸೋಡಿಯಾ ಫೆಬ್ರವರಿ ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಕೇಜ್ರಿವಾಲ್​ ನಾನು ಇಂದು ಮನೀಶ್​ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಅವರ ಈ ಶಾಲೆಯ ನಿರ್ಮಾಣವನ್ನು ಶುರು ಮಾಡಿದ್ದರು, ಪ್ರತಿಯೊಂದು ಮಗು ಕೂಡ ಉತ್ತಮ ಶಿಕ್ಷಣ ಪಡೆಯಬೇಕು ಎಂಬುದು ಅವರ ಆಸೆಯಾಗಿತ್ತು.
VIDEO | Delhi CM Arvind Kejriwal breaks into tears as he talks about former Deputy CM Manish Sisodia during the inauguration of an educational institute in the national capital.pic.twitter.com/fNLoQMYGN4— Press Trust of India (@PTI_News)June 7, 2023
VIDEO | Delhi CM Arvind Kejriwal breaks into tears as he talks about former Deputy CM Manish Sisodia during the inauguration of an educational institute in the national capital.pic.twitter.com/fNLoQMYGN4
ಅವರು ಉತ್ತಮ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಗಿದೆ. ಇವರಿಗೆ ದೆಹಲಿಯ ಶಿಕ್ಷಣ ಕ್ರಾಂತಿ ಹಾಳು ಮಾಡುವವರೆಗೂ ನಿದ್ದೆ ಬರುವುದಿಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ಧಾರೆ.
ಇದನ್ನೂ ಓದಿ:ಸರ್ಕಾರ ಕಾಲಾವಕಾಶ ಕೇಳಿದೆ, ಜೂನ್​ 15ರವರೆಗೆ ಪ್ರತಿಭಟನೆ ಮಾಡುವುದಿಲ್ಲ: ಕುಸ್ತಿಪಟುಗಳು
ಸಿಸೋಡಿಯಾ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಿದ್ದಾರೆ. ದೇಶದಲ್ಲಿ ಅನೇಕ ಡಕಾಯಿತರು ಸಮಾಜದಲ್ಲಿ ಆರಾಮಾಗಿ ಒಡಾಡಿಕೊಂಡಿದ್ದಾರೆ, ಅವರನ್ನು ಜೈಲಿಗೆ ಹಾಕುವ ಬದಲು ಇವರನ್ನು ಯಾಕೆ ಹಾಕಿದ್ದೀರಾ. ಒಂದು ವೇಳೆ ಮನೀಶ್​ ಸಿಸೋಡಿಯಾ ಉತ್ತಮ ಶಾಲೆಗಳನ್ನು ನಿರ್ಮಿಸಿ, ಒಳ್ಳೆಯ ಶಿಕ್ಷಣವನ್ನು ಕೊಟ್ಟಿರದಿದ್ದರೆ ಆಗ ಅವರನ್ನು ಜೈಲಿಗೆ ಕಳುಹಿಸುತ್ತಿರಲಿಲ್ಲ.
ನಾವು ಮನೀಶ್​ ಅವರ ಕನಸುಗಳನ್ನು ನನಸು ಮಾಡಬೇಕು. ಶೀಘ್ರದಲ್ಲೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂಬ ನಂಬಿಕೆ ನನಗಿದೆ. ಸತ್ಯವು ಸೋಲಲಾರದು ಅದರ ಹಾದಿಯಲ್ಲಿ ನಡೆಯುವವರಿಗೆ ದೇವರು ಸಹಾಯ ಮಾಡುತ್ತಾನೆ ಎಂದು ಸಹೋದ್ಯೋಗಿಯನ್ನು ನೆನೆದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭಾವುಕ ನುಡಿಗಳನ್ನು ಆಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 7 =
Remember me
