ನವದೆಹಲಿ:ಸಿಎಂ ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್​​ ಅವರು ಅರವಿಂದ್​ ಕೇಜ್ರಿವಾಲ್​​ ಅವರನ್ನು ರಾಜಕೀಯ ಪಿತೂರಿಗೆ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಟಿಡಿಪಿ ಮುಖಂಡರೊಬ್ಬರ ಸುಳ್ಳು ಹೇಳಿಕೆ ಆಧಾರದ ಮೇರೆಗೆ ಜಾರಿ ನಿರ್ದೇಶನಾಲಯ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದೆ ಎಂದು ಶನಿವಾರ (ಜುಲೈ 6) ಹೇಳಿದ್ದಾರೆ.
ಇದನ್ನು ಓದಿ:ಜುಲೈ 23ಕ್ಕೆ ಮೋದಿ 3.0 ದರ್ಬಾರ್​​ನ ಮೊದಲ ಬಜೆಟ್​ ಮಂಡನೆ
ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ (ಎಂಎಸ್‌ಆರ್) ಹೇಳಿಕೆಯ ಆಧಾರದ ಮೇಲೆ ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದಾಗಿ ಸುನೀತಾ ಕೇಜ್ರಿವಾಲ್​ ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಟಿಡಿಪಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಒಂದು ಘಟಕವಾಗಿದೆ ಎಂದು ತಿಳಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಪ್ರಾಮಾಣಿಕ, ವಿದ್ಯಾವಂತ ಮತ್ತು ದೇಶಭಕ್ತ ವ್ಯಕ್ತಿಯಾಗಿದ್ದು ಜನರು ಅವರನ್ನು ಬೆಂಬಲಿಸದಿದ್ದರೆ, ಮುಂದೆ ಯಾವುದೇ ವಿದ್ಯಾವಂತರು ರಾಜಕೀಯಕ್ಕೆ ಬರಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರು ತಮ್ಮ ಪುತ್ರ ರಾಘವ ಮಾಗುಂಟ ರೆಡ್ಡಿ ಬಂಧನ ಮತ್ತು ಜಾಮೀನು ನಿರಾಕರಣೆಯ ನಂತರ ದೆಹಲಿ ಸಿಎಂ ಅವರನ್ನು ಭೇಟಿಯಾದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ನೀಡಿದ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ತಿಳಿಸಿದರು. ಸುನೀತಾ ಕೇಜ್ರಿವಾಲ್​ ಅವರ ಪ್ರಕಾರ, ದೆಹಲಿಯಲ್ಲಿ ಚಾರಿಟಬಲ್ ಟ್ರಸ್ಟ್ ತೆರೆಯಲು ಭೂಮಿ ಖರೀದಿಗೆ ಸಂಬಂಧಿಸಿದಂತೆ 2021 ಮಾರ್ಚ್ 16ರಂದು ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿಯಾಗಿದ್ದಾಗಿ ಈ ಹಿಂದೆ ಅವರು ಹೇಳಿದ್ದರು. ಆದರೆ 2023 ಜುಲೈ 17ರಂದು ಅವರ ಮಗನ ಬಂಧನದ ನಂತರ ಅವರ ಹೇಳಿಕೆ ಬದಲಾಗಿದೆ ಎಂದು ಹೇಳಿದರು.
ಬದಲಾದ ಹೇಳಿಕೆಯಲ್ಲಿ ಶ್ರೀನಿವಾಸುಲು ರೆಡ್ಡಿ ಅವರು, ಕೇಜ್ರಿವಾಲ್ ಅವರು ಸುಮಾರು 10 ಜನರ ಸಮ್ಮುಖದಲ್ಲಿ ದೆಹಲಿಯಲ್ಲಿ ಮದ್ಯದ ವ್ಯವಹಾರದಲ್ಲಿ ಭಾಗಿಯಾಗಲು ಎಎಪಿಗೆ 100 ಕೋಟಿ ರೂಪಾಯಿ ನೀಡುವಂತೆ ಕೇಳಿದರು ಎಂದು ಹೇಳಿದ್ದಾರೆ. ಯಾರಾದರೂ ಅಷ್ಟು ಜನರ ಮುಮದೆ ಹಣ ಕೇಳುತ್ತಾರೆಯೇ..? ಅಲ್ಲದೆ ಶ್ರೀನಿವಾಸುಲು ರೆಡ್ಡಿ ಹೇಳಿಕೆಯನ್ನು ಬದಲಾಯಿಸಿದ ಬಳಿಕ ಅವರ ಮಗನಿಗೆ ಜಾಮೀನು ನೀಡಲಾಗಿದೆ. ಇದರಿಂದಲೇ ಅವರ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ ಎಂದು ಕೇಜ್ರಿವಾಲ್​ ಪತ್ನಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ತೊಡೆದುಹಾಕಲು ಬಯಸುತ್ತಿದ್ದಾರೆ ಎಂದು ಸುನೀತಾ ಕೇಜ್ರಿವಾಲ್​ ಆರೋಪಿಸಿದ್ದಾರೆ. (ಏಜೆನ್ಸೀಸ್​​)
ಗುಜರಾತ್​ನಲ್ಲಿ ಬಿಜೆಪಿಯನ್ನು ಸೋಲಿಸಿ ನಾವು ಗೆಲ್ಲುತ್ತೇವೆ: ರಾಹುಲ್​ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
