ನವದೆಹಲಿ:ಅರವಿಂದ್ ಕೇಜ್ರಿವಾಲ್ ಅವರೇ ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಆಮ್​ ಆದ್ಮಿ ಪಕ್ಷ ಸೋಮವಾರ ಹೇಳಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವೊಬ್ಬ ವ್ಯಕ್ತಿಯೂ ಅನಿರ್ದಿಷ್ಟ ಕಾಲದವರೆಗೆ ಅಜ್ಱತವಾಗಿ ಉಳಿದ ಉದಾಹರಣೆ ಇಲ್ಲ ಎಂದು ದೆಹಲಿ ಎಂದು ದೆಹಲಿ ಹೈಕೋರ್ಟ್​ ಹೇಳಿದ ಬಳಿಕವೂ ಎಎಪಿ ಸಿಎಂ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಸಿಎ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ!
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್ ಅವರನ್ನು ಕೆಳಗಿಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮೂರು ಸಾರ್ವಜನಿಕ ಹಿಸ್ತಾಸಕ್ತಿ ಅರ್ಜಿಗಳನ್ನು ಸ್ವಃತ ಹೈಕೋರ್ಟ್​ ತಿರಸ್ಕರಿಸಿದೆ.ದೆಹಲಿ ಸಿಎಂ ಆಗಿ ಅರವಿಂದ್ ಕ್ರೇಜಿವಾಲ್ ಅವರು ಮುಂದುವರೆಯಬೇಕು ಎಂಬುದುಇ ಜನರ ನಿರ್ಧಾರವಾಗಿದ್ದು ಮುಖ್ಯಮಂತ್ರಿಯಾಗಿ ಅವರೇ ಆ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು.
ದೆಹಲಿಯ ಮಹಾನಗರ ಪಾಲಿಕೆಯ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿಗಳ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್​ ಯಾವುದೇ ರಾಜ್ಯದಲ್ಲಾದರೂ ಸಿಎಂ ಕೇವಲ ಉತ್ಸವ ಮೂರ್ತಿಯಲ್ಲ. ಸಂಕಷ್ಟದ ಸಮಯದಲ್ಲಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಆ ಸ್ಥಾನದಲ್ಲಿರುವವರು ದಿನದ 24 ಗಂಟೆಯೂ ಜನರ ಸಂಪರ್ಕಕ್ಕೆ ಸಿಗಬೇಕು ಎಂದು ಹೇಳಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಜಯ್ ಸಿಂಗ್​, ದಿಲ್ಲಿ ಸಿಎಂ ಯಾವುದೇ ಹುದ್ದೆಯ ಆಸೆಯನ್ನು ಹೊಂದಿಲ್ಲ. ಮೌಲ್ಯಗಳು ಎಂಬ ವಿಷಯ ಬಂದಾಗ ಅಧಿಕಾರಕ್ಕೇರಿದ ಕೇವಲ 49 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ರೇಜಿವಾಲ್​ ಅವರು ನೈಜ ದೇಶಪ್ರೇಮಿ ಎಂದು ಹೇಳಿದ್ದಾರೆ.
ಮಾರ್ಚ್ 21 ರಂದು ಇಡಿ ಸಂಸ್ಥೆಯಿಂದ ಬಂಧಿಸಲ್ಪಟ್ಟ ಮುಖ್ಯಮಂತ್ರಿ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.
ಶ್ರೀನಿವಾಸ ಪ್ರಸಾದ್ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಗಲಿದ ನಾಯಕನಿಗೆ ಕಂಬನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
