ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮಗಳಿಗೆ ಯಾರೋ ಖದೀಮರು ಪಂಗನಾಮ ಹಾಕಿದ್ದಾರೆ. ಆನ್​​ಲೈನ್​ ಮಾರುಕಟ್ಟೆಯನ್ನು ನಂಬಿದ್ದ ಅವರಿಗೆ 34 ಸಾವಿರ ರೂಪಾಯಿ ಮೋಸ ಮಾಡಲಾಗಿದೆ.
ಹರ್ಷಿತಾ ಕೇಜ್ರಿವಾಲ್​ ಒಎಲ್​ಎಕ್ಸ್​ನಲ್ಲಿ ಸೋಫಾ ಮಾರಾಟಕ್ಕೆ ಹಾಕಿದ್ದರಂತೆ. ಯಾರೋ ಒಬ್ಬ ಖದೀಮ ಅದನ್ನು ಕೊಳ್ಳುವುದಾಗಿ ಹೇಳಿದ್ದಾನೆ. ಆಕೆಗೆ ನಂಬಿಕೆ ಬರಲೆಂದು ಸ್ವಲ್ಪ ಹಣವನ್ನೂ ಆಕೆಯ ಖಾತೆಗೆ ಹಾಕಿದ್ದಾನೆ. ಅದಾದ ನಂತರ ಬಾರ್​ ಕೋಡ್​ ಒಂದನ್ನು ಆಕೆಗೆ ಕಳುಹಿಸಿ ಸ್ಕ್ಯಾನ್​ ಮಾಡಲು ಹೇಳಿದ್ದಾನೆ. ಆ ಕೋಡ್​ ಸ್ಕ್ಯಾನ್​ ಮಾಡಿದ ಹರ್ಷಿತಾ ಬ್ಯಾಂಕ್​ ಖಾತೆಯಿಂದ ಇದ್ದಕ್ಕಿದ್ದಂತೆ ಎರಡು ಬಾರಿ ಹಣ ವಿತ್​ಡ್ರಾ ಆಗಿದೆ. ಒಮ್ಮೆ 20 ಸಾವಿರ ಮತ್ತೊಮ್ಮೆ 14 ಸಾವಿರ ರೂಪಾಯಿ ವಿತ್​ ಡ್ರಾ ಆಗಿದೆ.
ಈ ವಿಚಾರವಾಗಿ ಮುಖ್ಯಮಂತ್ರಿಗಳ ನಿವಾಸದ ಸನಿಹವಿರುವ ಸಿವಿಲ್​ ಲೈನ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಖದೀಮರ ಹುಡುಕಾಟದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಗರ್ಭಿಣಿ ಹೆಂಡತಿ ಮತ್ತು ಮಗಳನ್ನು ಕೊಂದ ಪಾಪಿ ಗಂಡ! ಮೂರನೇ ಮದುವೆಯಾದರೂ ಮುಗಿಯಲಿಲ್ಲ ಜಗಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
