ಮುಂಬೈ:ಮುಂಬೈನ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಬಾಲಿವುಡ್​ ನಟ ಶಾರುಖ್​ ಖಾನ್​​ ಪುತ್ರ ಆರ್ಯನ್​ ಖಾನ್​ರ ಜಾಮೀನಿಗೆ ಸಂಬಂಧಿಸಿದಂತೆ ಇಂದು ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಹೈಕೋರ್ಟಿನಲ್ಲಿ ಆರ್ಯನ್​ ಪರವಾಗಿ ಭಾರತದ ಮಾಜಿ ಅಟೋರ್ನಿ ಜನರಲ್ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.
ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿರುವ ಮುಕುಲ್​ ರೋಹಟಗಿ, 2014 ರಿಂದ 2017 ರವರೆಗೆ ಭಾರತದ ಅಟೋರ್ನಿ ಜನರಲ್​ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ರೋಹಟಗಿ ಅವರು ಎನ್​ಸಿಬಿಯನ್ನು ‘ಮರಳಿನಲ್ಲಿ ತಲೆ ಹೂಳಿಕೊಂಡಿರುವ ಉಷ್ಟ್ರಪಕ್ಷಿ’ ಎಂಬುದಾಗಿ ಬಣ್ಣಿಸಿ ಟೀಕಿಸಿದ್ದು ಸುದ್ದಿಯಾಗಿತ್ತು. ಆರ್ಯನ್​ ಕೇಸಿನ ತಯಾರಿಗಾಗಿ ನಿನ್ನೆಯೇ ಮುಂಬೈ ತಲುಪಿರುವ ಅವರು, ಹೈಕೋರ್ಟ್​ನಲ್ಲಿ ಇಂದು ಆರ್ಯನ್​ ಪರ ವಕಾಲತ್ತು ನಡೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಸುಲಿಗೆ ಕೇಸ್​ನಲ್ಲಿ ಬಂಧಿಯಾದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​​ ಹಿನ್ನೆಲೆ ಕೇಳಿದ್ರೆ ದಂಗಾಗ್ತೀರಾ..!
ಈ ಮುನ್ನ ಎರಡು ಬಾರಿ ಅಂದರೆ ಮ್ಯಾಜಿಸ್ಟ್ರೇಟ್​ ಕೋರ್ಟಿನಲ್ಲಿ ಮತ್ತು ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯದಲ್ಲಿ ಆರ್ಯನ್​ ಖಾನ್​ರ ಜಾಮೀನು ಅರ್ಜಿಗಳು ವಜಾ ಆಗಿವೆ. ಕೆಳನ್ಯಾಯಾಲಯಗಳಲ್ಲಿ ಕ್ರಿಮಿನಲ್​ ಕೇಸುಗಳ ತಜ್ಞರೆನ್ನಲಾದ ಅಮಿತ್​ ದೇಸಾಯಿ ಮತ್ತು ಸತೀಶ್​ ಮಾನೆಶಿಂಧೆ, ಆರ್ಯನ್​ ಪರ ವಕಾಲತ್ತು ವಹಿಸಿದ್ದರು. ಇದೀಗ ವಿಶೇಷ ನ್ಯಾಯಾಲಯವು ಅ.20 ರಂದು ಜಾಮೀನು ನಿರಾಕರಿಸಿ ಹೊರಡಿಸಿದ್ದ ಆದೇಶದ ವಿರುದ್ಧ ಆರ್ಯನ್​ ಪರವಾಗಿ ಸಲ್ಲಿಸಿರುವ ಅಪೀಲಿನ ವಿಚಾರಣೆ ನಡೆಯಲಿದ್ದು, ಏನು ನಿರ್ಧಾರವಾಗುತ್ತದೆ ಎಂದು ಕಾದುನೋಡಬೇಕಿದೆ.(ಏಜೆನ್ಸೀಸ್)
ಫಾಲ್ಕೆ ಪ್ರಶಸ್ತಿ ಪಡೆದ ರಜನೀಕಾಂತ್;​ ಕರ್ನಾಟಕ ಸಾರಿಗೆ ಬಸ್​ ಚಾಲಕನ್ನನ್ನು ನೆನೆದರು!

ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
