ಮುಂಬೈ:ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಬಳಸಿದ ಆರೋಪದ ಮೇಲೆ ಬಂಧಿತನಾದ ಆರ್ಯನ್​ ಖಾನ್​ಗೆ “ವಿಚಾರಣಾಧೀನ ಕೈದಿ ಎನ್​956′ ಎಂಬ ಸಂಖ್ಯೆ ನೀಡಲಾಗಿದ್ದು, ಗುರುವಾರ ಆರ್ಥರ್​ ರೋಡ್​ ಜೈಲ್​ನ ಬ್ಯಾರಕ್​ಗೆ ಸ್ಥಳಾಂತರಿಸಲಾಗಿದೆ.ಹೈಕೋರ್ಟ್​ ಆದೇಶ ಪ್ರಕಾರ ಮತ್ತು ನಿಯಮಾನುಸಾರ ಕೈದಿಗಳಿಗೆ ವಾರಕ್ಕೆ ಎರಡು ಸಲ ಅವರ ಕುಟುಂಬದವರೊಡನೆ ಮಾತುಕತೆ ಅವಕಾಶ ನೀಡಬೇಕು. ಇದರಂತೆ, ಆರ್ಯನ್​ 10 ನಿಮಿಷ ತಂದೆ ಶಾರುಖ್​ ಖಾನ್​ ಮತ್ತು ತಾಯಿ ಗೌರಿ ಜತೆಗೆ ಮಾತನಾಡಿದ್ದ. ಇದರ ಬೆನ್ನಿಗೆ ಆತನಿಗೆ 4,500 ರೂಪಾಯಿ ಮನಿ ಆರ್ಡರ್​ ಕೂಡ ತಲುಪಿದೆ. ಆದಾಗ್ಯೂ, ಆರ್ಯನ್​ಗೆ ಜೈಲಿನ ಆಹಾರವನ್ನೇ ಕೊಡಲಾಗುತ್ತಿದೆ. ಮನೆಯ ಅಥವಾ ಹೊರಗಿನ ಆಹಾರವನ್ನು ನೀಡಲಾಗುತ್ತಿಲ್ಲ. ಇದಕ್ಕೆ ಕೋರ್ಟ್​ನ ಅನುಮತಿ ಬೇಕು ಎಂದು ಜೈಲ್​ ಸುಪರಿಂಟೆಂಡೆಂಟ್​ ನಿತಿನ್​ ವಯಚಾಲ್​ ತಿಳಿಸಿದ್ದಾರೆ.ಜಾಮೀನು ಅರ್ಜಿ ತಿರಸ್ಕೃತ:ಆರ್ಯನ್​ ಜಾಮೀನು ಅರ್ಜಿ ಗುರುವಾರ ನಾಲ್ಕನೇ ಬಾರಿ ತಿರಸತಗೊಂಡಿದೆ. ಮುಂಬೈ ಸೆಷನ್ಸ್​ ಕೋರ್ಟ್​ ತೀರ್ಪನ್ನು ಅಕ್ಟೋಬರ್​ 20ಕ್ಕೆ ಕಾಯ್ದಿರಿಸಿದೆ. ಈಗಾಗಲೇ ಆರ್ಯನ್​ 12 ದಿನಗಳಿಂದ ಜೈಲಿನಲ್ಲೇ ಇದ್ದು, ಕೋರ್ಟ್​ಗೆ ರಜೆ ಇರುವ ಕಾರಣ ಇನ್ನೂ ನಾಲ್ಕೆ$ದು ದಿನದ ಸೆರೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆರ್ಯನ್​ಗೆ ಕೋವಿಡ್​&19 ಟೆಸ್ಟ್​ ಮಾಡಿಸಲಾಗಿದ್ದು ಲಿತಾಂಶ ನೆಗೆಟಿವ್​ ಬಂದ ಕಾರಣ ಜೈಲಿನ ಸಾಮಾನ್ಯ ಬ್ಯಾರೆಕ್​ಗೆ ಸ್ಥಳಾಂತರಿಸಲಾಗಿದೆ.
ವಿದೇಶಿ ನಂಟು?ಆರ್ಯನ್​ ಖಾನ್​, ಅರ್ಬಾಝ್​ ಮರ್ಚೆಂಟ್​, ಮುನ್ಮುನ್​ ಧಮೇಚಾ ಅವರಿಗೆ ಡ್ರಗ್ಸ್​ ಮಾಫಿಯಾಕ್ಕೆ ಸಂಬಂಧಿಸಿದ ವಿದೇಶಿ ನಂಟು ಇರುವ ಬಗ್ಗೆ ಶಂಕೆ ಇದೆ. ಆರ್ಯನ್​ ಖಾನ್​ ಕಳೆದ ಕೆಲವು ವರ್ಷಗಳಿಂದ ಡ್ರಗ್ಸ್​ ಕಾಯಂ ಗ್ರಾಹಕನಾಗಿದ್ದ. ಹೀಗಾಗಿ ವಿದೇಶಾಂಗ ಸಚಿವಾಲಯದ ನೆರವು ಕೋರಲಾಗಿದೆ ಎಂದು ಎನ್​ಸಿಬಿಯ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಅನಿಲ್​ ಸಿಂಗ್​ ಹೇಳಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 19 =
Remember me
