ಮುಂಬೈ:ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​ ಇಂದು ಬೆಳಿಗ್ಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, 28 ದಿನಗಳ ನಂತರ ತಮ್ಮ ಮನೆ ‘ಮನ್ನತ್​’ ತಲುಪಿದ್ದಾರೆ. ಜೈಲಿನ ಹೊರಗಡೆ ಆರ್ಯನ್​ರ ಝಲಕ್​ ನೋಡಲು ಶಾರುಖ್​ ಅಭಿಮಾನಿಗಳ ದಂಡೇ ನೆರೆದಿತ್ತು. ಮನ್ನತ್​ ಬಳಿಯೂ ಕೂಡಿದ್ದ ಜನಸಾಗರ ಆರ್ಯನ್​ ಆಗಮನಕ್ಕೆ ಹರ್ಷೋತ್ಸವ ಆಚರಿಸಿತು.
ಕ್ರೂಸ್​ ಶಿಪ್​ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲಿನ ದಾಳಿಯ ನಂತರ ಆರ್ಯನ್​ ಖಾನ್​ರನ್ನು ಅಕ್ಟೋಬರ್ 3 ರಂದು ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳು ಬಂಧಿಸಿದ್ದರು. ಡ್ರಗ್ಸ್​ ಕೇಸಿನ ಆರೋಪಿಯಾಗಿರುವ ಆರ್ಯನ್​ರ ಜಾಮೀನು ಅರ್ಜಿ ಎರಡು ನ್ಯಾಯಾಲಯಗಳಲ್ಲಿ ವಜಾ ಆದ ಮೇಲೆ, ಹೈಕೋರ್ಟ್​ ಅ.28 ರಂದು ಅವರಿಗೆ 3 ವಾರಗಳ ಜಾಮೀನು ನೀಡಿತು.
Mumbai | Aryan Khan arrives at his home 'Mannat' after being released from Arthur Road Jailpic.twitter.com/rgjaVLLDER— ANI (@ANI)October 30, 2021
Mumbai | Aryan Khan arrives at his home 'Mannat' after being released from Arthur Road Jailpic.twitter.com/rgjaVLLDER
ಮುಂಬೈನ ಆರ್ಥರ್​ ರಸ್ತೆ ಜೈಲಿನಿಂದ ಬಿಡುಗಡೆಗೊಂಡ ಆರ್ಯನ್​ರನ್ನು ಮನೆಗೆ ಕರೆದುಕೊಂಡು ಬರಲು ಶಾರುಖ್​ ಖುದ್ದಾಗಿ ಹೋಗಿದ್ದರು ಎನ್ನಲಾಗಿದೆ. ಅವರ ಪರ್ಸನಲ್ ಬಾಡಿಗಾರ್ಡ್​ ರವಿ ಸಿಂಗ್​ ಆರ್ಯನ್​ರನ್ನು ಕಾರಿನ ಕಡೆಗೆ ಕರೆದುಕೊಂಡು ಹೋಗುತ್ತಿರುವ ಫೋಟೋ ವೈರಲ್​ ಆಗಿದೆ. ಶಾರುಖ್​ ನಿವಾಸ ಮನ್ನತ್ ಮಗನ ವಾಪಸಾತಿಗೆ ಅಲಂಕೃತಗೊಂಡಿದ್ದು, ಅದರ ಸುತ್ತಲೂ ಅವ​ರ ಅಭಿಮಾನಿಗಳು ಬ್ಯಾಂಡ್​ ಬಾಜಾ ಸಮೇತ ನೆರೆದಿದ್ದರು. ಬಿಳಿಯ ರೇಂಜ್​ ರೋವರ್​ ಕಾರಿನಲ್ಲಿ ಆರ್ಯನ್​ ಮನೆಗೆ ಮರಳಿದ ಸಂದರ್ಭದಲ್ಲಿ ಜನರು ಪಟಾಕಿಗಳನ್ನೂ ಹೊಡೆದು, ಹರ್ಷೋದ್ಗಾರ ನಡೆಸಿದ್ದಾರೆ.(ಏಜೆನ್ಸೀಸ್)
‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ
ವೋಟ್​ ಹಾಕಿ ಫೋಟೋ ಶೇರ್ ಮಾಡುತ್ತಿರೋ ಮತದಾರರು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
