ಮುಂಬೈ:ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​ಗೆ ಇಂದೂ ಜಾಮೀನು ಸಿಗಲಿಲ್ಲ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ಗೆ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದ ಮುಂಬೈನ ವಿಶೇಷ ಎನ್​ಡಿಪಿಎಸ್​ ಕೋರ್ಟ್​, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶವನ್ನು ಅಕ್ಟೋಬರ್​ 20ರವರೆಗೆ ಕಾಯ್ದಿರಿಸಿದೆ. ನ್ಯಾಯಧೀಶ ವಿವಿ ಪಾಟೀಲ್​ ಆದೇಶವನ್ನು ಕಾಯ್ದಿರಿಸಿದ್ದಾರೆ. ಸದ್ಯ ಆರ್ಯನ್​ ಖಾನ್​ ಅ.20ರವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ಹತ್ತು ಇತರ ಆರೋಪಿಗಳೊಂದಿಗೆ ಎನ್​ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟ 23 ವರ್ಷ ವಯಸ್ಸಿನ ಆರ್ಯನ್​ ಖಾನ್​, ಕಳೆದ ಶುಕ್ರವಾರದಿಂದ ಜೈಲಿನಲ್ಲಿದ್ದಾನೆ. ಅವನ ಜಾಮೀನು ಅರ್ಜಿಗೆ ಹೇಳಿಕೆ ಸಲ್ಲಿಸಲು ಇಂದು ಎನ್​ಸಿಬಿ ವಕೀಲರು ಶುಕ್ರವಾರದವರೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯಾಲಯ ಬುಧವಾರದೊಳಗೆ ಹೇಳಿಕೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತ್ತು. ಇದೀಗ ಪ್ರಕರಣದ ಆದೇಶವನ್ನು ಅ.20ರವರಗೆ ಕಾಯ್ದಿರಿಸಿದೆ.(ಏಜೆನ್ಸೀಸ್)
ಮಗ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆಗ್ತದ್ದಂತೆಯೇ ಶತಕೋಟಿ ಆಸ್ತಿ ದಾನ- ಇಡೀ ಚಿತ್ರರಂಗಕ್ಕೆ ಶಾಕ್‌ ತಂದ ನಟ!

ಇನ್ಮುಂದೆ ನಮ್ಮ ಜಾಹೀರಾತಿಗೆ ನೀವು ಬೇಡ ಎಂದ ಕಂಪೆನಿ: 5 ಕೋಟಿ ರೂ. ಆದಾಯ ಕಳೆದುಕೊಂಡ ಶಾರುಖ್‌

ಶಾರುಖ್‌ ಪತ್ನಿಗೂ ಡ್ರಗ್ಸ್‌ ನಂಟು? ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಗೌರಿ ಖಾನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fifteen =
Remember me
