ನವದೆಹಲಿ:ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಅವರು 2018ರಲ್ಲಿ ಕಾಂಗ್ರೆಸ್​ನ ವಕ್ತಾರೆ ಆಗಿದ್ದಂತಹ ಸಂದರ್ಭದಲ್ಲಿ ಮಾಡಿರುವ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೀಗ ಆ ಟ್ವೀಟ್​ಗೆ ಖುಷ್ಬೂ ಸ್ಪಷ್ಟನೆ ನೀಡಿದ್ದಾರೆ.
2018ರಲ್ಲಿ ಟ್ವೀಟ್​ ಮಾಡಿದ್ದ ಖುಷ್ಬೂ, ಪ್ರತಿಯೊಬ್ಬ ಮೋದಿಯ ಮುಂದೆ ಭ್ರಷ್ಟಾಚಾರದ ಉಪನಾಮವಿದೆ. ಮೋದಿ ಎಂದರೆ ಭ್ರಷ್ಟಾಚಾರ ಎಂಬುದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಹೀಗಾಗಿ ಮೋದಿ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿ, ಏಕೆಂದರೆ ಅದು ಅವರಿಗೆ ಸರಿ ಹೊಂದುತ್ತದೆ. ನೀರವ್​, ಲಲಿತ್​ ನಮೋ= ಭ್ರಷ್ಟಾಚಾರ ಎಂದು ಖುಷ್ಬೂ ಟ್ವೀಟ್​ ಮಾಡಿದ್ದರು.
ಇದನ್ನೂ ಓದಿ:ವಿಜಯಾನಂದ ಅತ್ಯುತ್ತಮ ಬಯೋಪಿಕ್; ಐದು ಪ್ರಶಸ್ತಿಗಳ ಸಂಭ್ರಮ
Yahan#Modiwahan#Modijahan dekho#Modi..lekin yeh kya?? Har#Modike aage#bhrashtachaarsurname laga hua hai..toh baat ko no samjho..#Modimutlab#bhrashtachaar..let's change the meaning of#Modito corruption..suits better..#Nirav#Lalit#Namo= corruption..👌👌😊😊
— KhushbuSundar (@khushsundar)February 15, 2018

ಖುಷ್ಬೂ ಮಾಡಿದ್ದ ಟ್ವೀಟ್​, 2019ರಲ್ಲಿ ರಾಹುಲ್​ ಗಾಂಧಿ ಆಡಿದ್ದ ಮಾತಿನ ನಿಖರ ಪಡಿಯಚ್ಚು ಆಗಿತ್ತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್​, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ಖುಷ್ಬೂ ತಮ್ಮ ಹಳೆಯ ವೈರಲ್​ ಟ್ವಿಟ್​ಗೆ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್​ನಲ್ಲಿದ್ದಾಗ ಮೋದಿ ಕುರಿತು ಮಾಡಿದ್ದ ಟ್ವೀಟ್​ ಬಗ್ಗೆ ನಾನೇನು ನಾಚಿಕೆಪಟ್ಟುಕೊಳ್ಳುವುದಿಲ್ಲ. ನಾನು ಪಕ್ಷದ ನಾಯಕರನ್ನು ಅನುಸರಿಸುತ್ತಿದ್ದೆ ಮತ್ತು ಆವಾಗ ಪಕ್ಷದ ಭಾಷೆಯನ್ನು ನಾನು ಮಾತನಾಡುತ್ತಿದ್ದೆ ಖುಷ್ಬೂ ಸಮರ್ಥನೆ ನೀಡಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ನೀಡಿದ್ದ​ ಹೇಳಿಕೆಯಿಂದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಅಸಮಾಧಾನಗೊಂಡು ದೂರು ದಾಖಲಿಸಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್​ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್​ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.
ಇದನ್ನೂ ಓದಿ:ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?
ಈ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಖುಷ್ಬೂ ಟ್ವೀಟ್​ ಭಾರೀ ಚರ್ಚೆಯಾಗುತ್ತಿದೆ. ರಾಹುಲ್​ಗೂ ಮುಂಚೆಯೇ ಖುಷ್ಬೂ ಟ್ವೀಟ್​ ಮಾಡಿದ್ದು, ಪೂರ್ಣೇಶ್​ ಮೋದಿ ಅವರು ಖುಷ್ಬೂ ವಿರುದ್ಧವೂ ದೂರು ದಾಖಲಿಸುತ್ತಾರಾ ಎಂದು ಕಾಂಗ್ರೆಸ್​ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್​ನಲ್ಲಿದ್ದ ಖುಷ್ಬೂ 2021ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮೋದಿ ಎಂಬ ನಿಮ್ಮ ಶಿಷ್ಯನೊಬ್ಬ ಖುಷ್ಬೂ ಸುಂದರ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವಂತೆ ಮಾಡುತ್ತೀರಾ? ಎಂದು ಕಾಂಗ್ರೆಸ್​ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್​ ಟ್ವೀಟ್​ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಸದಸ್ಯತ್ವದಿಂದ ರಾಹುಲ್​ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದ ಖುಷ್ಬೂ, ಕೆಲವು ದಿನಗಳ ಹಿಂದೆ ತಾನು ದುರದೃಷ್ಟವಶಾತ್ ಸಂಸದ ಎಂದು ರಾಹುಲ್​ ಹೇಳಿಕೊಂಡಿದ್ದರು. ಅವರು ಮಾತು ಈಗ ನಿಜವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೇ ಅಲ್ಲದೆ, ರಾಹುಲ್​ ವಿರುದ್ಧ ಕಿಡಿಕಾರಿರುವ ಖುಷ್ಬೂ, ಮನಮೋಹನ್ ಸಿಂಗ್ ಅವರು 2013ರಲ್ಲಿ ಹೊರಡಿಸಿದ ಸುಪ್ರೀಂಕೋರ್ಟ್​ ತೀರ್ಪಿನ ಮೇಲೆ ಸುಗ್ರೀವಾಜ್ಞೆಯನ್ನು ತರಲು ಬಯಸಿದ್ದರು. ರಾಹುಲ್ ಗಾಂಧಿ ಅದನ್ನು ತುಂಡುಗಳಾಗಿ ಹರಿದು ಹಾಕಿದರು. ವಿಪರ್ಯಾಸವೆಂದರೆ ಅವರ ಅನರ್ಹತೆಯು ಅದೇ ತೀರ್ಪಿನಿಂದ ಬಂದಿದೆ. ಕರ್ಮದ ಫಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ:ವೇಗದ 5G ನೆಟ್​​ವರ್ಕ್​ ನೀಡಲು ದೇಶಾದ್ಯಂತ 1 ಲಕ್ಷ ​ಟವರ್​ಗಳನ್ನು ಸ್ಥಾಪಿಸಿದ ರಿಲಯನ್ಸ್​​ ಜಿಯೋ
ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​, 1951ರ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ 8 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಒಂದು ವೇಳೆ ಸೂರತ್​ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದರೆ ರಾಹುಲ್​ ನಿರಾಳರಾಗಲಿದ್ದಾರೆ. ಇನ್ನು ರಾಹುಲ್​ರನ್ನು ಅನರ್ಹಗೊಳಿಸಿರುವ ನಿರ್ಧಾರ ಕೇಂದ್ರದ ರಾಜಕೀಯ ದ್ವೇಷ ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ರಾಹುಲ್​ ಗಾಂಧಿ ಅನರ್ಹತೆ: ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಹಳೇ ಟ್ವೀಟ್ ವೈರಲ್​

31ರೊಳಗೆ ಈ ಐದು ಕೆಲಸ ಮುಗಿಸಿ; ಬಾಕಿ ಇಟ್ಟರೆ ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ

ಬಲಿಷ್ಠ ಭಾರತ ನಿರ್ಮಾಣಕ್ಕೆ ಐಐಟಿ ಕೊಡುಗೆ

ಕ್ಷಮೆ ಕೇಳಲು ಸಾವರ್ಕರ್ ಅಲ್ಲ, ಹೋರಾಟ ನಿಲ್ಲಿಸುವುದಿಲ್ಲ; ಅನರ್ಹತೆ ಬಳಿಕ ರಾಹುಲ್ ಗಾಂಧಿ ಗುಡುಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
