ಪಣಜಿ:ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೂ ಕೆಲವು ರಾಜ್ಯಗಳಲ್ಲಿ ತುಂಬ ಕಡಿಮೆ ಸಂಖ್ಯೆಯಲ್ಲಿದೆ. ಗೋವಾದಲ್ಲೂ ಅಷ್ಟೇ ಇದುವರೆಗೆ ಕೇವಲ 267 ಕೊವಿಡ್​-19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲೂ 65 ಮಂದಿ ಚೇತರಿಸಿಕೊಂಡು ಡಿಸ್​​ಚಾರ್ಜ್​ ಆಗಿದ್ದಾರೆ.
ಆದರೆ ಈಗ ಗೋವಾದಲ್ಲಿ ಕರೊನಾ ಸೋಂಕು ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಬಗ್ಗೆ ವರದಿಯಾಗಿದೆ. ಕರೊನಾ ಕಾಲಿಟ್ಟ ಹಳ್ಳಿಗಳ ಜನರು ಸ್ವಯಂಪ್ರೇರಣೆಯಿಂದ ತಮ್ಮ ಗ್ರಾಮಗಳನ್ನೆಲ್ಲ ಸಂಪೂರ್ಣ ಲಾಕ್​ಡೌನ್​ ಮಾಡಿಕೊಂಡಿದ್ದಾರೆ. ಅವರೂ ಎಲ್ಲಿಗೂ ಹೊರಗೆ ಹೋಗುತ್ತಿಲ್ಲ. ಯಾರೇ ಬಂದರೂ ಅವರನ್ನು ಬಿಟ್ಟುಕೊಳ್ಳುತ್ತಿಲ್ಲ. ಎಲ್ಲ ಚಟುವಟಿಕೆಗಳನ್ನೂ ಬಂದ್​ ಮಾಡಿದ್ದಾರೆ. ಈ ಮೂಲಕ ಪ್ರಬುದ್ಧತೆ ತೋರುತ್ತಿದ್ದಾರೆ.
ಇದನ್ನೂ ಓದಿ:ಕೊವಿಡ್​-19ನಿಂದ ನರಳಿ ಮೃತಪಟ್ಟ ಪತ್ರಕರ್ತನ ಕೊನೇ ಸಂದೇಶ ನೋಡಿ ಸಾರ್ವಜನಿಕರು ಕೆಂಡಾಮಂಡಲ…
ಕರ್ನಾಟಕವನ್ನು ಸಂಪರ್ಕಿಸುವ ಗೋವಾದ ಪೂರ್ವ ಅಂಚಿನ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಸತಾರಿ ಜಿಲ್ಲೆಯ ಗುಲೇಲಿ ಎಂಬ ಗ್ರಾಮದ ಆರೋಗ್ಯ ಕಾರ್ಯಕರ್ತನೋರ್ವನಲ್ಲಿ ಜೂ.6ರಂದು ಮೊದಲ ಬಾರಿಗೆ ಕೊವಿಡ್​-19 ಕಾಣಿಸಿಕೊಂಡಿತು. ಕೂಡಲೇ ಎಚ್ಚೆತ್ತ ಹಳ್ಳಿಗರು ತಮ್ಮನ್ನು ತಾವು ಸ್ವತಃ ಲಾಕ್​ಡೌನ್​ಗೆ ಒಳಪಡಿಸಿಕೊಂಡಿದ್ದಾರೆ. ಹಳ್ಳಿಯಲ್ಲಿದ್ದ ಕೆಲವೇ ಅಂಗಡಿಗಳು ಬಾಗಿಲು ಮುಚ್ಚಿವೆ. ಅಲ್ಲಿನ ಜನರು ತಮ್ಮತಮ್ಮ ಮನೆಗಳಲ್ಲಿ ಸೆಲ್ಫ್​ ಕ್ವಾರಂಟೈನ್ ಆಗಿದ್ದಾರೆ.
ಆದರೂ ಕರೊನಾ ಅಲ್ಲೇ ಪಕ್ಕದ ಇನ್ನೊಂದು ಹಳ್ಳಿಗೆ ಹರಡಿದೆ. ಅದೇ ಕರ್ನಾಟಕ-ಗೋವಾ ಗಡಿ ಭಾಗದ ಕೇರಿ ಎಂಬ ಗ್ರಾಮದ ಹಲವರಲ್ಲಿ ಕರೊನಾ ಕಾಣಿಸಿಕೊಂಡಿದೆ. ಹಾಗಾಗಿ ಆ ಗ್ರಾಮವನ್ನು ನಾಲ್ಕು ದಿನ ಸಂಪೂರ್ಣ ಸೀಲ್​ ಮಾಡಲಾಗಿದೆ.
ಕೇರಿಯಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಯುವಕರು, ನಾಗರಿಕರು ಎಲ್ಲ ಸೇರಿ ಸ್ವಯಂ ಪ್ರೇರಣೆಯಿಂದ ಎಲ್ಲ ಅಂಗಡಿಗಳನ್ನೂ ಮುಚ್ಚಿದ್ದಾರೆ. ನಾವೆಲ್ಲರೂ ಸೇರಿ ಕರೊನಾವನ್ನು ಹತ್ತಿಕ್ಕಲೇ ಬೇಕು. ಇದು ಮುಂದೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಹಾಗಾಗಿ ನಮಗೆ ನಾವೇ ಸೀಲ್​ ಡೌನ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹಳ್ಳಿಯ ಯುವಕರೆಲ್ಲ ಆ ಗ್ರಾಮದ ಮುಖ್ಯಸ್ಥನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಅರ್ಜುನ ಪ್ರಶಸ್ತಿಗೆ ಸಾಕ್ಷಿ, ಮೀರಾ ಆಸೆ ಪಡಲು ಇದೇ ಕಾರಣವಿರಬಹುದೇ?
ಸದ್ಯ ಸರ್ಕಾರದ ವತಿಯಿಂದ ಹಳ್ಳಿಯಲ್ಲಿ ಯಾವುದೇ ಲಾಕ್​ಡೌನ್​, ಸೀಲ್​ ಡೌನ್ ಮಾಡಲಾಗಿಲ್ಲ. ಅವರು ಹಳ್ಳಿಯನ್ನು ತಲುಪುವ ಮೊದಲೇ ಹಳ್ಳಿಗರೇ ಸೇರಿ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತಾವು ಲಾಕ್​ ಮಾಡಿಕೊಂಡ ಕ್ರಮ ಎಲ್ಲರಿಂದ ಶ್ಲಾಘನೆಗೆ ಒಳಗಾಗಿದೆ.
ಕರೊನಾ ನಿಯಂತ್ರಣ ಮಾಡಲು ಲಾಕ್​ಡೌನ್​ ಮಾಡಲಾಗಿದೆ. ನಿಮ್ಮನಿಮ್ಮ ಮನೆಯಲ್ಲಿ ನೀವಿರಿ ಎಂದು ಹೇಳಿದರೂ ಕೇಳದೆ, ಮನಸಿಗೆ ಬಂದಂತೆ ಸುತ್ತಾಡಿದ್ದ ಹಲವು ರಾಜ್ಯಗಳ ಜನರ ಎದುರು ಈ ಹಳ್ಳಿಗರ ಕ್ರಮ ನಿಜಕ್ಕೂ ಅನುಕರಣೀಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಸತಾರಿ ತಾಲೂಕಿನಲ್ಲಿ ಅನೇಕರು ಆರೋಗ್ಯ ಕಾರ್ಯಕರ್ತರು ಇದ್ದಾರೆ. ಕೊವಿಡ್​-19 ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದೇ ಸೋಂಕು ತಗುಲಲು ಕಾರಣ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)
ಇದನ್ನೂ ಓದಿ:ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೆ ಅಡ್ಡಿ ಮೇಲೆ ಅಡ್ಡಿ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 2 =
Remember me
