ಇಸ್ರೇಲ್:ಇಸ್ರೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಫೇಕ್ ​​​​ವಿಡಿಯೋಗಳು ವೈರಲ್ ಆಗುತ್ತಿವೆ. ಇಸ್ರೇಲ್-ಹಮಾಸ್ ಸಂಘರ್ಷದ ನೂರಾರು ನಕಲಿ ವೀಡಿಯೊಗಳು X ಖಾತೆಯಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋಗಳು ಇಸ್ರೇಲ್​​​​ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಪ್ಪಾಗಿ ಹೇಳಲಾಗುತ್ತಿದೆ.
ಓರ್ವ X ಬಳಕೆದಾರ ಇಸ್ರೇಲ್‌ಗೆ ಸಹಾಯ ಮಾಡಲು ಯುಎಸ್​​​ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಕಳುಹಿಸುತ್ತಿದೆ ಎಂದು ಹೇಳುವ ಮೂಲಕ ವೈಟ್ ಹೌಸ್‌ನಿಂದ ನಕಲಿ ಸುದ್ದಿ ಬಿಡುಗಡೆ ಹಂಚಿಕೊಂಡಿದ್ದಾನೆ. ಆದರೆ ಜೋ ಬೈಡೆನ್ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಶ್ವೇತಭವನ ಸೋಮವಾರ ದೃಢಪಡಿಸಿದೆ. ಆದರೆ ಬಳಕೆದಾರರು ಈ ಕುರಿತು ತಪ್ಪು ಮಾಹಿತಿಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
https://twitter.com/adnandani41/status/1711346300019519865
ಈ ಮಧ್ಯೆ, ಹಮಾಸ್ ಹೋರಾಟಗಾರರು ದಕ್ಷಿಣ ಇಸ್ರೇಲ್‌ನ ಕಿಬ್ಬುಟ್ಜ್​​​​ನಲ್ಲಿ ಮನೆಗಳಿಗೆ ನುಗ್ಗಿ, ಮಕ್ಕಳ ಶಿರಚ್ಛೇದ ಮಾಡಿ ಇಡೀ ಕುಟುಂಬಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬ ವರದಿಗಳಿವೆ. ಆದರೆ ಮುಖ್ಯ ವರದಿಗಾರರೊಬ್ಬರು ಇದು ಸುಳ್ಳು ಆರೋಪ ಮತ್ತು ಅಂತಹ ದುಷ್ಕೃತ್ಯ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಯುದ್ಧವಿಮಾನಗಳು ಹಾರುತ್ತಿರುವ ನಕಲಿ ವಿಡಿಯೋವನ್ನು ಬಲಪಂಥೀಯ ರಾಜಕೀಯ ಪಕ್ಷವಾದ ಬ್ರಿಟನ್ ಫಸ್ಟ್‌ನ ನಾಯಕ ಪಾಲ್ ಗೋಲ್ಡಿಂಗ್ ಕೂಡ ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋವನ್ನು ವಿಡಿಯೋ ಗೇಮ್ ಸಿಮ್ಯುಲೇಟರ್‌ನಲ್ಲಿ ರಚಿಸಲಾಗಿದೆ. ಹಾಗೆಯೇ ಇದನ್ನು ಈ ಹಿಂದೆ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಾಕೆಟ್ ಬೆಂಕಿಯ ಸುರಿಮಳೆ ಸುರಿಸುವ ಮತ್ತೊಂದು ವಿಡಿಯೋ ಕೂಡ ವಿಡಿಯೋ ಗೇಮ್‌ನಿಂದ ಬಂದಿದೆ.
A post shared by United World of Muslims (@unitedworldofmuslim)
ಶನಿವಾರ ನಡೆದ ಹಠಾತ್ ದಾಳಿಯ ವೇಳೆ ಇಸ್ರೇಲಿ ಸೇನೆಯ ಉನ್ನತ ಜನರಲ್ ನಿಮ್ರೋಡ್ ಅಲೋನಿ ಅವರನ್ನು ಹಮಾಸ್ ಗುಂಪು ವಶಪಡಿಸಿಕೊಂಡಿದೆ ಎಂದು ವಿಡಿಯೋ ಬಂದಿದೆ. ಆದರೆ ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ದೃಢಪಡಿಸಿದ್ದಾರೆ. ಅಲೋನಿ ಅವರು ಭಾನುವಾರ ಸಭೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
בימים כואבים ומורכבים אלו שחרושת השמועות עולה על גדותיה, אנו מזכירים להסתמך על מקורות רשמיים, להימנע מהפצת שמועות ומידע לא מאומת, ומהעברת קבצים וקישורים חשודים שמקורם לא ברור.כאן בשבילכם אם תרצו לדווח על פייק ניוז שקשור בתחום הסייבר או לבדוק את אמיתות ההודעות, בחיוג ישיר 119.pic.twitter.com/HZS5gulrVS
— Cyber Israel – מערך הסייבר הלאומי (@Israel_Cyber)October 9, 2023

ಇಸ್ರೇಲಿ ಜನರಲ್‌ಗಳನ್ನು ಹಮಾಸ್ ಹೋರಾಟಗಾರರು ಸೆರೆಹಿಡಿಯುತ್ತಿದ್ದಾರೆ ಎಂದು ಮತ್ತೊಂದು ವಿಡಿಯೋ ಬಂದಿದೆ. ಆದರೆ ಕರಾಬಾಕ್ ಪ್ರತ್ಯೇಕತಾವಾದಿ ನಾಯಕರನ್ನು ಅಜೆರ್ಬೈಜಾನ್ ಬಂಧಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇಸ್ರೇಲ್‌ನ ರಾಷ್ಟ್ರೀಯ ಸೈಬರ್ ನಿರ್ದೇಶನಾಲಯವು X ನಲ್ಲಿ ತಪ್ಪು ಮಾಹಿತಿಯನ್ನು ಹರಡದಂತೆ ಜನರನ್ನು ಒತ್ತಾಯಿಸಿದೆ. ದಿನೇ ದಿನೆ ಇಸ್ರೇಲ್ ಭದ್ರತಾ ಪಡೆಗಳು ಮತ್ತು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ಗುಂಡಿನ ಚಕಮಕಿಗಳೊಂದಿಗೆ ಇಸ್ರೇಲ್-ಹಮಾಸ್ ಸಂಘರ್ಷವು ಉಲ್ಬಣಗೊಳ್ಳುತ್ತಿದೆ. ದಾಳಿಯ ನಂತರ ಎರಡೂ ಕಡೆಯಿಂದ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
