ನವದೆಹಲಿ:ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ಜತೆ ಯಾವುದೇ ಹಮ್ಮುಬಿಮ್ಮು ಇಲ್ಲದೇ ಸರಳ ರೀತಿಯಲ್ಲಿ ಬೆರೆಯುವ ಗುಣ. ಧೋನಿಯ ಸಿಂಪಲ್‌ ಜೀವನದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಎಂ ಎಸ್ ಧೋನಿ, ತಮ್ಮ ನಿವಾಸದಿಂದ ಸೆಕ್ಯೂರಿಟಿ ಗಾರ್ಡ್‌ವೊಬ್ಬರನ್ನು ಧೋನಿ ತಮ್ಮ ಬೈಕ್‌ನಲ್ಲಿ ಮೈನ್ ಗೇಟ್‌ಗೆ ಡ್ರಾಪ್ ಮಾಡಿರುವ ಹಳೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್‌ ಹೌಸ್ ಎಷ್ಟು ದೊಡ್ಡದಿದೆ ಎಂದರೆ, ಸೆಕ್ಯೂರಿಟಿ ಗಾರ್ಡ್‌ ಅವರನ್ನು ಪ್ರವೇಶದ್ವಾರಕ್ಕೆ ತಂದು ಬಿಡಲು ಬೈಕ್‌ನಲ್ಲಿ ಬರಬೇಕಾಗುವಷ್ಟ ವಿಶಾಲವಾಗಿದೆ. ಹೀಗಿತ್ತು ನೋಡಿ ಎನ್ನುವುದನ್ನು ನೀವೆ ನೋಡಿ..
Dhoni's Farmhouse is so big that he need bike to drop security guard at the Entrance 😭
PS : Lucky security guard who gets bike ride with Dhoni .pic.twitter.com/l0KS3dkwmj
— MAHIYANK™ (@Mahiyank_78)July 2, 2023

ಕೆಲದಿನಗಳ ಹಿಂದಷ್ಟೇ ಧೋನಿ ಅವರು ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶನ್‌ ಗೇಮ್‌ ಆಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಬ್ಬರು ಧೋನಿಗೆ ಚಾಕಲೇಟ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ.
ಮಹೇಂದ್ರ ಸಿಂಗ್ ಧೋನಿ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ದೃತಿಗೆಡದೇ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಗುಣ ಹೊಂದಿರುವುದರಿಂದಲೇ ಮಹಿಯನ್ನು ಕ್ಯಾಪ್ಟನ್ ಕೂಲ್ ಎಂದು ಕರೆಯಲಾಗುತ್ತದೆ.
ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್‌ಗೆ ಟ್ರಕ್ ಡಿಕ್ಕಿ; 10 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
