ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚೊಚ್ಚಲ ಗಗನಯಾನದ ಭಾಗವಾಗಿ ಮೊದಲ ಮಾನವ ರಹಿತ ಮಿಷನ್ ಈ ವರ್ಷ ಡಿಸೆಂಬರ್​ನಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಬುಧವಾರ ಹೇಳಿದ್ದಾರೆ.
‘ಹ್ಯೂಮನ್ ಸ್ಪೇಸ್​ಲೈಟ್ ಆ್ಯಂಡ್ ಎಕ್ಸ್​ಪ್ಲೋರೇಷನ್- ಪ್ರಸೆಂಟ್​ ಚಾಲೆಂಜಸ್ ಆ್ಯಂಡ್ ಫ್ಯೂಚರ್ ಟ್ರೆಂಡ್ಸ್​’ ಕುರಿತ ಸಿಂಪೋಸಿಯಂನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಚಂದ್ರಯಾನ 2021ರ ಡಿಸೆಂಬರ್​ನಲ್ಲಿ ನಡೆಸಲು ಉದ್ದೇಶಿಸಿದ್ದು, ಅದಕ್ಕೂ ಪೂರ್ವಭಾವಿಯಾಗಿ ಎರಡು ಮಾನವರಹಿತ ಮಿಷನ್​ಗಳನ್ನು 2020ರ ಡಿಸೆಂಬರ್ ಮತ್ತು 2021ರ ಜೂನ್​ನಲ್ಲಿ ನಿರ್ವಹಿಸಲಾಗುವುದು ಎಂದು ವಿವರಿಸಿದರು.
ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಭವಿಷ್ಯದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಪೂರ್ಣ ಪ್ರಮಾಣದ ಆಸ್ಟ್ರೋನಾಟ್ ಟ್ರೇನಿಂಗ್ ಫೆಸಿಲಿಟಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.ನಾಸಾ ಮತ್ತು ಇತರ ಬಾಹ್ಯಾಕಾಶ ಕೇಂದ್ರಗಳ ಜತೆಗೆ ಸಂಪರ್ಕದಲ್ಲಿದ್ದು, ಅವರ ಅನುಭವವನ್ನೂ ಪಡೆದುಕೊಳ್ಳುತ್ತ ನಮ್ಮ ಕೆಲಸ ಮುಂದುವರಿಸಿದ್ದೇವೆ.ಈ ಗಗನಯಾನ ಪ್ರಾಜೆಕ್ಟ್ ನಮ್ಮ ಇಂಟರ್ ಪ್ಲಾನೆಟರಿ ಮಿಷನ್ ಆಗಿದ್ದು, ದೀರ್ಘಾವಧಿಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ಶಿವನ್ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
