ನವದೆಹಲಿ:ಭಾರತ ಮೂಲದ ರಿಷಿ ಸುನಕ್ ಬ್ರಿಟನ್​ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ ಭಾರತೀಯರಂತೂ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯವಾದ ಚರ್ಚೆಯಲ್ಲಿ ತೊಡಗಿದ್ದಾರೆ.
ಇದೀಗ ನೆಟ್ಟಿಗರು ರಿಷಿ ಸುನಕ್ ಪ್ರಧಾನಿಯಾಗಿರುವುದಕ್ಕೆ, ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಇವರಿಬ್ಬರ ಮುಖದ ಹೋಲಿಕೆಯಲ್ಲಿ ಸಾಮ್ಯತೆ ಕಂಡುಬಂದಿರುವುದು!
ಜನರಂತೂ ಸಾಮಾಜಿಕ ಜಾಲತಾಣದಲ್ಲಿ ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಫೋಟೋ ಹಾಕಿ ತಮಾಷೆಯ ಶೀರ್ಷಿಕೆ ನೀಡುತ್ತಿದ್ದಾರೆ. ಒಬ್ಬರಂತೂ ರಿಷಿ ಸುನಕ್ ಫೋಟೋ ಹಾಕಿ, ಬ್ರಿಟನ್​ನ ನೂತನ ಪ್ರಧಾನಿ ಆಶಿಶ್​ ನೆಹ್ರಾಗೆ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬರು ಗ್ರೌಂಡ್​ನಲ್ಲಿ ಬೌಲಿಂಗ್ ಮಾಡಿಕೊಂಡಿದ್ದ ನೆಹ್ರಾ, ಬ್ರಿಟನ್ ಪ್ರಧಾನಿ ಯಾವಾಗ ಆದರು ಎಂದು ತಮಾಷೆಯಾಡಿದ್ದಾರೆ.
ಆಶಿಶ್ ನೆಹ್ರಾ ಐಪಿಎಲ್​ನಲ್ಲಿ ಗುಜರಾತ್ ತಂಡದ ಕೋಚ್. ಈ ಸಮಯದ ಫೋಟೋವೊಂದನ್ನು ಪೋಸ್ಟ್ ಮಾಡಿ, ನೆಹ್ರಾ ಐಪಿಎಲ್ ಸಮಯದಲ್ಲಿ ಯುಕೆ ಪ್ರಧಾನಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಟ್ವಿಟರ್​ನಲ್ಲಂತೂ ಒಬ್ಬರು, 2003ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಬಳಿಸಿದ್ದ ನೆಹ್ರಾ, ಇದೀಗ 2022ರಲ್ಲಿ ಬ್ರಿಟನ್​ನ ಪ್ರಧಾನಿ. ಈವರೆಗಿನ ಅವರ ಪಯಣ ಅದ್ಭುತವಾದದ್ದು. ನಿಮಗಿದೋ ಶುಭಾಶಯ ಎಂದು ಸ್ವಾರಸ್ಯಕರವಾಗಿ ಪೋಸ್ಟ್ ಮಾಡಿದ್ದಾರೆ. ತಮಾಷೆಯಾಗಿ ಶುಭಾಶಯ ತಿಳಿಸುತ್ತಾ, ಟ್ವಿಟರ್​ನಲ್ಲಿ DJSingh ಎಂಬುವವರು ಆಶಿಶ್ ನೆಹ್ರಾ ಹಾಗೂ ರಿಷಿ ಸುನಕ್ ಕುಂಭ ಮೇಳದಲ್ಲಿ ಕಾಣೆಯಾದ ಸಹೋದರರಂತೆ ಕಾಣುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ.
Congratulations! Ashish NehraMan! What a journey its been…From taking down 6 wkts in 2003 cricket world cup against England to becoming PM of UK#RishiSunak#ashishnehra2003 2022pic.twitter.com/0NTI9T425K— 🇮🇳 (@A90sKid_)October 24, 2022
Congratulations! Ashish NehraMan! What a journey its been…From taking down 6 wkts in 2003 cricket world cup against England to becoming PM of UK#RishiSunak#ashishnehra2003 2022pic.twitter.com/0NTI9T425K
Congratulations to Ashish Nehra for becoming the next UK prime minister.Ps : Don't forget the Kohinoor 😉pic.twitter.com/pHQgBz0aYN
Rishi Sunak and Ashish Nehra seem to be brothers who were estranged in Kumbh Ka Mela.#Rumor😜😆pic.twitter.com/rMSrFOZb3r
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
