ನವದೆಹಲಿ:ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಜನರು ಮನೆಯಿಂದ ಹೊರಗೆ ಬರುವುದು ವಿರಳವಾಗಿತ್ತು. ಇಡೀ ವಾತಾವರಣವನ್ನು ಗಮನಿಸಿದರೆ, ದೇಶದಲ್ಲಿ ಇಂದು ಮತ್ತೆ ಲಾಕ್​ಡೌನ್​ ಘೋಷಣೆಯಾದಂತೆ ಭಾಸವಾಗುತ್ತಿತ್ತು.
ರಾಜ್ಯದಲ್ಲಿ ಮಧ್ಯಾಹ್ನ 1.32ರ ವೇಳೆಗೆ ಸೂರ್ಯ ಗ್ರಹಣ ಮೋಕ್ಷವಾಗಿದೆ. ಜನರು ಮನೆಗಳಲ್ಲಿ ಪೂಜೆ ನೆರವೇರಿಸಿದ್ದಲ್ಲದೇ, ನಂತರ ದೇವಾಲಯಗಳಿಗೆ ಭೇಟಿ ನೀಡಿದರು.
ಇದನ್ನೂ ಓದಿ;ಚೀನಿಯರ ಪೊಳ್ಳು ವಾದಕ್ಕೆ ‘ಲೈಕ್​’ ಕೊಟ್ಟ ಕಾಂಗ್ರೆಸ್​ ಸಂಸದ ಶಶಿ ತರೂರ್​?
ಮುಂದಿನ ಗ್ರಹಣಗಳು ಯಾವಾಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ*ಜುಲೈ 4-5 ರಂದು ಖಂಡಗ್ರಾಸ ಚಂದ್ರಗ್ರಹಣ*ನವೆಂಬರ್​ 29-30- ಖಂಡಗ್ರಾಸ ಚಂದ್ರ ಗ್ರಹಣ*ಡಿಸೆಂಬರ್​ 14- ಖಗ್ರಾಸ ಸೂರ್ಯ ಗ್ರಹಣ
2021ರಲ್ಲಿ ಸಂಭವಿಸಲಿರುವ ಗ್ರಹಣಗಳ ಮಾಹಿತಿ*ಮೇ 26- ಚಂದ್ರ ಗ್ರಹಣ*ಜೂನ್​ 10- ಸೂರ್ಯ ಗ್ರಹಣ*ನವೆಂಬರ್​ 18-19- ಪಾರ್ಶ್ವ ಚಂದ್ರ ಗ್ರಹಣ*ಡಿಸೆಂಬರ್​ 4 – ಖಗ್ರಾಸ ಸೂರ್ಯ ಗ್ರಹಣ
ಇದನ್ನೂ ಓದಿ;ಕೆಮ್ಮುತ್ತಿದ್ದ…ಕೇಳಿದವರಿಗೆ ತಮಾಷೆಗೆ ಕರೊನಾ‌ ಇದೆ ಎಂದ..!! ಇದನ್ನು ಕೇಳಿಸಿಕೊಂಡವರು ಮಾತ್ರ ಸುಮ್ಮನಾಗಲಿಲ್ಲ..
ಈ ಗ್ರಹಣಗಳಲ್ಲಿ ಬಹುತೇಕವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಮುಂದಿನ ನವೆಂಬರ್​ 29-30 ರಂದು ಸಂಭವಿಸಲಿರುವ ಖಂಡಗ್ರಾಸ ಚಂದ್ರಗ್ರಹಣವು ಏಷ್ಯಾದ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.
ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
