ಹೈದರಾಬಾದ್​:ವಯನಾಡ್​ನಿಂದ ಚುನಾವಣೆಗೆ ಸ್ಪರ್ಧಿಸುವಲ್ಲ, ಹೈದ್ರಾಬಾದ್​ನಿಂದ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನೇರ ಸವಾಲನ್ನು ಎಸಗಿದ್ದಾರೆ.
ಇದನ್ನೂ ಓದಿ:ಕುಮಾರರಾಮ ಆಡಳಿತ ದೇಶಕ್ಕೆ ಮಾದರಿ; ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ ಅಭಿಪ್ರಾಯ
ಸೋಮವಾರ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ ಅಸಾದುದ್ದೀನ್ ಓವೈಸಿ, ರಾಹುಲ್ ಗಾಂಧಿ ಅವರೇ 2024ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ವಯನಾಡ್​ನಿಂದಲ್ಲ, ಹೈದರಾಬಾದ್‌ನಿಂದ ಸ್ಪರ್ಧಿಸಿ. ನಾನು ನಿಮಗೆ ನೇರ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.
#WATCH| Hyderabad, Telangana: AIMIM chief Asaduddin Owaisi says "I am challenging your leader (Rahul Gandhi) to contest elections from Hyderabad and not Wayanad. You keep giving big statements, come to the ground and fight against me. People from Congress will say a lot of…pic.twitter.com/TXANRLWtjJ
— ANI (@ANI)September 24, 2023

ಈ ಬಾರಿ ವಯನಾಡಿಗೆ ಹೋಗಬೇಡಿ, ಹೈದರಾಬಾದ್‌ಗೆ ಬನ್ನಿ. ಇಲ್ಲಿಂದಲೇ ಚುನಾವಣೆಗೆ ನನ್ನ ವಿರುದ್ಧ ಸ್ಪರ್ಧಿಸಿ, ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ, ಅಖಾಡಕ್ಕೆ ಬನ್ನಿ ಸ್ಪರ್ಧೆ ಮಾಡೋಣ ಎಂದು ರಾಹುಲ್​ ಗಾಂಧಿಗೆ ಓಪನ್​ ಚಾಲೆಂಜ್​ ನೀಡಿದರು.
ಇದನ್ನೂ ಓದಿ:ಭಾಜಪದಲ್ಲಿದೆ ಸಮಾನತೆಯ ತತ್ವ-ಸಿದ್ಧಾಂತ; ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ
ಕಾಂಗ್ರೆಸ್‌ನವರು ಬಹಳಷ್ಟು ಮಾತನಾಡುತ್ತಾರೆ, ಇದಕ್ಕೆ ನಾನು ಸಿದ್ಧ. ಗಡ್ಡ ಮತ್ತು ಶೇರ್ವಾನಿ ಹೊಂದಿರುವ ನನ್ನನ್ನು ಎದುರಿಸಲು ಬನ್ನಿ, ಸ್ಪರ್ಧೆಯ ಅರ್ಥವೇನೆಂದು ನಿಮಗೆ ತಿಳಿಯುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಬಾಬರಿ ಮಸೀದಿ ಮತ್ತು ಸೆಕ್ರೆಟರಿಯೇಟ್ ಮಸೀದಿ ಕೆಡವಲಾಯಿತು ಎಂದು ಕಾಂಗ್ರೆಸ್​ ವಿರುದ್ಧ ಆರೋಪಿಸಿದರು,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 17 =
Remember me
