ಹೈದರಾಬಾದ್​:ಆಲ್​ ಇಂಡಿಯಾ ಮಜಿಸ್ ಎ ಇತ್ತೆಹಾದುಲ್​ ಮುಸ್ಲಿಮೀನ್​ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್​ ಸಂಸದ ಅಸಾದುದ್ದೀನ್​ ಒವೈಸಿ ಅವರು ಇಂದು ಸರ್ಕಾರಿ ಉನಾನಿ ಆಸ್ಪತ್ರೆಯಲ್ಲಿ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದಾರೆ.ನಂತರ ಟ್ವೀಟ್ ಮಾಡಿರುವ ಓವೈಸಿ, ನಾನು ಇಂದು ಆ್ಯಂಟಿಜೆನ್​ ಮತ್ತು ಆರ್​ಟಿ-ಪಿಸಿಆರ್​ ತಪಾಸಣೆಗೆ ಒಳಗಾಗಿದ್ದೇನೆ. ಹಾಗೇ ಪ್ರತಿಯೊಬ್ಬರೂ ಕೊವಿಡ್​-19 ಟೆಸ್ಟ್​ಗೆ ಒಳಗಾಗಿ. ತಪಾಸಣೆ ಮಾಡಿಸಿಕೊಳ್ಳಲು ಯಾವ ಕಾರಣಕ್ಕೂ ಹಿಂದೇಟು ಹಾಕಬೇಡಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹಲವು ಜನಪ್ರತಿನಿಧಿಗಳು ಕೊವಿಡ್​-19 ಸೋಂಕಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಓವೈಸಿ ಕೂಡ ಟೆಸ್ಟ್​ ಮಾಡಿಸಿದ್ದರು. ಆ್ಯಂಟಿಜೆನ್​ ಟೆಸ್ಟ್​ ರಿಪೋರ್ಟ್​ 30 ನಿಮಿಷದಲ್ಲಿ ಬಂದಿದ್ದು, ನೆಗೆಟಿವ್​ ಎಂದಿದೆ. ಅಲ್ಲದೆ, ನಾಗರಿಕರು ಮುಂದಾಗಿ ಕೊವಿಡ್​-19 ಟೆಸ್ಟ್​ ಮಾಡಿಸಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ. ದಿನವೊಂದಕ್ಕೆ 1000 ಟೆಸ್ಟ್​​ನ್ನಾದರೂ ಮಾಡಿ ಎಂದು ಆಸ್ಪತ್ರೆಗಳಿಗೆ ಹೇಳಿದ್ದಾರೆ.ಇದನ್ನೂ ಓದಿ:ಕರೊನಾ ವಾರಿಯರ್ಸ್​ಗೆ ಬುದ್ಧಿ ಹೇಳಲು ಹೋಗಿ ಪ್ರಧಾನಿಯನ್ನ ಮಾತಿನ ಮಲ್ಲ ಎಂದ ರೇಣುಕಾಚಾರ್ಯ
ದಕ್ಷಿಣ ಹೈದರಾಬಾದ್​ನಲ್ಲಿ ಒಟ್ಟು 30 ತಪಾಸಣಾ ಕೇಂದ್ರಗಳಲ್ಲಿ ಆ್ಯಂಟಿಜೆನ್​ ಟೆಸ್ಟ್​ ಮಾಡಸಲಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ.ಒಂದೊಮ್ಮೆ ಆ್ಯಂಟಿಜೆನ್​ ಟೆಸ್ಟ್​ ವರದಿ ನೆಗೆಟಿವ್​ ಎಂದು ಬಂದಿದ್ದರೂ, ನಿಮ್ಮಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಯಾವುದಾದರೂ ಇದ್ದರೆ ಕೂಡಲೇ ಆರ್​ಟಿ-ಪಿಸಿಆರ್​ ತಪಾಸಣೆಗೆ ಒಳಗಾಗಿ ಎಂದೂ ಓವೈಸಿ ಹೇಳಿದ್ದಾರೆ. (ಏಜೆನ್ಸೀಸ್​)
‘ಶಿವ@58’ ಬರ್ತ್​ಡೇ ಹಾಡು ಬಿಡುಗಡೆ ಮಾಡಲಿದ್ದಾರೆ ಪುನೀತ್​ ರಾಜ್​ಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
