ಗಾಂಧಿನಗರ:ಸೆರೆಮನೆಯಲ್ಲಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು 2013ರ ಅತ್ಯಾಚಾರ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಗುಜರಾತ್​ನ ಗಾಂಧಿನಗರದ ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ನೀಡಿದೆ.
ಅಸಾರಾಂ ಪತ್ನಿ ಸಹಿತ ಆರು ಮಹಿಳೆಯರನ್ನು ಸಾಕ್ಷ್ಯದ ಕೊರತೆ ಕಾರಣದಿಂದ ಕೋರ್ಟ್​​ ದೋಷಮುಕ್ತಗೊಳಿಸಿದೆ. ಅಸಾರಾಂ ಬಾಪುಅಹಮದಾಬಾದ್​ನ ಹೊರವಲಯದಲ್ಲಿರುವ ಆಶ್ರಮದಲ್ಲಿದ್ದ ಮಹಿಳೆಯೊಬ್ಬರ ಮೇಲೆ 2001 ರಿಂದ 2006ರ ವರೆಗೆ ಅತ್ಯಾಚಾರ ನಡೆಸಿದ್ದ ಎಂದು ಅಹಮದಾಬಾದ್​ನ ಚಾಂದ್​ಖೇಡಾ ಪೊಲೀಸರು ಸಲ್ಲಿಸಿದ ಎಫ್​ಐಆರ್ ತಿಳಿಸಿತ್ತು.
Gandhinagar Sessions Court sentenced self-styled godman Asaram to life imprisonment in connection with a decade-old sexual assault case.pic.twitter.com/UgIdHOsuiq— ANI (@ANI)January 31, 2023
Gandhinagar Sessions Court sentenced self-styled godman Asaram to life imprisonment in connection with a decade-old sexual assault case.pic.twitter.com/UgIdHOsuiq
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 2 ಸಿ(ರೇಪ್), 377 (ಅಸಹಜ ಅಪರಾಧಗಳು) ಮೊದಲಾದ ಸೆಕ್ಷನ್​ಗಳಡಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೊಂದು ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಸಾರಾಂ ಬಾಪು, ರಾಜಸ್ಥಾನದ ಜೋಧಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
https://www.vijayavani.net/minor-boy-held-for-uploading-derogatory-video-of-chhatrapati-shivaji/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
