ನವದೆಹಲಿ:ಅಪರಾಧ ಲೋಕದಲ್ಲಿ ಕುಖ್ಯಾತನಾದ ಮನೋಜ್ ಬಕ್ಕರ್​ವಾಲಾನ ಮಗ ಆಶೀಶ್​​ನನ್ನು ಪೊಲೀಸರು ಎನ್​​ಕೌಂಟರ್ ನಡೆಸಿ ಬಂಧಿಸಿದ್ದಾರೆ.ಕಾರ್​​ಜಾಕಿಂಗ್ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಸೇರಿ 60 ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೋಜ್ ಬಕ್ಕರವಾಲಾನ ಮಗ ಆಶೀಶ್​​​.ಆತನನ್ನು ರೋಹಿಣಿ ಬಳಿಯ ಪ್ರಹ್ಲಾದಪುರದಲ್ಲಿ ಬುಧವಾರ ನಡೆದ ಎನ್​​ಕೌಂಟರ್​​ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಆತ ಅಪರಾಧ ಲೋಕದ ಬಗ್ಗೆ ಅತೀವ ಆಕರ್ಷಿತನಾಗಿದ್ದ. ಕುಖ್ಯಾತನಾಗಿದ್ದ ತನ್ನ ತಂದೆಯನ್ನೇ ಅನುಸರಿಸಿ ಆರಾಧಿಸುತ್ತಿದ್ದ. ತಂದೆಯಂತೆಯೇ ಆಗಬೇಕೆಂದು ಬಯಸಿದ್ದ. ಆತನ ಸುಳಿವು ನೀಡಿದವರಿಗೆ 1 ಲಕ್ಷ ರೂ. ಘೋಷಿಸಲಾಗಿತ್ತು.
ಇದನ್ನೂ ಓದಿ:ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!
ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡಿನಿಂದ ಆತನ ಕಾಲಿಗೆ ಗಾಯವಾಗಿದೆ. ಆತನಿಂದ ಮೂರು ಸಜೀವ ಕಾರ್ಟ್​​ರಿಡ್ಜ್​​ಗಳು ಮತ್ತು ಒಂದು ಬಂದೂಕನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ. ” ಬಕ್ಕರ್​ವಾಲಾ ಕಾರ್​ಜಾಕಿಂಗ್ ಮತ್ತು ಪೊಲೀಸ್​ ಸಿಬ್ಬಂದಿಗೆ ಮೇಲೆ ಗುಂಡಿನ ದಾಳಿ ಸೇರಿ ಅಂದಾಜು 60 ಅಪರಾಧ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆನ್ನಲಾಗಿದೆ. ಅವನು ತನ್ನ ತಂದೆ ಮನೋಜ್ ಬಕ್ಕರ್​ವಾಲಾನ ಅಪರಾಧ ಜೀವನದ ಕುರಿತು ಆಕರ್ಷಿತನಾಗಿದ್ದರಿಂದ ಅವನಂತೆಯೇ ಆಗಲು ಬಯಸಿದ್ದ. ತಂದೆಯ ಆರಾಧಕನಾಗಿದ್ದ” ಎಂದು ಡಿಸಿಪಿ (ವಿಶೇಷ ಕೋಶ)ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.ಆಶಿಶ್, ತನಗೆ ಒಂದು ಕೋಟಿ ರೂ. ಹಣ ಕೊಡಲೊಪ್ಪದ  ತನ್ನ ಗ್ರಾಮದ ಆಸ್ತಿ ವ್ಯಾಪಾರಿಯ ಕೊಲೆಗೆ ಸಂಚು ರೂಪಿಸಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.ವ್ಯಕ್ತಿಯೊಬ್ಬನ ಕೊಲೆಗೈದು ಬಾವಾರಾ ಕಾಲುವೆಯಲ್ಲಿ ಎಸೆದಿದ್ದ ಆರೋಪದಲ್ಲಿ ಆತ ಹಾಗೂ ಆತನ ಸ್ನೇಹಿತರನ್ನು ಬಂಧಿಸಲಾಗಿತ್ತು.ಫೆಬ್ರವರಿಯಿಂದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಆನಂತರ ಮತ್ತೆ ಸುಲಿಗೆಗಾಗಿ ಜನರನ್ನು ಬೆದರಿಸಲಾರಂಭಿಸಿದ್ದ.ಮೇ 17 ರಂದು ಆತ ತನ್ನ ಗೆಳೆಯ ಅಮಿತ್ ನೊಂದಿಗೆ ಬಕ್ಕರ್‌ವಾಲಾ ನಿವಾಸಿ ಸತ್ಪಾಲ್ ಮನೆಯ ಮೇಲೆ ಗುಂಡು ಹಾರಿಸಿ 1 ಕೋಟಿ ರೂ.ಹಣಕ್ಕೆ ಬೇಡಿಕೆಯಿಟ್ಟಿದ್ದ. 1 ಕೋಟಿ ರೂ. ಸುಲಿಯಲು ವೈದ್ಯರೊಬ್ಬರಿಗೆ ಬೆದರಿಯೊಡ್ಡಿದ್ದ.
ರಾಮ ಮಂದಿರ ನಿರ್ಮಾಣ ಶುರು; 1000 ವರ್ಷ ಬಾಳಿಕೆ; ನೈಸರ್ಗಿಕ ವಿಕೋಪಗಳಿಗೂ ಜಗ್ಗಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 6 =
Remember me
