ನವದೆಹಲಿ:ಜಮ್ಮು& ಕಾಶ್ಮೀರದಲ್ಲಿ ಭಯೋತ್ಪಾದಕರು ಇನ್ನಷ್ಟು ದುಷತ್ಯ ನಡೆಸಲು ಸಂಚು ರೂಪಿಸುತ್ತಿದ್ದು, ಈ ಸಂಬಂಧ ಉಗ್ರ ಸಂಟನೆಗಳೊಂದಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ಐಎಸ್​ಐ ಮತ್ತು ಅನೇಕ ಭಯೋತ್ಪಾದನೆ ಸಂಟನೆಗಳ ನಾಯಕರ ನಡುವೆ ಇತ್ತೀಚೆಗೆ ಸಭೆ ನಡೆದಿದ್ದು, ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ಸಂಟಿಸಲು ಹಾಗೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಆಕ್ರಮಣಗಳನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.ಪಾಕ್​ ಆಕ್ರಮಿತ ಕಾಶ್ಮೀರದ ಮುಜಾರಾಬಾದ್​ನಲ್ಲಿ ಸೆಪ್ಟೆಂಬರ್​ 21ರಂದು ನಡೆದ ಸಭೆಯ ವಿವರಗಳು ಭಾರತೀಯ ಗುಪ್ತಚರ ದಳಗಳಿಗೆ ಲಭ್ಯವಾಗಿದೆ. ಕಾಶ್ಮೀರದ ಭಾರತೀಯ ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಹತ್ಯೆಗಳನ್ನು ನಡೆಸಲು ಸಭೆ ನಿರ್ಧರಿಸಿದೆ ಎನ್ನಲಾಗಿದೆ.ಯಾರು ಟಾರ್ಗೆಟ್​?:ಪೊಲೀಸ್​ ಇಲಾಖೆ, ಭದ್ರತಾ ಪಡೆಗಳು ಮತ್ತು ಬೇಹುಗಾರಿಕೆ ದಳಗಳಲ್ಲಿ ಕಾರ್ಯ ನಿರ್ವಹಿಸುವ ಕಾಶ್ಮೀರಿಗಳನ್ನು ಹುಡುಕಿ ಕೊಲ್ಲಬೇಕೆನ್ನುವುದು (ಟಾರ್ಗೆಟ್​ ಕಿಲ್ಲಿಂಗ್​) ಸಭೆಯ ನಿರ್ಧಾರವಾಗಿದೆ. ಕಾಶ್ಮೀರಿಯೇತರ ಮತ್ತು ಬಿಜೆಪಿ ಹಾಗೂ ಆರ್​ಎಸ್​ಎಸ್​ನೊಂದಿಗೆ ಸಂಪರ್ಕವಿರುವ ಜನರೂ ಟಾರ್ಗೆಟ್​ ಪಟ್ಟಿಯಲ್ಲಿ ಸೇರಲಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭಯದ ವಾತಾವರಣಸೃಷ್ಟಿಸಿ ಉದ್ವಿಗ್ನತೆ ಉಂಟು ಮಾಡಲು ಐಎಸ್​ಐ 200 ಜನರ “ಹಿಟ್​&ಲಿಸ್ಟ್​’ ತಯಾರಿಸಿದೆ. ಅದರಲ್ಲಿರುವವರನ್ನು ಕೊಲ್ಲುವುದು ಗುರಿಯಾಗಿದೆ. ಹೊಸದಾಗಿ ರಚಿಸಲಾಗುವ ಭಯೋತ್ಪಾದನೆ ಸಂಟನೆಗೆ ಟಾರ್ಗೆಟ್​ ಕಿಲ್ಲಿಂಗ್​ನ ಹೊಣೆ ವಹಿಸಲು ಸಭೆ ನಿರ್ಧರಿಸಿದೆ.
ನಾಗರಿಕರನ್ನು ಕೊಂದಿದ್ದ ಉಗ್ರನ ಹತ್ಯೆಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಉಗ್ರನನ್ನು ಪುಲ್ವಾಮಾದಲ್ಲಿ ಭದ್ರತಾ ಪಡೆ ಹತ್ಯೆ ಮಾಡಿದೆ. ಉಗ್ರ ವಹಿಬಾಗ್​ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಈ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
