ಜೈಪುರ:ಸಿಎಂ ಅಶೋಕ್​ ಗೆಹ್ಲೋಟ್​ ಅಧಿಕೃತ ನಿವಾಸದಿಂದ 25 ಕಿ.ಮೀ. ದೂರದಲ್ಲಿದೆ ಬೆಂಬಲಿಗ ಶಾಸಕರು ಬೀಡುಬಿಟ್ಟಿರುವ ಫೇರ್​ಮೌಂಟ್​ ರೆಸಾರ್ಟ್​.
ದೆಹಲಿ- ಜೈಪುರ ರಸ್ತೆಯಲ್ಲಿರುವ ರೆಸಾರ್ಟ್​ನಲ್ಲಿ ಐಷಾರಾಮಕ್ಕೇನೂ ಕೊರತೆಯಿಲ್ಲ. ಮೊಘಲ್ ಶೈಲಿಯ ಅರಮನೆಗಳ ಮಾದರಿಯಲ್ಲಿಯೇ ಇದು ನಿರ್ಮಿಸಲ್ಪಟ್ಟಿದೆ. ಜತೆಗೆ, ಗ್ರಾಹಕರಿಗೆ ಅತ್ಯಂತ ವೈಭವೋಪೇತ, ಪಂಚಾತಾರಾ ಸೇವೆಗಳು ಇಲ್ಲಿವೆ.
ಇದನ್ನೂ ಓದಿ;ಕೋವಿಡ್​ ಕೇರ್​ ಸೆಂಟರ್​ನಲ್ಲಿ ಹಾಸಿಗೆ ಹಂಚಿಕೆಗೆ ಕೇಂದ್ರಿಕೃತ ವ್ಯವಸ್ಥೆ; ಸಚಿವ ಸುಧಾಕರ್​ ಭರವಸೆ
ಈ ರೆಸಾರ್ಟ್​ನಲ್ಲಿ 245ಕ್ಕೂ ಅಧಿಕ ರೂಮ್​ಗಳಿದ್ದು, ಕಾಂಗ್ರೆಸ್​ನ 100ಕ್ಕೂ ಅಧಿಕ ಶಾಸಕರು ಇಲ್ಲಿದ್ದಾರೆ ಎಂದು ಹೇಳಲಾಗಿದೆ. ​ಇಲ್ಲಿನ ಸಾಮಾನ್ಯ ಕೊಠಡಿಯ ಬಾಡಿಗೆ ಪ್ರತಿದಿನಕ್ಕೆ 8,500 ರೂ.ಗಳಿಂದ ಆರಂಭವಾಗುತ್ತದೆ ಎಂದು ರೆಸಾರ್ಟ್​ನ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.
ಪ್ರವಾಸಿಗರ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಈ ಮೊತ್ತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ. ಕೋವಿಡ್​ ಕಾರಣದಿಂದಾಗಿ ಬಹುತೇಕ ಪಂಚತಾರಾ ಹೋಟೆಲ್​ಗಳಲ್ಲೂ ಬಾಡಿಗೆಯನ್ನು ಗಣನೀಯವಾಗಿ ಕೆಳಗಿಳಿಸಲಾಗಿದೆ. ವಾರಾಂತ್ಯದವರೆಗೆ ಕೊಠಡಿ ಲಭ್ಯವಿಲ್ಲ ಎಂದು ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ;ರಾಜ್ಯಪಾಲರೆದುರು ಬಹುಮತ ಸಾಬೀತು ಪಡಿಸಿ; ಗೆಹ್ಲೋಟ್​ಗೆ ಸವಾಲು ಹಾಕಿದ ಸಚಿನ್​ ಪೈಲಟ್​ ಬಣ
ಅತ್ಯಂತ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೆಸಾರ್ಟ್​ನಲ್ಲಿ ಸ್ವಿಮ್ಮಿಂಗ್​ ಪೂಲ್​, ಸ್ಪಾ, ರೆಸ್ಟೋರಂಟ್​, ಬಾರ್​ ಸೇವೆಗಳಿವೆ. ವಿವಿಧ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ. ಗ್ರಾಹಕರಿಲ್ಲದೇ ಕಂಗೆಟ್ಟಿರುವ ಹೋಟೆಲ್​​ ಉದ್ಯಮಕ್ಕೆ ಈ ರೆಸಾರ್ಟ್​ ರಾಜಕೀಯ ಕೊಂಚ ರಿಲೀಫ್​ ನೀಡಬಹುದೇನೋ?
ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
