ಮುಂಬೈ:ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನೇಮಕಗೊಳ್ಳಲು ಕೆಲವೇ ತಿಂಗಳುಗಳ ಮೊದಲು ಚುನಾವಣಾ ಆಯುಕ್ತ (ಇಸಿ) ಮತ್ತು ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಉಪಾಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ.ಲವಾಸಾ ಎಡಿಬಿ ಖಾಸಗಿ ವಲಯ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ವನ್ನು ನಿರ್ವಹಿಸಲಿದ್ದಾರೆ. ದಿವಾಕರ್ ಗುಪ್ತಾ ಅವರ ಅವಧಿ ಆಗಸ್ಟ್ 31 ರಂದು ಕೊನೆಗೊಳ್ಳಲಿದ್ದು, ಅವರ ನಂತರ ಲವಾಸಾ ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನು ಓದಿ:ಕೋವಿಡ್​ ಸೋಂಕಿತ ಪವಾಡ ಪುರುಷ ಹಾಲಸ್ವಾಮೀಜಿ ನಿಧನ
ಹರಿಯಾಣ ಕೇಡರ್‌ನ 1980 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಲವಾಸಾ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸಾರ್ವಜನಿಕ ಮತ್ತು ಖಾಸಗಿ -ಸಾರ್ವಜನಿಕ- ಸಹಭಾಗಿತ್ವ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವ್ಯಾಪಕ ಅನುಭವ ಹೊಂದಿದ್ದು, ಸಾರ್ವಜನಿಕ ನೀತಿ ಮತ್ತು ಖಾಸಗಿ ವಲಯದ ಪಾತ್ರದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಅವರು ಹಣಕಾಸು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಏಷ್ಯನ್ ಡೆವಪಲ್​​ಮೆಂಟ್ ಬ್ಯಾಂಕ್​​ನ್ನು 1966 ರಲ್ಲಿ ಸ್ಥಾಪಿಸಲಾಯಿತು, ಫಿಲಿಪ್ಪೀನ್ಸ್​​ನ ಮಂಡಲುಯೊಂಗ್​​ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಮಸಾತ್​​ಸುಗು ಅಸಾಕಾವಾ ಅಧ್ಯಕ್ಷರಾಗಿದ್ದಾರೆ. ಸದಸ್ಯ ರಾಷ್ಟ್ರಗಳು 68. ‘
ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − ten =
Remember me
