ತಿರುವನಂತಪುರಂ:ಕೇರಳದ 15ನೇ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದೆ. ಹೊಸದಾಗಿ ಆಯ್ಕೆಯಾದ ಶಾಸಕರು ಹಂಗಾಮಿ ಸ್ಪೀಕರ್​ ಸಮ್ಮುಖದಲ್ಲಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವೀಶೇಷವೆಂದರೆ ಕೇರಳದ ವಿಧಾನಸಭೆಯಲ್ಲಿ ಕೆಲ ಶಾಸಕರು ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವರು ದೇವರ ಹೆಸರಿನಲ್ಲಿ, ಇನ್ನು ಕೆಲವರು ಶ್ರದ್ಧಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅದರಲ್ಲೂ ಕಾಸರಗೋಡಿನ ಮಂಜೇಶ್ವರಂ ಶಾಸಕ ಎ.ಕೆ.ಎಮ್​. ಅಶ್ರಫ್​ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷಾಭಿಮಾನವನ್ನು ಮೆರೆದರು.
ಇದನ್ನೂ ಓದಿರಿ:ಕರೊನಾ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ನೀಡುತ್ತಿರುವ ಕೊಡುಗೆಗಳೇನು ಗೊತ್ತೇ?
ಮುವಾಟ್ಟುಪುಳ ಶಾಸಕ ಮ್ಯಾಥೀವ್​ ಕುಜಲ್ನಾದನ್​ ಇಂಗ್ಲಿಷ್​ ಭಾಷೆಯಲ್ಲಿ ಪ್ರಮಾಣ ವಚನ ಪಡೆದರು.
ಮತ್ತೊಮ್ಮೆ ಕೇರಳದ ಗದ್ದುಗೆ ಏರಿರುವ ಪಿಣರಾಯಿ ವಿಜಯನ್​ ನೇತೃತ್ವದ ಹೊಸ ಸರ್ಕಾರದಲ್ಲಿ 53 ಹೊಸ ಶಾಸಕರಿದ್ದಾರೆ. 10 ಮಹಿಳಾ ಶಾಸಕರಿರುವುದು ಇನ್ನೊಂದು ವಿಶೇಷವಾಗಿದೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 12 =
Remember me
