ಕೊಲಂಬೋ:ನಿನ್ನೆ ಆರ್​. ಪ್ರೇಮದಾಸ್​ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್​ ಟೂರ್ನಿಯ ಸೂಪರ್​-4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 228 ರನ್​ ಅಂತರದಿಂದ ಭಾರತ ಬಗ್ಗುಬಡಿದಿದೆ. ಪಾಕ್​ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ವಿರಾಟ್​ ಕೊಹ್ಲಿ (122 ರನ್​, 94 ಎಸೆತ, 9 ಬೌಂಡರಿ, 3 ಸಿಕ್ಸರ್​) ಮತ್ತು ಕನ್ನಡಿಗ ಕೆ.ಎಲ್​. ರಾಹುಲ್​ (111 ರನ್​, 106 ಎಸೆತ, 12 ಬೌಂಡರಿ, 2 ಸಿಕ್ಸರ್​) ಅಜೇಯ 233 ರನ್​ ಜೊತೆಯಾಟದಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ, ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಭಾರತೀಯರ ಮನ ಗೆದ್ದಿದ್ದಾರೆ. ಅದರಲ್ಲೂ ಪಂದ್ಯದ ನಡುವೆ ಕೆ.ಎಲ್​. ರಾಹುಲ್​ ಅವರು ಕ್ರೀಡಾ ಮನೋಭಾವ ಪಾಕ್​ ಕ್ರೀಡಾ ಅಭಿಮಾನಿಗಳು ಸಹ ಚಪ್ಪಾಳೆ ತಟ್ಟುವಂತೆ ಮಾಡಿದೆ.
ರವೀಂದ್ರ ಜಡೇಜಾ ಎಸೆದ ಚೆಂಡನ್ನು ಪಾಕ್​ ಆಟಗಾರ ಅಘಾ ಸಲ್ಮಾನ್​ ಅವರು ಸ್ವೀಪ್​ ಮಾಡಲು ಯತ್ನಿಸಿದರು. ಆದರೆ, ಚೆಂಡ್​ ಬೌನ್ಸ್ ಆಗಿ, ಬ್ಯಾಟಿನ ತುದಿಗೆ ತಾಗಿ ನೇರವಾಗಿ ಮುಖಕ್ಕೆ ಬಡಿಯಿತು. ಇದರ ಪರಿಣಾಮ ಸಲ್ಮಾನ್​ ಮುಖಕ್ಕೆ ಗಾಯವಾಗಿ ರಕ್ತಸ್ರಾವವಾಗಲು ಶುರುವಾಯಿತು. ಸಲ್ಮಾನ್​ ಅವರಿಗೆ ತುಂಬಾ ನೋವು ಸಹ ಆಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಚಿಕಿತ್ಸಕ ಮೈದಾನಕ್ಕೆ ಓಡಿ ಬಂದು ವಿಚಾರಿಸಿದರು. ಆದರೆ, ಅದಕ್ಕೂ ಮುನ್ನ ಸಲ್ಮಾನ್​ ಅವರ ನೋವಿಗೆ ಸ್ಪಂದಿಸಿದ್ದು, ಕೆ.ಎಲ್​. ರಾಹುಲ್​ ಅವರು.
ಇದನ್ನೂ ಓದಿ:ಜೋಕೊವಿಕ್‌ಗೆ ಯುಎಸ್ ಓಪನ್ ಮುಕುಟ: 4ನೇ ಬಾರಿಗೆ ಪ್ರಶಸ್ತಿ ಗೆದ್ದ ಸೆರ್ಬಿಯಾ ತಾರೆ
ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ಕೆ.ಎಲ್​. ರಾಹುಲ್​, ಸಲ್ಮಾನ್​ ಬಳಿ ಹೋಗಿ ಗಾಯದ ಬಗ್ಗೆ ವಿಚಾರಿಸಿದರು. ಬಾಲ್​ ಬಿದ್ದು ಗಾಯಗೊಂಡ ಸ್ಥಳದ ಬಗ್ಗೆ ಪರಿಶೀಲಿಸಿ ಕ್ರೀಡಾ ಮನೋಭಾವ ಮೆರೆದರು. ರಾಹಲ್​ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಿಜಕ್ಕೂ ಅತ್ಯುತ್ತಮ ನಡೆ ಇದು. ಕ್ರೀಡಾ ಮನೋಭಾವ ಮತ್ತು ಕ್ರೀಡಾ ಧರ್ಮವನ್ನು ರಾಹುಲ್​ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೀಸಲು ದಿನ ಸೋಮವಾರ 147 ರನ್​ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಿನ ದಾಖಲೆಯ ಜತೆಯಾಟದ ನೆರವಿನಿಂದ 2 ವಿಕೆಟ್​ಗೆ 356 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 32 ಓವರ್​ಗಳಲ್ಲಿ 128 ರನ್​ಗಳ ನಿಕೃಷ್ಟ ಮೊತ್ತಕ್ಕೆ ಕುಸಿದ ಪಾಕ್ ಅತಿ ದೊಡ್ಡ ಅಂತರದ ಮುಖಭಂಗ ಅನುಭವಿಸಿತು.
ನಾಯಕ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಭಾನುವಾರ ಭದ್ರ ಆರಂಭ ಒದಗಿಸಿದ್ದು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಪ್ರತಿಯಾಗಿ ಚೇಸಿಂಗ್ ನಡೆಸಿದ ಪಾಕಿಸ್ತಾನ 11 ಓವರ್​ಗಳಲ್ಲಿ 2 ವಿಕೆಟ್​ಗೆ 44 ರನ್​ಗಳಿಸಿದಾಗ ಮಳೆ ಆಡಚಣೆ ತಂದಿತ್ತು. ಬಳಿಕ ಮಳೆ ಬಿಡುವು ಕೊಟ್ಟು ಆಟ ನಡೆದಾಗ ಪಾಕ್ ಗುರಿ ಬೆನ್ನಟ್ಟಲಾಗದೆ ಕೈಚೆಲ್ಲಿತು. ಬೌಲಿಂಗ್​ನಲ್ಲಿ ಕುಲ್​ದೀಪ್ ಯಾದವ್ 25ಕ್ಕೆ 5 ವಿಕೆಟ್ ಕಬಳಿಸಿ ಪಾಕ್ ಬೆನ್ನೆಲುಬು ಮುರಿದರು.
ಕೊಹ್ಲಿ-ರಾಹುಲ್ ಬಿರುಸಿನಾಟ:ಶುಭಮಾನ್ ಗಿಲ್ ವಿಕೆಟ್ ಬಳಿಕ 3ನೇ ವಿಕೆಟ್​ಗೆ 24 ರನ್ ಪೇರಿಸಿ ಕ್ರೀಸ್​ನಲ್ಲಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರಾಹುಲ್ 24.1 ಓವರ್​ಗಳಿಂದಲೇ ಬ್ಯಾಟಿಂಗ್ ಮುಂದುವರಿಸಿದರು. 3ನೇ ವಿಕೆಟ್​ಗೆ ಇವರಿಬ್ಬರೂ 233 ರನ್ ಕಲೆಹಾಕಿದರು. ಸ್ಪಿನ್ನರ್ ಶಾದಾಬ್ ಖಾನ್ ಹಾಗೂ ಅರೆಕಾಲಿಕ ಬೌಲರ್ ಇಫ್ತಿಕರ್ ಅಹ್ಮದ್ ಅವರನ್ನು ಟಾರ್ಗೆಟ್ ಮಾಡಿದ ರಾಹುಲ್, 60 ಎಸೆತಗಳಲ್ಲಿ, ಕೊಹ್ಲಿ 55 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿಂದ ರನ್​ಗಳಿಕೆಗೆ ಚುರುಕು ಮುಟ್ಟಿಸಿದ ಈ ಜೋಡಿ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದ್ದರು. ಏಕದಿನ ಕ್ರಿಕೆಟ್​ನಲ್ಲಿ 6ನೇ ಶತಕ ಸಿಡಿಸಿದ ರಾಹುಲ್ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು. ವಿರಾಟ್ ಕೊಹ್ಲಿ ಅನುಭವಿ ಆಟದ ಮೂಲಕ ತಂಡದ 84 ಎಸೆತದಲ್ಲಿ ಶತಕ ಪೂರೈಸಿದರು. ಸ್ಲಾಗ್ ಓವರ್​ಗಳಲ್ಲಿ ರನ್ ಮಳೆ ಜತೆಗೆ ಆಕ್ರಮಣಕಾರಿ ಹೊಡೆತಗಳ ಮೂಲಕ ಇವರಿಬ್ಬರೂ ಅಂತಿಮ ಐದು ಓವರ್​ಗಳಲ್ಲಿ 56 ರನ್ ಕಸಿದು ಅಬ್ಬರಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಇದನ್ನೂ ಓದಿ:ಸುಂದರೀಕರಣ ಪ್ರಕ್ರಿಯೆ ಮುಂದುವರಿಕೆ; ದೆಹಲಿ ಲೋಕೋಪಯೋಗಿ ಸಚಿವೆ ಅತಿಷಿ ಘೋಷಣೆ
ಕಠಿಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್(25ಕ್ಕೆ 5) ಮಾರಕ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ವೈಫಲ್ಯ ಕಂಡಿತು. ಇಮಾಮ್ ಉಲ್ ಹಕ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ಬುಮ್ರಾ ಮೊದಲ ಯಶಸ್ಸು ತಂದರು. ಬಾಬರ್ ಅಜಮ್ (10), ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ಫಖರ್ ಜಮಾನ್ (27) ಹಾಗೂ ಅಘಾ ಸಲ್ಮಾನ್ (23) 4ನೇ ವಿಕೆಟ್​ಗೆ 30 ರನ್​ಗಳಿಸಿದ್ದು ಹೊರತುಪಡಿಸಿ, ಇಫ್ತಿಕರ್ ಅಹ್ಮದ್ (23) ತುಸು ರನ್ ಕಲೆಹಾಕಿದ್ದು ಬಿಟ್ಟರೆ ಇತರ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಧಾನವಾಗಿ ಕ್ರೀಸಿಗೆ ಗಟ್ಟಿಯಾದ ಫಖರ್ ಅವರ ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡ ಕುಸಿತಕ್ಕೆ ಮುನ್ನುಡಿ ಬರೆದ ಕುಲದೀಪ್, ಮಧ್ಯಮ ಕ್ರಮಾಂಕದ ಬೆನ್ನೆಲುಬನ್ನು ಮುರಿದರು. ಸ್ಪಿನ್ ಜಾಲದ ಎದುರು ರನ್​ಗಳಿಸಲು ಪರದಾಡಿದ ಫಹೀಮ್ ಆಶ್ರಫ್ (4 ) ವಿಕೆಟ್ ಕಬಳಿಸಿದ ಕುಲದೀಪ್ ಪಾಕ್ ಇನಿಂಗ್ಸ್​ಗೆ ತೆರೆ ಎಳೆದರು.(ಏಜೆನ್ಸೀಸ್​)
ಗಿಗ್ ಕಾರ್ವಿುಕರಿಗೆ ಗಿಫ್ಟ್; 2.30 ಲಕ್ಷ ಅಸಂಘಟಿತ ನೌಕರರಿಗೆ ಸಿಗಲಿದೆ ವಿಮೆ

ಜೋಕೊವಿಕ್‌ಗೆ ಯುಎಸ್ ಓಪನ್ ಮುಕುಟ: 4ನೇ ಬಾರಿಗೆ ಪ್ರಶಸ್ತಿ ಗೆದ್ದ ಸೆರ್ಬಿಯಾ ತಾರೆ

ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು; ಸೌದಿ-ಭಾರತ ಮಂಡಳಿಯ ಪ್ರಥಮ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
