ಚೀನಾ:ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ 11 ನೇ ದಿನದಂದು ಭಾರತವು ತನ್ನ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಮುನ್ನುಗ್ಗುತ್ತಿದೆ. 10ನೇ ದಿನ ಭಾರತ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದ್ದು, ಇದರಲ್ಲಿ ಪಾರುಲ್ ಚೌಧರಿ ಮತ್ತು ಅಣ್ಣು ರಾಣಿ ಚಿನ್ನದ ಪದಕಗಳು ಸೇರಿದ್ದವು.
ಇಂದು ಬುಧವಾರ ನಡೆದ ಕಾಂಪೌಂಡ್ ಆರ್ಚರಿ ಮಿಕ್ಸೆಡ್​​​ ಟೀಂ ಫೈನಲ್‌ನಲ್ಲಿ ಭಾರತದ ಆಟಗಾರರಾದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಸ್ ಡಿಯೋಟಾಲೆ ಅವರು ಚಿನ್ನ ಗೆದ್ದಿದ್ದಾರೆ. ಭಾರತವು ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ಛಾಪು ಮೂಡಿಸಿದ್ದು, ಇದುವರೆಗೂ ಒಟ್ಟು 71 ಪದಕಗಳನ್ನು ಪಡೆದಿದೆ.
ಜ್ಯೋತಿ-ಪ್ರವೀಣ್ 159-158 ಅಂಕಗಳಿಂದ ದಕ್ಷಿಣ ಕೊರಿಯಾ ಜೋಡಿಯನ್ನು ಒಂದು ಅಂಕದಿಂದ ಸೋಲಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಆರ್ಚರಿಯಲ್ಲಿ ಇದು ಮೊದಲ ಚಿನ್ನವಾಗಿದೆ.
ಈ ಜೋಡಿ ಬುಧವಾರ ನಡೆದ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ನಿನ್ನೆ ಜ್ಯೋತಿ-ಪ್ರವೀಣ್ 159-155ರಲ್ಲಿ ಕಜಕಿಸ್ತಾನದ ಅಡೆಲ್ ಜೆಕ್ಸೆನ್‌ಬಿನೋವಾ ಮತ್ತು ಆಂಡ್ರೆ ತ್ಯುಟ್ಯುಂಟೊ ಅವರನ್ನು ಸೋಲಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಈ ಜೋಡಿ ಮಲೇಷ್ಯಾ ತಂಡವನ್ನು 158-155 ಅಂಕಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಇಂದು, ಭಾರತೀಯ ರೇಸ್ ವಾಕರ್‌ಗಳಾದ ಮಂಜು ರಾಣಿ ಮತ್ತು ರಾಮ್ ಬಾಬೂ ಅವರು 35 ಕಿಮೀ ರೇಸ್​​ ವಾಕ್​​​ ಮಿಕ್ಸೆಡ್​​​​ ಟೀಂ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಮಿಶ್ರ ಡಬಲ್ಸ್‌ ಸ್ಕ್ವಾಶ್​​​ ಸೆಮಿಫೈನಲ್‌ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಮಲೇಷ್ಯಾದ ಐಫಾ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಅವರ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೆ ಅನಾಹತ್ ಮತ್ತು ಅಭಯ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಯಿತು.
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ತೇಜಸ್ವಿ, ರಾಬ್ರಿ ದೇವಿ ಸೇರಿದಂತೆ 6 ಮಂದಿಗೆ ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 19 =
Remember me
