ಚೀನಾ:ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ಆರನೇ ದಿನದಂದು ಅನೇಕ ಸ್ಪರ್ಧೆಗಳು ನಡೆಯಲಿವೆ. ಆರನೇ ದಿನ ಎಲ್ಲರ ಕಣ್ಣು ವಿಶೇಷವಾಗಿ ಪುರುಷರ ಡಬಲ್ಸ್ ಟೆನಿಸ್ ಸ್ಪರ್ಧೆಯ ಫೈನಲ್ ಮೇಲಿದೆ. ಭಾರತದ ಶೂಟರ್‌ಗಳು ಆರನೇ ದಿನ ದೇಶಕ್ಕೆ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭಾರತ ಈಗ 7 ಚಿನ್ನ ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದಿದೆ.
ಅದಿತಿ ಅಶೋಕ್ ಮತ್ತೊಮ್ಮೆ ಗಾಲ್ಫ್‌ನಲ್ಲಿ ಮೊದಲ ಸ್ಥಾನ ಪಡೆದರು. ಇನ್ನು ಶೂಟಿಂಗ್‌ನಲ್ಲಿ 17 ವರ್ಷದ ಪಾಲಕ್ ಚಿನ್ನದ ಪದಕ ಮತ್ತು 18 ವರ್ಷದ ಇಶಾ ಸಿಂಗ್ ಬೆಳ್ಳಿ ಪದಕ ಪಡೆದಿದ್ದಾರೆ. ಪಾಲಕ್ ಚಿನ್ನ ಗೆದ್ದುಕೊಂಡಿದ್ದಲ್ಲದೆ, ತನ್ನ ವಿಭಾಗದಲ್ಲಿ ದಾಖಲೆಯನ್ನು ಸ್ಥಾಪಿಸಿ, 2018 ರ ಚೀನಾದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇಶಾ 239.7 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಗೆದ್ದರು. ಇದರೊಂದಿಗೆ ಹ್ಯಾಂಗ್‌ಝೌ ಶೂಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿದೆ.
ಪುರುಷರ ಡಬಲ್ಸ್‌ ಟೆನಿಸ್‌ ಫೈನಲ್‌ನಲ್ಲಿ ಭಾರತದ ಸಾಕೇತ್‌-ರಾಮ್‌ಕುಮಾರ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಇದಲ್ಲದೆ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೊರನ್ ಅವರು 50 ಮೀಟರ್ ರೈಫಲ್‌ನಲ್ಲಿ ಭಾರತದಿಂದ ಚಿನ್ನದ ಪದಕ ಗೆದ್ದಿದ್ದಾರೆ. ಅವರು 1736 ಅಂಕಗಳ ಅತ್ಯುತ್ತಮ ಅಂಕಗಳೊಂದಿಗೆ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಥಾಯ್ಲೆಂಡ್ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದ್ದಾರೆ.
ಇದುವರೆಗೆ 8 ಚಿನ್ನದ ಪದಕಗಳು ಸೇರಿದಂತೆ ಒಟ್ಟು 30 ಪದಕಗಳನ್ನು ಭಾರತ ಗೆದ್ದಿದೆ. ಇದರೊಂದಿಗೆ ಇದೀಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದೆ.
‘ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ಸದಾ ಬದ್ಧ’: ಭಾರತದ ಕಠಿಣ ನಿಲುವಿನ ನಂತರ ಮೃದುವಾದ ಟ್ರೂಡೊ ವರ್ತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + six =
Remember me
