ಗಾಂಧಿನಗರ:ಆ.27ರಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುಜರಾತ್‌ಗೆ ರೆಡ್ ಅಲರ್ಟ್ ಘೋಷಿಸಿ, ಪ್ರವಾಹ ಭೀತಿಯ ಮುನ್ನೆಚ್ಚರಿಕೆಯನ್ನು ನೀಡಿತ್ತು. ಮುಂದಿನ ಎರಡು ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಮಾಹಿತಿ ಕೊಟ್ಟಿತ್ತು. ನಿರಂತರವಾಗಿ ಸುರಿದ ಮಳೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಆಸ್ನಾ ಚಂಡಮಾರುತದ ಆತಂಕ ಕಾಡುತ್ತಿತ್ತು. ಇದೀಗ ಹೊಸ ಪ್ರಕಟಣೆ ಹೊರಡಿಸಿರುವ ಭಾರತೀಯ ಹವಾಮಾನ ಇಲಾಖೆ, ಗುಜತಾತ್​ನ ಕರಾವಳಿಯಿಂದ ಅಸ್ನಾ ದೂರು ಸರಿದ ಹಿನ್ನಲೆ ಮುಂದಿನ ಐದು ದಿನ ಮಳೆಯಾಗುವುದು ಬಹುತೇಕ ಅನುಮಾನ ಎಂದು ತಿಳಿಸಿದೆ. ಭೀಕರ ಮಳೆಗೆ ನಗರ ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 32 ಮಂದಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದು, ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಸದ್ಯ ಕಂಗಾಲಾಗಿದ್ದಾರೆ.
ಇದನ್ನೂ ಓದಿ:‘ಹಿರಿಯ ಪೊಲೀಸ್​ ಅಧಿಕಾರಿಗಳಿಂದಲೇ ಕಿರುಕುಳ’: ದೂರು ದಾಖಲಿಸಿದ ನಟಿ ಕದಂಬರಿ ಜೇತ್ವಾನಿ
ಈ ಹಿಂದೆ ಈಶಾನ್ಯ ಅರಬ್ಬಿ ಸಮುದ್ರದ ಕಛ್ ಮತ್ತು ನೆರೆಯ ಪಾಕಿಸ್ತಾನದ ಕರಾವಳಿಯ ಬಳಿ ಅಪ್ಪಳಿಸುತ್ತಿದ್ದ ಅಸ್ನಾ ಚಂಡಮಾರುತವು ಪಶ್ಚಿಮಕ್ಕೆ ಚಲಿಸಿತ್ತು. ಆದ್ರೆ, ಈಗ ಗುಜರಾತ್‌ನ ನಲಿಯಾದಿಂದ ಪಶ್ಚಿಮಕ್ಕೆ 310 ಕಿಮೀ ದೂರದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಅಸ್ನಾ ಭಾರತದ ಕರಾವಳಿಯಿಂದ ದೂರ ಸರಿಯುವ ಸಾಧ್ಯತೆಯಿರುವ ಹಿನ್ನಲೆ ಮಳೆಯ ಸಂಭವ ಕಡಿಮೆ ಎಂದು ಹೇಳಲಾಗಿದೆ. ಸದ್ಯ ಈ ಸಂಗತಿಯಿಂದ ಗುಜರಾತ್ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಅಸ್ನಾ ಚಂಡಮಾರುತ ಕಳೆದ ಆರು ಗಂಟೆಗಳಲ್ಲಿ 14 ಕಿಮೀ ವೇಗದಲ್ಲಿ ಪಶ್ಚಿಮಕ್ಕೆ ಚಲಿಸಿದ್ದು, ಭಾರತೀಯ ಸಮಯಕ್ಕೆ ಅನುಗುಣವಾಗಿ ಆಗಸ್ಟ್ 30ರಂದು 2330 ಗಂಟೆಗಳ ಅವಧಿ ಕರಾಚಿ ನೈಋತ್ಯ 160 ಕಿಮೀ ಕೇಂದ್ರೀಕೃತವಾಗಿತ್ತು. ಇದು ಪಶ್ಚಿಮಕ್ಕೆ ತನ್ನ ಪಥವನ್ನು ಮುಂದುವರೆಸುವ ನಿರೀಕ್ಷೆಯಿದೆ. ಈ ಚಲನೆಯೊಂದಿಗೆ ಚಂಡಮಾರುತವು ಸದ್ಯ ಭಾರತದಿಂದ ದೂರ ಸರಿಯಲಿದೆ. ಇದು ಗುಜರಾತ್‌ನ ಹವಾಮಾನವನ್ನು ನಿಯಂತ್ರಣಕ್ಕೆ ತರಲಿದೆ ಎಂದು ತಿಳಿಸಿದ್ದಾರೆ. ಅಸ್ನಾ ಚಂಡಮಾರುತ ದೂರ ಸರಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ,(ಏಜೆನ್ಸೀಸ್).
ಐಪಿಎಲ್ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಉಳಿಸಿಕೊಳ್ಳಲ್ಲ RCB! ಅದಕ್ಕೆ ಈ ಮೂರು ಅಂಶಗಳೇ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eight =
Remember me
