ದೀಸ್ಪುರ್​:ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರು ಇತ್ತೀಚೆಗಷ್ಟೇ ಶೇರ್​ ಮಾಡಿಕೊಂಡಿದ್ದ ಫ್ಯಾಮಿಲಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ನೆಟ್ಟಿಗರೊಬ್ಬರು ಫೋಟೋ ಶೇರ್​ ಮಾಡಿ, ಟೀಕೆ ಮಾಡಿದ್ದು, ಇದನ್ನು ಗಮನಿಸಿರುವ ಹಿಮಂತ್​ ಶರ್ಮಾ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.
ಆಗಸ್ಟ್​ 2ರಂದು ಅಸ್ಸಾಂ ಸಿಎಂ, ಟ್ವೀಟ್​ನಲ್ಲಿ ಫ್ಯಾಮಿಲಿ ಫೋಟೋ ಶೇರ್​ ಮಾಡಿಕೊಂಡಿದ್ದರು. ಜುಲೈ 31ರಂದು ತಮ್ಮ ಪತ್ನಿ ರಿನಿಕಿ ಬಿಸ್ವಾ ಶರ್ಮಾ ಅವರ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿ, ಒಟ್ಟಿಗೆ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಊಟದ ಬಳಿಕ ತೆಗೆದುಕೊಂಡ ಫ್ಯಾಮಿಲಿ ಫೊಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:ಒಂದೇ ಕುಟುಂಬದ ನಾಲ್ವರು ದಾರುಣ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಲಿದೆ ಸಾವಿನ ರಹಸ್ಯ..!
We celebrated Riniki's birthday with a family dinner on 31st July.This picture captures the moments after the meal. ⁦@rinikibsharma⁩pic.twitter.com/bLIBVWZdD0
— Himanta Biswa Sarma (@himantabiswa)August 2, 2023

ಇದೇ ಫೊಟೋವನ್ನು ಅಶೋಕ್​ ಸ್ವೈನ್​ ಎಂಬುವರು ತಮ್ಮ ಟ್ವಿಟರ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಹಿಂದು ಪ್ರಾಬಲ್ಯದ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಲು ಕಳುಹಿಸುತ್ತಾರೆ ಮತ್ತು ಅವರ ಮಕ್ಕಳು ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಆದರೆ ಹಿಂದುಗಳು ಅಪಾಯದಲ್ಲಿದ್ದಾರೆ ಎಂಬ ಹೆಸರಿನಲ್ಲಿ ಬಜರಂಗದಳ ಅಥವಾ ದುರ್ಗಾ ವಾಹಿನಿ ಅಥವಾ ಬಿಜೆಪಿ ಐಟಿ ಸೆಲ್‌ಗೆ ಸೇರಲು ತಮ್ಮ ಮಕ್ಕಳನ್ನೂ ಎಂದಿಗೂ ಬಿಡುವುದಿಲ್ಲ ಎಂದು ಟೀಕಿಸಿದ್ದರು.
https://twitter.com/ashoswai/status/1687074667838713856?s=20
ಇದೀಗ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ, ಕೇವಲ ಒಂದು ಫ್ಯಾಮಿಲಿ ಫೋಟೋ ನೋಡಿ ನೀವು ಇಂತಹ ತೀವ್ರವಾದ ತೀರ್ಮಾನಗಳನ್ನು ತೆಗೆದುಕೊಂಡಿರುವುದು ನನಗೆ ಆಶ್ಚರ್ಯಕರವಾಗಿದೆ. ನನ್ನ ಮಗನಿಗೆ ಪ್ರಸ್ತುತ 22 ವರ್ಷ ಮತ್ತು ಅಧ್ಯಯನದಲ್ಲಿ ತೊಡಗಿದ್ದಾನೆ. ಅವನು ಸರಿಯಾದ ವಯಸ್ಸಿನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವುದಿಲ್ಲ ಎಂದು ಭಾವಿಸುವುದು ಸರಿಯಲ್ಲ. ಬಿಜೆಪಿ ಐಟಿ ಸೆಲ್ ಅಥವಾ ನಮ್ಮ ಸೈದ್ಧಾಂತಿಕ ಕುಟುಂಬದ ಯಾವುದೇ ಸಂಸ್ಥೆಗೆ ಸೇರಲು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಅಗತ್ಯವಿದೆ. ಇದು ಕೇವಲ ನಾಯಕನ ಮಗ ಅಥವಾ ಮಗಳು ಎಂಬ ಆಧಾರದ ಮೇಲೆ ಇರಬಾರದು. ನಮ್ಮ ಮಕ್ಕಳಿಗೆ ಸುಲಭ ಪ್ರವೇಶದ ಬಗ್ಗೆ ನೀವು ನೀಡುತ್ತಿರುವ ಸಲಹೆಯು ರಾಜವಂಶದ ಉತ್ತರಾಧಿಕಾರವನ್ನು ಉತ್ತೇಜಿಸುತ್ತದೆ. ನನ್ನ ಮಗನಿಗೆ ಸುಲಭ ಪ್ರವೇಶವನ್ನು ನೀಡಬೇಡಿ. ಅವನು ಅದನ್ನು ಗಳಿಸಲಿ ಎಂದಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡಿಗರ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್!
I find it surprising that you drew such drastic conclusions from just one family photograph.My son is currently 22 years old and studying. It is unfair to assume that he will not make the right choices at right age. Joining the BJP IT cell or any other organization within our…https://t.co/pOODHX5U4n
— Himanta Biswa Sarma (@himantabiswa)August 3, 2023

ಇದೀಗ ಹಿಮಂತ್​ ಶರ್ಮಾ ಅವರ ಉತ್ತರಕ್ಕೆ ಕೆಲ ನೆಟ್ಟಿಗರು ಸಹ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಈ ವಿಚಾರ ಪರ-ವಿರೋಧ ಚರ್ಚೆಗೂ ಗ್ರಾಸವಾಗಿದೆ. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ಈ ಖದೀಮರು ವೆಬ್​ ಸೀರಿಸ್​ನಿಂದ ಸ್ಫೂರ್ತಿ ಪಡೆದು ನಕಲಿ ನೋಟು ಪ್ರಿಂಟ್ ಮಾಡಿದ್ರಾ?!

ಒಂದೇ ಕುಟುಂಬದ ನಾಲ್ವರು ದಾರುಣ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಲಿದೆ ಸಾವಿನ ರಹಸ್ಯ..!

ಮುಂದಿನ ಐಪಿಎಲ್​ ಆವೃತ್ತಿಗೆ RCB ಮುಖ್ಯ ಕೋಚ್​ ಆಗಿ ಜಿಂಬಾಂಬ್ವೆ ಮಾಜಿ ಆಟಗಾರ ಆ್ಯಂಡಿ ಫ್ಲವರ್​ ನೇಮಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
