ಅಸ್ಸಾಂ:ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥ ಭೂಪೇನ್ ಬೋರಾ “ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ” ಎಂದು ನೀಡಿದ ಹೇಳಿಕೆಯ ವಿರುದ್ಧ ಇದೀಗ ನೇರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ವಂದೇ ಭಾರತ್​ನಲ್ಲಿ ನೀಡಿದ ಚಪಾತಿಗೆ ಅಂಟಿಕೊಂಡಿತ್ತು ಜಿರಳೆ! ಟ್ವೀಟ್ ಮಾಡಿದ ನಂತರ ರೈಲ್ವೇ ಇಲಾಖೆ ಮಾಡಿದ್ದೇನು?
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಭೂಪೇನ್ ಬೋರಾ, “ಕೃಷ್ಣನು ರುಕ್ಮಿಣಿಯನ್ನು ಮದುವೆಯಾಗಲು ಬಯಸಿದಾಗ, ಅರ್ಜುನನು ಮಹಿಳೆಯ ವೇಷ ಧರಿಸಿ ಬಂದಿದ್ದನು. ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು” ಎಂದು ಹೇಳಿಕೆ ನೀಡಿದ್ದರು. ಬೋರಾ ಹೇಳಿಕೆಯನ್ನು ಖಂಡಿಸಿದ ಸಿಎಂ ಹಿಮಂತ ಶರ್ಮಾ, “ಈ ಹೇಳಿಕೆ ಸನಾತನ ಮತ್ತು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಶ್ರೀಕೃಷ್ಣ ಮತ್ತು ರುಕ್ಮಿಣಿ ವಿಷಯವನ್ನು ಎಳೆದು ತರುವುದು ಅಕ್ಷಮ್ಯ. ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.
“ಹಜರತ್ ಮುಹಮ್ಮದ್ ಅಥವಾ ಜೀಸಸ್ ಕ್ರೈಸ್ಟ್ ಅನ್ನು ಯಾವುದೇ ವಿವಾದಕ್ಕೆ ಎಳೆಯಬಾರದು, ಅದೇ ರೀತಿ ಶ್ರೀ ಕೃಷ್ಣನನ್ನು ಯಾವುದೇ ವಿವಾದಕ್ಕೆ ಕರೆತರುವುದು ಒಳಿತಲ್ಲ ಎಂದು ನಾನು ಕಾಂಗ್ರೆಸ್‌ಗೆ ಹೇಳಲು ಬಯಸುತ್ತೇನೆ. ದೇವರನ್ನು ಕ್ರಿಮಿನಲ್ ಚಟುವಟಿಕೆಗೆ ಹೋಲಿಸುವುದು ಒಪ್ಪುವಂತದ್ದಲ್ಲ. ಈ ಹೇಳಿಕೆ ಕುರಿತು ಯಾರಾದರೂ ಕೇಸು ದಾಖಲಿಸಿದರೆ ಅವರನ್ನು ಬಂಧಿಸಬೇಕಾಗುತ್ತದೆ. ಸನಾತನ ಧರ್ಮದ ಸಾವಿರಾರು ಮಂದಿ ದೂರು ನೀಡಿದರೆ, ಆಗ ಆತನನ್ನು ಉಳಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಕೆಂಪು ಡೈರಿಯಿಂದ ಕೈ ಚರಮಗೀತೆ ನಿಶ್ಚಿತ; ಮತ್ತೆ ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಬೋರಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅಸ್ಸಾಂ ಸಿಎಂ, “ಭಗವಾನ್ ಕೃಷ್ಣನು ರುಕ್ಮಿಣಿಗೆ ತನ್ನ ಧರ್ಮವನ್ನು ಬದಲಾಯಿಸಲು ಎಂದಿಗೂ ಒತ್ತಾಯಿಸಲಿಲ್ಲ. ಹುಡುಗಿಯನ್ನು ಸುಳ್ಳು ಗುರುತಿನ ನೆಪದಲ್ಲಿ ಮದುವೆಯಾಗಿ ನಂತರ ಬಲವಂತವಾಗಿ ಧರ್ಮ ಬದಲಾಯಿಸಿದರೆ ಅದನ್ನು ಲವ್ ಜಿಹಾದ್ ಎನ್ನುತಾರೆ” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).
‘ಕಿರಾತಕ’ ಸಿನಿಮಾ ಸ್ಟೈಲ್​ನಲ್ಲಿ ಪ್ರೀತ್ಸೇ ಪ್ರೀತ್ಸೇ ಎಂದು ಅಪ್ರಾಪ್ತ ವಯಸ್ಕಳ ದುಂಬಾಲು ಬಿದ್ದವನ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 12 =
Remember me
