ಗುವಾಹಟಿ:ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್​ ಶರ್ಮಾ ಅವರು ಕಾಂಗ್ರೆಸ್​ ಸಂಸದ ಗೌರವ್​ ಗಗೋಯ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.
ಪೆಡ್​ ಈಸ್ಟ್​ ಎಂಟರ್​ಟೈನ್​ಮೆಂಟ್ಸ್​ ಕಂಪನಿಯು ಪ್ರಧಾನ ಮಂತ್ರಿ ಕಿಸಾನ್​ ಸಂಪದಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ 10 ಕೋಟಿ ರೂಪಾಯಿ ಪಡೆದಿದೆ ಎಂದು ಕಾಂಗ್ರೆಸ್​ ನಾಯಕ ಗಗೋಯ್​ ಆರೋಪಿಸಿದ್ದಾರೆ. ಅವರು ಈ ಆರೋಪ ಸಾಬೀತುಪಡಿಸದಿದ್ದರೆ 10 ಕೋಟಿ ರೂಪಾಯಿ ನೀಡಬೇಕು ಎಂದು ರಿನಿಕಿ ಭುಯಾನ್​ ಶರ್ಮಾ ಹೇಳಿದ್ದಾರೆ.
ಕಾಮರೂಪ ಮೆಟ್ರೋಪಾಲಿಟನ್​ ಸಿವಿಲ್​ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸೆ.26ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದಿಲ್ಲ. ಸಬ್ಸಿಡಿ ಪಡೆಯಲು ಕೈಗೊಳ್ಳಬೇಕಾದ ಪ್ರಕ್ರಿಯೆ ನಡೆದಿಲ್ಲ. ಗೌರವ್​ ಗೊಗೊಯ್​ ಅವರು ಮಾಡಿರುವ ಮಿಥ್ಯಾರೋಪದಿಂದ ರಿನಿಕಿ ಅವರ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ರಿನಿಕಿ ಭುಯಾನ್​ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ದೇವಜಿತ್​ ಸೈಕಿಯಾ ತಿಳಿಸಿದ್ದಾರೆ.
ನಾಗಾಂವ್​ ಜಿಲ್ಲೆಯ ದರಿಗಾಜಿಯಲ್ಲಿ 30 ಎಕರೆ ಕೃಷಿ ಭೂಮಿ ಕೈಗಾರಿಕಾ ಭೂಮಿಯಾಗಿ ವರ್ಗಾವಣೆಯಾದ ಒಂದು ತಿಂಗಳಲ್ಲೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಟುಂಬಸ್ಥರು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಇದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಗುವಾಹಟಿ ಹೈಕೋರ್ಟ್​ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಮಂತ್ರಿ ಕಿಸಾನ್​ ಸಂಪದಾ ಯೋಜನೆ ಮೂಲಕ ತಮ್ಮ ಪತ್ನಿ ಮತ್ತು ಅವರ ಕಂಪನಿಗೆ ಯಾವುದೇ ಹಣ ನೀಡಲಾಗಿಲ್ಲ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
