ನವದೆಹಲಿ:ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಮಹಿಳೆಯನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಅಸ್ಸಾಂ ಯುವ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷೆ ಅಂಗ್ಕಿತಾ ದತ್ತಾ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಆಗಿರುವವರು.
ಇತ್ತೀಚಿಗೆ ಅಂಗ್ಕಿತಾ ದತ್ತಾ ಯುವ ಕಾಂಗ್ರೆಸ್​ನ ಹಾಲಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಮಾಜಿ ಅಧ್ಯಕ್ಷ ಕೇಶವ್​ ಕುಮಾರ್​ ತಮ್ಮಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ಧಾರೆ ಎಂದು ಆರೋಪಿಸಿದ್ದರು.
ಬಿ.ವಿ. ಶ್ರೀನಿವಾಸ್​ ಒಬ್ಬಮಹಿಳಾ ವಿರೋಧಿಯಾಗಿದ್ದು ಪ್ರತಿಯೊಂದರಲ್ಲು ಲಿಂಗ ಭೇದ ಮಾಡುತ್ತಾರೆ. ಈ ವಿಚಾರವಾಗಿ ನಾಣು ಕಾಂಗ್ರೆಸ್​ ನಾಯಕರ ಗಮನ್ಕಕೂ ತಂದಿದ್ಧೇನೆ. ಆದರೆ, ಯಾರು ವಿಚಾರಣೆ ನಡೆಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದ್ದರು.
ಇದನ್ನೂ ಓದಿ:ಬಿ.ವಿ. ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಯುವಕಾಂಗ್ರೆಸ್ ಕಾರ್ಯಕರ್ತೆ!
ಅಂಗ್ಕಿತಾ ದತ್ತಾ ಆರೋಫದ ಬೆನ್ನಲ್ಲೇ ಕಾಂಗ್ರೆಸ್​ ಶಿಸ್ತುಪಾಲನಾ ಸಮಿತಿ ತನಿಖೆ ನಡೆಸಿದ್ದು ಮಹಿಳೆ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು ರಾಜಕೀಯ ದುರುದ್ದೇಶದಿಂದ ಹೇಳಲಾಗಿದೆ.
ಪಕ್ಷದ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿರುವ ಮಹಿಳೆಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್​ ಪಕ್ಷ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಪಕ್ಷ ವಿರೋಧಿ ಹೇಳಿಕೆಯನ್ನು ನೀಡಿದ್ದ ಮಹಿಳೆಯನ್ನು ಉಚ್ಛಾಟಿಸಿರುವ ಕಾಂಗ್ರೆಸ್​ ನಡೆಯನ್ನು ಖಂಡಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್​ ಮಾಳವಿಯಾ ಟ್ವೀಟ್​ ಮಾಡಿದ್ದು ಇದು ಮಹಿಳಾ ಸಬಲೀಕರಣದ ಮಾದರಿ ಎಂದು ಟೀಕಿಸಿದ್ದಾರೆ.
ಮಹಿಳೆಯರಿಗೆ ಸಮಾನವಾದ ವೇದಿಕೆ ಒದಗಿಸುವ ಬದಲು ಕಿರುಕುಳ ಆರೋಪ ಮಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ಸ್ಪೂರ್ತಿದಾಯಕ ಅಲ್ಲ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ.
This is Congress’s model of women empowerment! Sack the woman who alleged harassment instead of providing a platform to hear her grievances. The manner in which Angkita Dutta has been removed from the Congress is uninspiring for women.लड़की हूँ, लड़ सकती हूँ is a hollow slogan.pic.twitter.com/KrtId3TmaO
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
