ಹೈದರಾಬಾದ್:ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿಪಿ ಸಿಂಗ್ ಅವರ ಮಗಳು ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಐಪಿಎಸ್ ತರಬೇತಿ ಮುಗಿಸಿ, ಪದವಿ ಪಡೆದು ಹೊರ ಬಂದಿದ್ದಾರೆ. ಇದೀಗ ನಿರ್ಗಮನ ಪಥಸಂಚಲನದ ದಿನ ಮಗಳು ಐಶ್ವರ್ಯ ತನಗೆ ಸೆಲ್ಯೂಟ್ ಮಾಡುತ್ತಿರುವ ವೀಡಿಯೋವನ್ನು ಡಿಜಿಪಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗೆ ಪಡೆದುಕೊಳ್ಳುತ್ತಿದೆ. ಮಗಳು ತಂದೆಗೆ ಸೆಲ್ಯೂಟ್ ಮಾಡುತ್ತಿರುವು ಈ ವೀಡಿಯೋವನ್ನು ಟ್ವಟಿರ್​ನಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Words fail me. Received the salute from daughter@aishwarya_ipsas she passed out of@svpnpahydtoday. Picture courtesy@lrbishnoiipspic.twitter.com/aeHoj9msYG
— GP Singh (@gpsinghips)February 11, 2023

ಅಪ್ಪ-ಮಗಳಿಗೆ ಇದೊಂದು ಹೆಮ್ಮೆಯ ದಿನ. ತಮ್ಮ ಮಕ್ಕಳು ತನಗಿಂತ ಎತ್ತರಕ್ಕೇರಲು ಆಶೀರ್ವದಿಸುವುದು ತಂದೆ ಮಾತ್ರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅಲ್ಲದೇ, ಐಪಿಎಸ್ ಐಶ್ವರ್ಯಾ ಸಾಧನೆ ಮಾಡಬೇಕೆಂದು ಕನಸು ಕಾಣುವ ಪ್ರತಿಯೊಬ್ಬರಿಗೂ ಮಾದರಿಯಾಗಿ ಕಾಣಿಸುತ್ತಿದ್ದಾರೆ. ಅವರ ಐಪಿಎಸ್ ಹಾದಿಗೆ ಶುಭವಾಗಲಿ ಎಂದು ಅನೇಕರು ಹಾರೈಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
