ಗುವಾಹಟಿ:ಕೋವಿಡ್​ 19 ನೆಪದಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಹೇಳಿ, ಸಾಮಾಜಿಕ ಸಾಮರಸ್ಯ ಕದಡಲು ಯತ್ನಿಸಿದ ಆರೋಪದಲ್ಲಿ ಅಸ್ಸಾಂನ ನಾಗಾಂವ್​ ಜಿಲ್ಲೆಯ ಡಿಂಗ್​ ಕ್ಷೇತ್ರದ ಶಾಸಕ ಅಮಿನುಲ್​ ಇಸ್ಲಾಂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆಲ್​ ಇಂಡಿಯಾ ಯುನೈಟೆಡ್​ ಡೆಮಾಕ್ರಟಿಕ್​ ಫ್ರಂಟ್​ (ಎಐಡಿಯುಎಫ್​) ಮುಖಂಡ ಅಮಿನುಲ್​ ಇಸ್ಲಾಂ ತಮ್ಮ ಸಹಚರರೊಂದಿಗೆ ಮಾತನಾಡುತ್ತಾ, ಕರೊನಾ ಕ್ವಾರಂಟೈನ್​ ವ್ಯವಸ್ಥೆ ಅಕ್ರಮ ನಿವಾಸಿಗಳನ್ನು ಬಂಧನದಲ್ಲಿಡುವ ವ್ಯವಸ್ಥೆಗಿಂತ ಕಡೆಯಾಗಿದೆ. ಈ ಕೇಂದ್ರಗಳು ಅತ್ಯಂತ ಕೊಳಕಾಗಿವೆ. ಕಳೆದ ತಿಂಗಳು ನವದೆಹಲಿಯ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಈ ಕೇಂದ್ರಗಳಲ್ಲಿನ ವೈದ್ಯರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ. ಒಟ್ಟಾರೆ ಮುಸ್ಲಿಮರನ್ನು ಬಲಿಪಶು ಮಾಡಲು ಎಲ್ಲ ಹುನ್ನಾರ ಮಾಡಲಾಗುತ್ತಿದೆ ಎಂದು ಹೇಳಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಸಕನನ್ನು ಬಂಧಿಸಿದ್ದಾರೆ.
ಶಾಸಕ ಅಮಿನುಲ್​ ಇಸ್ಲಾಂ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣುಕಿನ ಬಗ್ಗೆ ವಿಧಾನಸಭಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಆನಂತರದಲ್ಲಿ ಅವರನ್ನು ಬಂಧಿಸಲಾಗಿದೆ. ಸಾಮಾಜಿಕ ಸಾಮರಸ್ಯ ಕದಡಲು ಷಡ್ಯಂತ್ರ, ಸಮುದಾಯಗಳ ನಡುವಿನ ಸೌಹಾರ್ದತೆ ಕದಡಲು ಯತ್ನ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಪ್ರಕಾರ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೊಲೀಸ್​ ಮುಖ್ಯಸ್ಥ ಭಾಸ್ಕರ್​ ಜ್ಯೋತಿ ಮಹಾಂತಾ ತಿಳಿಸಿದ್ದಾರೆ.
ವಿಕೃತಿ ಮೆರೆದಿದ್ದ ತಬ್ಲಿಘಿಗಳ ವಿರುದ್ಧ ಎಫ್​ಐಆರ್​: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
