ಕೋಲ್ಕತ:ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಈ ಹಿನ್ನೆಯಲ್ಲಿ ಪ್ರಧಾನಿ ಮೋದಿ ಉಭಯ ರಾಜ್ಯಗಳ ಪ್ರಜೆಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಒಂದು ಅಸ್ಸಾಂನ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಮತದಾನ ಅರ್ಹತೆ ಹೊಂದಿರುವವರು ದಾಖಲೆಯ ಮತದಾನ ಮಾಡಿ. ಅದರಲ್ಲೂ ವಿಶೇಷವಾಗಿ ನನ್ನ ಯುವ ಸಮೂಹಕ್ಕೆ ಮತದಾನ ಮಾಡಲು ಕೋರುತ್ತೇನೆ ಎಂದಿದ್ದಾರೆ.
The first phase of elections begin in Assam. Urging those eligible to vote in record numbers. I particularly call upon my young friends to vote.
— Narendra Modi (@narendramodi)March 27, 2021

ಮತ್ತೊಂದು ಟ್ವೀಟ್​ನಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಇಂದು ಆರಂಭವಾಗಿದೆ. ಎಲ್ಲರೂ ತಮ್ಮ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿ ದಾಖಲೆ ಸಂಖ್ಯೆಯಲ್ಲಿ ಮತವನ್ನು ಚಲಾಯಿಸಿ ಎಂದು ಕೋರಿದ್ದಾರೆ.
ಇದನ್ನೂ ಓದಿರಿ:ವಿಚಾರಣೆಗೆ ಬರಬೇಕಾದ್ರೆ ಇದನ್ನು ನೆರವೇರಿಸಿ: ಎಸ್​ಐಟಿಗೆ ತಲೆನೋವಾದ ಸಿಡಿ ಲೇಡಿಯ ಮತ್ತೊಂದು ವಿಡಿಯೋ!
Today, Phase 1 of the West Bengal Assembly elections begin. I would request all those who are voters in the seats polling today to exercise their franchise in record numbers.
— Narendra Modi (@narendramodi)March 27, 2021

ಮೊದಲ ಹಂತದಲ್ಲಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಿಗೆ, ಅಸ್ಸಾಂನ 126 ಕ್ಷೇತ್ರಗಳ ಪೈಕಿ 47 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಸಿಎಂ ಸರ್ಬಾನಂದ ಸೊನೊವಾಲ್ ಅವರು ಸೇರಿದಂತೆ ಹಲವರ ಭವಿಷ್ಯ ನಿರ್ಧಾರವಾಗಲಿದೆ. ಎರಡೂ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಒಟ್ಟು 1.54 ಕೋಟಿ ಮತದಾರರು 10,288 ಮತಗಟ್ಟೆಗಳಲ್ಲಿ ಮತಚಲಾವಣೆ ಮಾಡಲಿದ್ದಾರೆ.
ಚುನಾವಣಾ ಭದ್ರತಾ ಕಾರ್ಯಗಳಿಗೆ 684 ಕಂಪನಿ ಕೇಂದ್ರೀಯ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಪ್ರತಿ ಕಂಪನಿಯಲ್ಲಿ 100 ಸಿಬ್ಬಂದಿ ಇದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಕರೊನಾ 2ನೇ ಅಲೆ ಬೆನ್ನಲ್ಲೇ ಹೊರಬಿದ್ದ ಹೊಸ ಸಂಶೋಧನಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ!

ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ

ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fifteen =
Remember me
