ದಿಸ್ಪುರ್:ಅಸ್ಸಾಂ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಬಿಜೆಪಿ ಶಾಸಕರದ್ದು ಎನ್ನಲಾದ ಜೀಪಿನಲ್ಲಿ ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​ (ಇವಿಎಂ) ಸಾಗಿಸುತ್ತಿರುವ ಆರೋಪ ಕೇಳಿಬಂದಿದೆ.
ಪಥರ್​ಕಂಡಿ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣೆಂದು ಪೌಲ್​ ವಿರುದ್ಧ ಆರೋಪ ಕೇಳಿಬಂದಿದೆ. ವಿಡಿಯೋವನ್ನು ಅಸ್ಸಾಂ ಮೂಲದ ಹಿರಿಯ ಪತ್ರಕರ್ತ ಅಟಾನು ಭುಯಾನ್​ ಎಂಬುವರು ಟ್ವೀಟ್​ ಮಾಡಿದ್ದು, ಈ ಘಟನೆಯಿಂದ ಪಥರ್​ಕಂಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ವಿಡಿಯೋದಲ್ಲಿ ಎಎಸ್​ 10ಬಿ 0022 ನಂಬರ್​ನ ಬಿಳಿ ಬಣ್ಣದ ಜೀಪ್​ನಲ್ಲಿ ಇವಿಎಂ ಇರುವುದನ್ನು ನೋಡಬಹುದಾಗಿದೆ. ಆ ಜೀಪ್​ ಶಾಸಕ ಕೃಷ್ಣೆಂದು ಪೌಲ್​ ಅವರಿಗೆ ಸಂಬಂಧಿಸಿದ್ದು ಎಂದು ಜನರು ಕೂಗುವುದನ್ನು ವಿಡಿಯೋದಲ್ಲಿ ಕೇಳಬಹುದು.
ಇದನ್ನೂ ಓದಿರಿ:ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಅರೆಬೆತ್ತಲೆ ಯುವಕ-ಯುವತಿಯರನ್ನು ಥಳಿಸಿದ ಬೆನ್ನಲ್ಲೇ ಮತ್ತೊಂದು ಘಟನೆ
ಬಿಜೆಪಿ ಕಾಲೆಳೆದ ಕಾಂಗ್ರೆಸ್​ಚುನಾವಣೆಯನ್ನೇ ಕಳವು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ. ಘಟನೆ ಕುರಿತು ಅನೇಕ ನಾಯಕರು ಟ್ವೀಟ್​ ಮಾಡಿದ್ದು, ಇವಿಎಂ ಪತ್ತೆಯಾಗಿದ್ದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸೂಕ್ರ ಕ್ರಮ ತೆಗೆದುಕೊಳ್ಳದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಎಚ್ಚರಿಕೆ ಹಾಕಿದ್ದಾರೆ.
ಪ್ರಿಯಾಂಕಾ ವಾದ್ರಾ ವಾಗ್ದಾಳಿಪ್ರತಿ ಬಾರಿ ಚುನಾವಣೆ ನಡೆದಾಗ ಇವಿಎಂ ಸಾಗಿಸುವ ಖಾಸಗಿ ವಾಹನ ಸಿಕ್ಕಿಬೀಳುವ ವಿಡಿಯೋ ವೈರಲ್​ ಆಗುತ್ತದೆ. ಈ ವೇಳೆ ಆಶ್ಚರ್ಯಕರವಲ್ಲದಂತೆ ಈ ಕೆಳಗಿನ ಅಂಶಗಳು ಸಾಮಾನ್ಯವಾಗಿರುತ್ತವೆ ಎಂದು ಮೂರು ಅಂಶಗಳನ್ನು ಪ್ರಿಯಾಂಕಾ ಟ್ವೀಟ್​ ಮಾಡಿದ್ದಾರೆ.1. ಪತ್ತೆಯಾಗುವ ವಾಹನ ಬಿಜೆಪಿ ಅಭ್ಯರ್ಥಿ ಅಥವಾ ಅವರ ಆಪ್ತರಿಗೆ ಸಂಬಂಧಿಸಿದ್ದಾಗಿರುತ್ತದೆ.2. ವಿಡಿಯೋವನ್ನು ಒಂದು ಘಟನೆಯನ್ನಾಗಿ ತೆಗೆದುಕೊಂಡು ಇಡೀ ಪ್ರಕರಣವನ್ನೇ ದಾರಿ ತಪ್ಪಿಸಲಾಗುತ್ತದೆ.3. ಬಿಜೆಪಿ ತನ್ನ ಮಾಧ್ಯಮ ಮೆಷಿನರಿಯನ್ನು ಬಳಸಿಕೊಂಡು ವಿಡಿಯೋವನ್ನು ಬಹಿರಂಗಪಡಿಸಿದವರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತದೆ.
Every time there is an election videos of private vehicles caught transporting EVM’s show up. Unsurprisingly they have the following things in common:
1. The vehicles usually belong to BJP candidates or their associates. ….
1/3https://t.co/s8W9Oc0UcV
— Priyanka Gandhi Vadra (@priyankagandhi)April 2, 2021

ಇದನ್ನೂ ಓದಿರಿ:ಇಂಥವರೂ ಇರ್ತಾರಾ? ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರಿಂದ ತಲೆತಗ್ಗಿಸೋ ಕೃತ್ಯ!
ಇಂತಹ ಅನೇಕ ಘಟನೆಗಳು ಹೊರಬಂದಿದ್ದರೂ ಯಾವುದೂ ಸಹ ತಾರ್ಕಿತ ಅಂತ್ಯ ಕಂಡಿಲ್ಲ ಎಂದು ಪ್ರಿಯಾಂಕಾ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ, ಈ ಘಟನೆ ಬಗ್ಗೆ ಬಿಜೆಪಿಯಾಗಲಿ ಅಥವಾ ಚುನಾವಣಾ ಆಯೋಗವಾಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.(ಏಜೆನ್ಸೀಸ್​)
ನಯನತಾರಾ-ಉದಯನಿಧಿ ಸ್ಟಾಲಿನ್​ ನಡುವೆ ರಹಸ್ಯ ಸಂಬಂಧ? ಹಿರಿಯ ನಟನ ಸ್ಫೋಟಕ ಹೇಳಿಕೆ!

ಕಾಂಪ್ಲೆಕ್ಸ್​ ನಿರ್ಮಾಣ: ಬಾಳೆಹಣ್ಣು ವ್ಯಾಪಾರಿ ಹರಾಜಿನಲ್ಲಿ ಕೂಗಿದ ಮೊತ್ತ ಕೇಳಿದ್ರೆ ಶಾಕ್​ ಆಗೋದು ಖಚಿತ!

ಓದುಗರ ಪ್ರೀತಿ-ವಿಶ್ವಾಸವೇ ದಶ ಶಕ್ತಿ; ವಿಜಯವಾಣಿ ಶತಮಾನೋತ್ಸವ ಆಚರಿಸಲಿ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
