ಗುವಾಹಟ್ಟಿ:ಅಸ್ಸಾಂನಲ್ಲಿ ನಿರಂತರ ಮಳೆ ಸುರಿದ ಕಾರಣ ಪ್ರವಾಹ ಭೀತಿ ಎದುರಾಗಿತ್ತು. ಆದರೆ, ಇಂದು ಪರಿಸ್ಥಿತಿ ಸುಧಾರಿಸಿದೆ. ಭಾರೀ ಮಳೆಗೆ ಆರು ಜನರು ಸಾವನ್ನಪ್ಪಿದ್ದು, 27 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷಕ್ಕೂ ಅಧಿಕ ಜನರು ತೊಂದರೆಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ, ಧುಬ್ರಿ ಜಿಲ್ಲೆಯ ಬಿಲಾಸಿಪಾರಾ ಮತ್ತು ಅಗಾಮೋನಿ ಕಂದಾಯ ವಲಯಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಯೋಗಾಸನ-ಶರೀರ ಮತ್ತು ಮನಸ್ಸಿನ ಅನ್ವೇಷಣೆಯ ಮಾರ್ಗ
ಇದಲ್ಲದೆ, ಗೋಲ್ಪಾರಾದ ಬಲಿಜಾನಾ, ಗೋಲಾಘಾಟ್‌ನ ಬೊಕಾಖಾಟ್, ಶಿವಸಾಗರ್‌ನ ಡೆಮೋವ್ ಮತ್ತು ಗೋಲಾಘಾಟ್‌ನ ಧೆಕಿಯಾಜುಲಿಯಲ್ಲಿ ತಲಾ ಒಬ್ಬರು ಪ್ರವಾಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಳೆಯ ಆರ್ಭಟಕ್ಕೆ ಕೇವಲ ಅಸ್ಸಾಂ ಮಾತ್ರವಲ್ಲದೇ ಮಹಾರಾಷ್ಟ್ರ ಕೂಡ ತತ್ತರಿಸಿ ಹೋಗಿದ್ದು, ವಾಣಿಜ್ಯ ನಗರಿಯ ಹಲವೆಡೆ ಭಾರಿ ಮಳೆಯಾಗಿದೆ. ಸೇತುವೆಯೊಂದು ಮುರಿದುಬಿದ್ದಿದ್ದಲ್ಲದೆ, ಮಳೆ ಅವಾಂತರದಿಂದಾಗಿ ಸುಮಾರು 50 ವಿಮಾನಗಳ ಸಂಚಾರ ರದ್ದುಗೊಂಡಿವೆ. ಥಾಣೆಯ ವಿವಿಧ ಪ್ರದೇಶಗಳಲ್ಲಿ ಕನಿಷ್ಠ 275 ಮನೆಗಳು ಹಾನಿಗೀಡಾಗಿದ್ದು, ಅಂದಾಜು 50 ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸೋಮವಾರ ಬೆಳಗ್ಗೆ 6.30ರ ಹವಾಮಾನ ವರದಿ ಪ್ರಕಾರ ಥಾಣೆಯಲ್ಲಿ ಕಳೆದ 24 ಗಂಟೆಗಳಲ್ಲಿ 120.87 ಮಿ.ಮೀ. ಮಳೆಯಾಗಿದ್ದು, ಅದರಲ್ಲೂ ಸೋಮವಾರ ಬೆಳಗಿನ ಜಾವ 3.30ರಿಂದ 4.30ರ ನಡುವಿನ ಒಂದು ಗಂಟೆಯ ಅವಧಿಯಲ್ಲೇ 45.98 ಮಿ.ಮೀ. ಮಳೆಯಾಗಿದೆ ಎಂದು ಆಪತ್ತು ನಿರ್ವಹಣಾ ಸಮಿತಿ ಮುಖ್ಯಸ್ಥ ಯಾಸಿನ್ ತಡ್ವಿ ತಿಳಿಸಿದ್ದಾರೆ. ಥಾಣೆಯಲ್ಲಿನ ಷಹಪುರ ತಾಲೂಕು ಅತ್ಯಧಿಕ ಬಾಧಿತ ಪ್ರದೇಶವಾಗಿದ್ದು, ಅಲ್ಲಿನ ಗುಜರಾತಿ ಬಾಗ್ ಪ್ರದೇಶದ ಬಾರಂಗಿ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಅಸಂಗಾವ್-ಮಹುರಿ ರಸ್ತೆಯಲ್ಲಿನ ಸೇತುವೆ ಕೊಚ್ಚಿಕೊಂಡು ಹೋಗಿದೆ. ಹನ್ನೆರಡು ಮನೆಗಳು ಭಾಗಶಃ ಕುಸಿದುಬಿದ್ದಿವೆ.
ಗೋತೆನಗರದ ಜಲಾವೃತ ಪ್ರದೇಶದ ಮೂರು ಮನೆಗಳಲ್ಲಿದ್ದ 38 ಮಂದಿಯನ್ನು ರಕ್ಷಿಸಲಾಗಿದೆ. ವಶಿಂದ್ ಪ್ರದೇಶದಲ್ಲೂ 12 ಮಂದಿಯನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಭಿವಂಡಿ ತಾಲೂಕಿನಲ್ಲಿ 40 ಮನೆಗಳಿಗೆ ನೀರು ನುಗ್ಗಿದೆ. ಥಾಣೆ, ಮುಂಬೈ, ಪಾಲ್ಘಾರ್ ಹಾಗೂ ಕೊಂಕಣದ ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ವಿಖ್ರೋಲಿಯ ವೀರ್ ಸಾವರ್ಕರ್ ಮಾರ್ಗದ ಮುನಿಸಿಪಲ್ ಸ್ಕೂಲ್ ಮತ್ತು ಎಂಸಿಎಂಸಿಆರ್ ಪೊವೈನಲ್ಲಿ 24 ಗಂಟೆಗಳಲ್ಲಿ ಅತ್ಯಧಿಕ ಅಂದರೆ 315 ಮಿ.ಮೀ. ಮಳೆ ದಾಖಲಾಗಿದೆ.
ಇದನ್ನೂ ಓದಿ:ಈಶ್ವರಮ್ಮ ಶಾಲೆಯಲ್ಲಿ ಮಂತ್ರಿಮಂಡಲ ರಚನೆ
ಸಿಎಂ ಪರಿಶೀಲನೆ:
ಭಾರಿ ಮಳೆ ಹಾಗೂ ಸಂಬಂಧಿತ ಅವಾಂತರಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈ ಮತ್ತಿತರರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನಗರದಲ್ಲಿನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ರಾಯಗಢ ಕೋಟೆಯಲ್ಲಿ ಮಳೆಯಿಂದಾಗಿ 30ಕ್ಕೂ ಅಧಿಕ ಮಂದಿ ಸಿಕ್ಕಿ ಹಾಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್​ ಗೆದ್ದ ತಂಡಕ್ಕೆ 125 ಕೋಟಿ ರೂ. ಬಹುಮಾನ ಹಂಚಿಕೆ: ಮೀಸಲು ಆಟಗಾರರಿಗೂ ಒಲಿದ ಲಕ್​
ಪ್ರಯಾಣಿಕರ ಪರದಾಟ
ಭಾರಿ ಮಳೆ ಹಿನ್ನೆಲೆಯಲ್ಲಿ 50ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು ಪಡಿಸಲಾಗಿದ್ದು, 27 ವಿಮಾನಗಳನ್ನು ಡೈವರ್ಟ್ ಮಾಡಲಾಗಿತ್ತು. ಟಿಕೆಟ್ ಬುಕ್ ಮಾಡಿಸಿಕೊಂಡಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಪ್ರಯಾಣದ ಕುರಿತ ಸ್ಟೇಟಸ್ ಪರಿಶೀಲಿಸಿಕೊಳ್ಳುವಂತೆ ವೈಮಾನಿಕ ಸಂಸ್ಥೆಗಳು ಸಂದೇಶ ರವಾನಿಸಿವೆ. ದೊಂಬಿವಿಲಿಯಲ್ಲಿ ರೈಲು ಹಳಿ ಬಹುತೇಕ ಮುಳುಗಿದ್ದು, ಪ್ರಯಾಣಿಕರು ರೈಲಿಗಾಗಿ ಕಾಯುವಂತಾಯಿತು. ಮಳೆಯ ತೀವ್ರತೆಗೆ ಅಟ್ಗಾಂವ್ ಪ್ರದೇಶದಲ್ಲಿನ ರೈಲ್ವೆ ಹಳಿ ಬದಿಯ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿದೆ. ಪರಿಣಾಮವಾಗಿ ಥಾಣೆಯ ಕಸಾರ ಮತ್ತು ಟಿಟ್ವಾಲಾ ಸ್ಟೇಷನ್​ಗಳ ಮಧ್ಯೆ ರೈಲು ಸಂಚಾರ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಅಭಿಷೇಕ್​ ಶರ್ಮ ಶತಕಕ್ಕೆ ಗಿಲ್ ಕೊಟ್ಟ ಈ ಗಿಫ್ಟ್​​ ಕಾರಣ! ಇದರಿಂದಲೇ ಒಲಿಯಿತು ‘ಅಭಿ’ಗೆ ಅದೃಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eleven =
Remember me
