ದಿಸ್ಪುರ್:ಕರ್ತವ್ಯದಲ್ಲಿರುವ ಪತ್ರಕರ್ತರನ್ನು ಕಂಡೊಡನೆ ‘ಮಾಡೋಕ್ಕೆ ಕೆಲಸವಿಲ್ಲ’ ಎಂದು ಕಿಚಾಯಿಸುತ್ತ ಮೈಮೇಲೆ ಹಾವು ಬಿದ್ದಂತೆ ವರ್ತಿಸುವ, ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳಿಗೆ ಪ್ರತಿಕ್ರಿಯಿಸುವಾಗ ಅಸಂವಿಧಾನಿಕ ಪದ ಬಳಕೆ ಮಾಡುವವರನ್ನು ಎಲ್ಲೆಡೆ ಕಾಣಬಹುದು. ಆದರೆ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ಕಾಣಬಹುದು. ಇದಕ್ಕೆ ಇಲ್ಲೊಂದು ಉದಾಹರಣೆಯಿದೆ. ಅಸ್ಸಾಂ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಪರಿಸ್ಥಿತಿಯ ತೀವ್ರತೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು ಆಯ ತಪ್ಪಿ ನದಿಗೆ ಬಿದ್ದಿದ್ದಾರೆ. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಟ್ರಂಪ್​ರನ್ನು ಜಗನ್ನಾಥ ದೇವರೇ ರಕ್ಷಿಸಿದ್ದು: ಇಸ್ಕಾನ್​
ಕ್ಯಾಮರಾಗೆ ದೃಶ್ಯ ತೋರಿಸುತ್ತ ವಿವರಿಸುತ್ತಿದ್ದ ವರದಿಗಾರ ಹಿಮ್ಮುಖವಾಗಿ ಚಲಿಸಿದ್ದಾರೆ. ಆಗ ಅವರು ನದಿಯ ಪಕ್ಕದಲ್ಲಿ ನಿಂತಿದ್ದಾಗ ಒದ್ದೆಯಾದ ಕೆಸರಿನಿಂದಾಗಿ ಸಮತೋಲನ ಕಳೆದುಕೊಂಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ.
ಆಯ ತಪ್ಪಿ ಆತ ನೀರಿಗೆ ಬಿದ್ದಿದ್ದರಿಂದ ತನ್ನ ಲೋಗೋ, ಮೈಕ್ರೊಫೋನ್ ಸಹ ನೀರಿಗೆ ಬಿದ್ದಿದೆ. ಆದರೆ ಅವರಿಗೆ ಈಜು ಬರುತ್ತಿದ್ದ ಕಾರಣ ನದಿಯಿಂದ ಈಜಿ ದಡ ಸೇರಿದ್ದಾರೆ. ಆಗ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.
ಪತ್ರಕರ್ತ ನದಿಗೆ ಬಿದ್ದ ಈ ವೀಡಿಯೊ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. X ನಲ್ಲಿನ ಜನರು ಇದನ್ನು ವ್ಯಾಪಕವಾಗಿ ಶೇರ್​ ಮಾಡುತ್ತಿದ್ದಾರೆ.
ಇನ್ನು ಭಾರಿ ಮಳೆಯಿಂದಾಗಿ ಅಸ್ಸಾಂನ 18 ಜಿಲ್ಲೆಗಳು ಜಲಾವೃತಗೊಂಡಿವೆ. ಕ್ಯಾಚಾರ್, ನಲ್ಬರಿ, ಕಾಮ್ರೂಪ್, ಗೋಲಾಘಾಟ್, ಮೋರಿಗಾಂವ್, ಚಿರಾಂಗ್, ದಿಬ್ರುಗಢ್, ಧುಬ್ರಿ , ಗೋಲ್‌ಪಾರಾ, ನಾಗಾಂವ್, ಕರೀಮ್‌ಗಂಜ್, ಕಮ್ರೂಪ್ (ಎಂ), ಧೇಮಾಜಿ, ಮಜುಲಿ, ದರ್ರಾಂಗ್, ಶಿವಸಾಗರ್, ಜೋರ್ಹತ್, ಬಿಸ್ವನಾಥ್ ಜಿಲ್ಲೆಗಳ ಜನರು ಪ್ರವಾಹದಿಂದ ತತ್ತರಿಸಿಹೋಗಿದ್ದಾರೆ.
ಕ್ಯೂಆರ್​ ಕೋಡ್​ ಬಳಸಿ ಕಾಶಿ ವಿಶ್ವನಾಥ ದೇಗುಲ ಪ್ರವೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
