ಅಸ್ಸಾಂ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಸ್ಸಾಂ ರಾಜ್ಯ ಸರ್ಕಾರವು ಉಚಿತ ಸ್ಕೂಟರ್ ನೀಡಲು ನಿರ್ಧರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಶರ್ಮಾ ಅವರು ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಮೆರಿಟ್ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟರ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಅಸ್ಸಾಂನಲ್ಲಿ 9ನೇ ತರಗತಿಯ 3.78 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
12ನೇ ತರಗತಿ ಪರೀಕ್ಷೆಯಲ್ಲಿ ಶೇ.60 ಅಂಕ ಪಡೆದ ಬಾಲಕಿಯರು ಮತ್ತು ಶೇ.75 ಅಂಕ ಪಡೆದ ಬಾಲಕರಿಗೆ ಉಚಿತ ಸ್ಕೂಟರ್ ವಿತರಿಸಲಾಗುವುದು ಎಂದು ಅಸ್ಸಾಂ ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲಾ ಬರೂಹ್ ಹೇಳಿದ್ದಾರೆ. 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಸಚಿವ ಸಂಪುಟವು ಇದಕ್ಕಾಗಿ ರೂ.167 ಕೋಟಿಗಳನ್ನು ನಿಗದಿಪಡಿಸಿದೆ ಎಂದು ಪ್ರಸ್ತಾಪಿಸಿದರು.  ಇದಲ್ಲದೇ ಸೆಪ್ಟೆಂಬರ್‌ನಿಂದ ತಿಂಗಳಿಗೆ 1250 ರೂಪಾಯಿಯಂತೆ 7 ಲಕ್ಷ ಜನರಿಗೆ ಆರ್ಥಿಕ ನೆರವನ್ನು ಅಸ್ಸಾಂ ಸರ್ಕಾರ ಒದಗಿಸಲಿದೆ.
ಇದನ್ನೂ ಓದಿ:ಕಚಗುಳಿ ಇಟ್ಟಾಗ ನಗು ಬರುವುದು ಯಾಕೆ ಗೊತ್ತಾ?
ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲು ಕ್ರಮಕೈಗೊಳ್ಳುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಅಸ್ಸಾಂ ರಾಜ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಶೇ.27ರಷ್ಟು ಸೀಟುಗಳನ್ನು ಒಬಿಸಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಅಸ್ಸಾಂನಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹಿಮಂತ ಬಿಸ್ವಶರ್ಮಾ ಹೇಳಿದ್ದಾರೆ.
ಮುಖದ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಸಂತ್ರಸ್ತನ ಪಾದ ತೊಳೆದ ಮಧ್ಯಪದೇಶ ಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
